1. ಸುದ್ದಿಗಳು

ಅಕ್ಷರ್-ಅಶ್ವಿನ್ ಸ್ಪೀನ್ ಮೋಡಿ- ಭಾರತಕ್ಕೆ 317 ರನ್ ಜಯ

ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವು 317 ರನ್ಗಳ ಅಂತರದಿಂದ ಗೆಲವು ಸಾಧಿಸಿದೆ. ಈ ಮೂಲಕ ಮೊದಲ ಪಂದ್ಯದಲ್ಲಿ 227  ರನ್‌ಗಳಿಂದ ಹೀನಾಯ ಸೋಲನುಭವಿಸಿದ್ದ ಕೊಹ್ಲಿ ಪಡೆ ಆಂಗ್ಲರ ವಿರುದ್ಧ ಸೇಡು ತೀರಿಸಿಕೊಂಡಿದೆ.

429 ರನ್ ಗಳ ಗುರಿಯೊಂದಿಗೆ ಮಂಗಳವಾರ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿತು. ಜೋ ರೂಟ್ 33, ಜ್ಯಾಕ್ ಲೀಚ್ 00, ಬೆನ್ ಸ್ಟೋಕ್ 8, ಒಲಿ ಪೋಪ್ 12, ಬೆನ್ ಪೋಕ್ಸ್ 2, ಒಲಿ ಸ್ಟೋನ್ 00, ಮೋಯಿನ್ ಅಲಿ, 43, ಬ್ರಾಡ್ ಔಟಾಗದೆ 5 ರನ್ ಗಳಿಸಿದರು.ಇಂಗ್ಲೆಂಡ್ ಎರಡನೇ ಇನ್ಸಿಂಗ್ಸ್ ನಲ್ಲಿ 54.4 ಓವರ್ ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಗಿದೆ.
ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಭಾರತ ೧-೧ ಸಮಬಲ ಸಾಧಿಸಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿದೆ. ಗೆಲುವು ಸಾಧಿಸುತ್ತಿದ್ದಂತೆ ಚಿದಂಬರಂ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿ ಪ್ರೇಕ್ಷಕರು ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು.
ಐಸಿಸಿ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಲು ಭಾರತದ ಪಾಲಿಗೆ ಈ ಪಂದ್ಯ ಅತ್ಯಂತ ಮುಖ್ಯವಾಗಿತ್ತು.
ಈ ಗೆಲುವಿನಿಂದಾಗಿ ಭಾರತ ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.ಈ ಮೂಲಕ ಮುಂದಿನ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನೂ ಹೆಚ್ಚಿಸಿಕೊಂಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಕೊಹ್ಲಿ ಪಡೆ ಸಂಘಟಿತ ಹೋರಾಟದ ಮೂಲಕ ಚೆನ್ನೈನಲ್ಲಿ ಕೊಹ್ಲಿ ಪಡೆ ಅದ್ವಿತೀಯ ಸಾಧನೆ ಮಾಡಿದೆ.
ಪಂದ್ಯದ ಗೆಲುವಿಗೆ 482  ರನ್‌ಗಳ ಬೃಹತ್ ಮೊತ್ತದ ಸವಾಲಿನ ಬೆನ್ನತ್ತಿದ್ದ ಇಂಗ್ಲೆಂಡ್ ಸೋಮವಾರ  53 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಇಂದು 4ನೇ ದಿನದ ಆಟ ಮುಂದುವರೆಸಿದ ಪ್ರವಾಸಿ ತಂಡ ಸ್ಪಿನ್ ಬೌಲಿಂಗ್ ದಾಳಿಗೆ ತರೆಗೆಲೆಗಳಂತೆ ವಿಕೆಟ್ ಒಪ್ಪಿಸಿ ಇಂಗ್ಲೆಂಡ್ ಆಟಗಾರರು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಅಂತಿಮವಾಗಿ 2ನೇ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಸರ್ವಪತನ ಕಂಡು ಇಂಗ್ಲೆಂಡ್ ಇನ್ನು ಒಂದೂವರೆ ದಿವಸ ಆಟ ಬಾಕಿ ಇರುವಾಗಲೇ ಇಂಗ್ಲೆಂಡ್ 317 ರನ್‌ಗಳಿಂದ ಹೀನಾಯ ಸೋಲಿಗೆ ಶರಣಾಯಿತು.

ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಗೆದ್ದ ಬೆನ್ನಲ್ಲೆ ಧೋನಿ ದಾಖಲೆ ಸರಿಗಟ್ಟಿದ ಕೊಹ್ಲಿ!

ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿಯೇ ಎಂಎಸ್‌ ನಾಯಕತ್ವದಲ್ಲಿ ಇಂಡಿಯಾ ಮೊಟ್ಟ ಮೊದಲ ಬಾರಿ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿತ್ತು. ಆ ಮೂಲಕ ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ಜಾಗತಿಕ ಮಟ್ಟದಲ್ಲಿ ಧೋನಿ ಅತ್ಯುತ್ತಮ ಸ್ಥಾನಮಾನ ತಂದುಕೊಟ್ಟಿದ್ದರು.

21ನೇ ಪಂದ್ಯದ ಗೆಲುವಿನೊಂದಿಗೆ ಕೊಹ್ಲಿ, ತವರು ನೆಲದಲ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್‌ ಧೋನಿಯೊಂದಿಗೆ ಜಂಟಿ ದಾಖಲೆ ಮಾಡಿದ್ದಾರೆ.

Published On: 16 February 2021, 08:29 PM English Summary: India beat England by 317 runs in the 2nd test match

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.