1. ಸುದ್ದಿಗಳು

ದೇಶದ ಮೊದಲ Apple Store ಮುಂಬೈನಲ್ಲಿ ಉದ್ಘಾಟನೆ! ಇಲ್ಲಿದೆ ಇದರ ವಿಶೇಷತೆ…

Kalmesh T
Kalmesh T
India's first Apple Store opens in Mumbai

India's first Apple Store opens in Mumbai: ಅತ್ಯಂತ ಜನಪ್ರಿಯ ಹಾಗೂ ದುಬಾರಿ ಬೆಲೆಯ ಆ್ಯಪಲ್ ಮೊಬೈಲ್‌ ಕಂಪನಿಯೂ ಭಾರತದಲ್ಲಿ ತನ್ನ ಮೊದಲ ಸ್ಟೋರ್‌ ಉದ್ಘಾಟನೆ ಮಾಡಿದೆ.

ಆ್ಯಪಲ್ ಕಂಪನಿಯ ಉತ್ಪನ್ನಗಳು ಭಾರತವಷ್ಟೇ ಅಲ್ಲದೇ ಜಗತ್ತಿನಾದ್ಯಂತ ಬಹತೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಈಗಲೂ ಕೂಡ ಜನರು ಇವನ್ನು ಮುಗಿಬಿದ್ದು ಖರೀದಿಸುತ್ತಾರೆ.

ದುಬಾರಿ ಬೆಲೆ ಇದ್ದರೂ ಆ್ಯಪಲ್ ತನ್ನದೇ ಒಂದು ಸ್ಟ್ಯಾಂಡರ್ಡ್‌ನ್ನು ಕಾಯ್ದುಕೊಂಡಿದೆ. ಇದೀಗ ಇದರ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ (Apple Store) ಮುಂಬೈನಲ್ಲಿ (Mumbai) ಉದ್ಘಾಟನೆಯಾಗಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್ ಏಪ್ರಿಲ್ 18ರಂದು ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಸೇವೆ ನೀಡಲು ಆರಂಭಿಸಿದೆ.

ಮಳಿಗೆಗೆ ಆಗಮಿಸುವ ಗ್ರಾಹಕರು ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಈ ಸ್ಟೋರ್‌ಗೆ ಫ್ಯಾಕ್ಟರಿಯಿಂದ ನೇರವಾಗಿ ಉತ್ಪನ್ನಗಳು ಆಗಮಿಸುವುದರಿಂದ ಮಾರುಕಟ್ಟೆಯ ಬೆಲೆಗಿಂತ ಅಗ್ಗದಲ್ಲಿ ಉತ್ಪನ್ನಗಳು ಗ್ರಾಹಕರ ಕೈಗೆಟುಕಲಿದೆ.

ಆ್ಯಪಲ್ ಸ್ಟೋರ್‌ನ ವಿಶೇಷತೆಗಳೇನು? features of Apple Store?

ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನ ಮೂಲೆಯಲ್ಲಿ ಬೃಹತ್ 2 ಅಂತಸ್ತಿನ ಗಾಜಿನಿಂದ ಮಾಡಲಾದ ಸ್ಟೋರ್ ಇದಾಗಿದೆ. ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಆ್ಯಪಲ್ ಉತ್ಪನ್ನಗಳು ಇಲ್ಲಿ ದೊರೆಯಲಿದೆ.

ಮ್ಯಾಕ್‌ಬುಕ್, ಐಫೋನ್ (iPhone), ಐಪ್ಯಾಡ್, ವಾಚ್‌ಗಳನ್ನು ಹೊರತುಪಡಿಸಿ ಸ್ಟೋರ್ ಆ್ಯಪಲ್ ಆರ್ಕೇಡ್, ಆ್ಯಪಲ್ ಹೋಮ್‌ಪಾಡ್, ಆ್ಯಪಲ್ ಮ್ಯೂಸಿಕ್ ಹಾಗೂ ಆ್ಯಪಲ್ ಟಿವಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಮುಂಬೈ ಆ್ಯಪಲ್ ಸ್ಟೋರ್‌ನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ 100 ಸಿಬ್ಬಂದಿಯಿದ್ದಾರೆ. ಅದರಲ್ಲಿ ಶೇ.50 ರಷ್ಟು ಸಿಬ್ಬಂದಿ ಮಹಿಳೆಯರೇ ಇದ್ದಾರೆ.

ಮುಖ್ಯವಾಗಿ ಕಂಪನಿ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದ 18 ಭಾಷೆಗಳನ್ನು ಒಳಗೊಂಡಂತೆ 25 ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಿದೆ.

ಇದೀಗ ಅಮೆರಿಕ ಮೂಲದ ಆ್ಯಪಲ್ ಕಂಪನಿಯ ಮೊದಲ ಮಳಿಗೆ ಭಾರತದಲ್ಲಿ ಏಪ್ರಿಲ್ 18ರಂದು ಮುಂಬೈನಲ್ಲಿ ಪ್ರಾರಂಭವಾಗಿದ್ದು, 2ನೇ ಮಳಿಗೆ ಏಪ್ರಿಲ್ 20ರಂದು ದೆಹಲಿಯಲ್ಲಿ (Delhi) ಆರಂಭಗೊಳ್ಳಲಿದೆ.

ಈ ಎರಡೂ ಮಳಿಗೆಗಳ ಉದ್ಘಾಟನೆಗೆ ಸಂಸ್ಥೆಯ ಸಿಇಒ ಟಿಮ್ ಕುಕ್ (Tim Cook) ಸ್ವತಃ ಭಾರತಕ್ಕೆ ಆಗಮಿಸಿದ್ದಾರೆ.

ಆನ್‌ಲೈನ್‌ನಲ್ಲಿ ಅಗ್ನಿವೀರ್ ಸೇರಿದಂತೆ ಸೇನಾ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಾರಂಭ!

ಆ್ಯಪಲ್ ಕಂಪನಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಮಾರಾಟ ಹಾಗೂ ಸೇವೆಯನ್ನು ನೀಡುತ್ತಿದ್ದರೂ ಕಂಪನಿಯ ಮಾನದಂಡಕ್ಕೆ ಪೂರಕವಾದ ಸ್ವಂತ ಮಳಿಗೆ ದೇಶದಲ್ಲಿ ಹೊಂದರಲಿಲ್ಲ.

ಇದೀಗ ಭಾರತದಲ್ಲಿ ಪ್ರಾರಂಭವಾಗುತ್ತಿರುವ ಆ್ಯಪಲ್ ಸ್ಟೋರ್‌ಗಳಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.

ಆ್ಯಪಲ್ ಸ್ಟೋರ್ನಲ್ಲಿ ಕನ್ನಡದಲ್ಲೂ ವ್ಯವಹಾರ

ಮುಂಬೈನ ಆ್ಯಪಲ್ ಬಿಕೆಸಿ ಸ್ಟೋರ್ನ ವಿಶೇಷತೆ ಎಂದರೆ ನೀವು ಕನ್ನಡದಲ್ಲೂ ಹೋಗಿ ಶಾಪಿಂಗ್ ಮಾಡಿ ಬರಬಹುದು. ಈ ಶೋರೂಮ್ನಲ್ಲಿ 100ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಇದ್ದು, ಇವರಲ್ಲಿ 20 ಭಾಷಿಕರು ಇದ್ದಾರೆ.

ಇಂಗ್ಲೀಷ್, ಹಿಂದಿಯಷ್ಟೇ ಅಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಪಂಜಾಬಿ, ಬಂಗಾಳಿ ಮೊದಲಾದ ಪ್ರಾದೇಶಿಕ ಭಾಷೆಗಳಲ್ಲಿ ಯಾರಾದರೂ ಹೋಗಿ ಅಲ್ಲಿಯ ಸಿಬ್ಬಂದಿ ಜೊತೆ ಸಂವಾದ ನಡೆಸಬಹುದು.

Published On: 18 April 2023, 12:03 PM English Summary: India's first Apple Store opens in Mumbai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.