1. ಸುದ್ದಿಗಳು

ಮಿಸ್ಡ್ ಕಾಲ್ ಕೊಡಿ ಗ್ಯಾಸ್ ಬುಕ್ ಮಾಡಿ

Indane gas

ಗ್ಯಾಸ್ ಬುಕಿಂಗ್ ಮಾಡುವುದು ನಿಮಗೆ ಕಷ್ಟವಾಗುತ್ತಿದೆಯಾ? ಹಾಗಾದರೆ ಇನ್ನು ಮುಂದೆ ಆ ಚಿಂತೆ ಬಿಟ್ಟು ಬಿಡಿ ಏಕೆಂದರೆ ಇನ್ನು ಮುಂದೆ ನೀವು ಕೇವಲ ಮಿಸ್ ಕಾಲ್ ಮೂಲಕ ಗ್ಯಾಸ್ ಬುಕ್ ಮಾಡಬಹುದು ಗೊತ್ತಾ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಗ್ರಾಹಕರು ಈಗ ಕಂಪನಿಗೆ ಕೇವಲ ಮಿಸ್ ಕಾಲ್ ಕೊಡುವ ಮೂಲಕ ಬುಕ್ ಮಾಡಬಹುದಾಗಿದೆ. ಭಾರತದಾದ್ಯಂತ ಇಂಡೇನ್ ಗ್ಯಾಸ್ ಗ್ರಾಹಕರು ಸಿಲಿಂಡರ್ ಬುಕಿಂಗ್ ಮಾಡಲು 8454955555 ಸಂಖ್ಯೆಯನ್ನು ಬಳಸಬಹುದು.

ಮಿಸ್ ಕಾಲ್ ಮೂಲಕ ನಾವು ಬುಕಿಂಗ್ ಅನ್ನು ವೇಗವಾಗಿ ಮಾಡಬಹುದು, ಈ ಸೇವೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಅನುಕೂಲವಾಗಲಿದೆ, ಹಾಗೂ ಅನಕ್ಷರಸ್ತರಿಗೂ ಇದು ತುಂಬಾ ಸರಳವಾದ ಕೆಲಸವಾಗಿದೆ.

ಕೇಂದ್ರ ತೈಲ ಸಚಿವರಾದ ಧರ್ಮೇಂದ್ರ ಪ್ರದಾನ್ ಅವರು ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಈ ಸೇವೆಯನ್ನು ಉದ್ಘಾಟಿಸಿದರು.

;

2014 ಕಿಂತ ಮುಂಚೆ ನಮ್ಮ ದೇಶದಲ್ಲಿ ಸುಮಾರು 13 ಕೋಟಿ ಕನೆಕ್ಷನ್ ಗಳಿದ್ದವು  ಹಾಗೂ ಮುಂದಿನ 6 ವರ್ಷಗಳಲ್ಲಿ ಸುಮಾರು 30 ಕೋಟಿ ಕನೆಕ್ಷನ್ ಗಳು ಇವೆ ಎಂದು ಸಚಿವರು ಹೇಳಿದರು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.