1. ಸುದ್ದಿಗಳು

ಅಡಿಕೆ ಆಮದು ಹೆಚ್ಚಳ: ರೈತರ ಹಿತಾಸಕ್ತಿ ಕಾಪಾಡುವಂತೆ ಒತ್ತಾಯ

Kalmesh T
Kalmesh T
Increase in import of arecanut: Urge to protect interest of farmers

1 . ಅಡಿಕೆ ಆಮದು ಹೆಚ್ಚಳ: ರೈತರ ಹಿತಾಸಕ್ತಿ ಕಾಪಾಡುವಂತೆ ಒತ್ತಾಯ

2 . ಮೈಸೂರಿನಲ್ಲಿ ಇಂದಿನಿಂದ "ಗೆಡ್ಡೆ ಗೆಣಸು ಮೇಳ" ಆರಂಭ!

3 . "ಅತ್ಯುತ್ತಮ ಕೃಷಿ ಲೇಖನ" ಪ್ರಶಸ್ತಿ ಪಡೆದುಕೊಂಡ ಕೃಷಿ ಜಾಗರಣದ ಲೇಖನ!

4 . ಕಿಸಾನ್ ಡ್ರೋನ್ ಪ್ರಚಾರಕ್ಕಾಗಿ 127 ಕೋಟಿ ಬಿಡುಗಡೆ

5 . ಸಾವಯವ ಗೊಬ್ಬರಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರದ ಚಿಂತನೆ

6 . ವಿದ್ಯುತ್ ಕಳ್ಳತನ ನಿಯಂತ್ರಿಸಲು ಭಾರತ ಸರ್ಕಾರದ ಕ್ರಮ

7 . ನ್ಯಾನೊ-ಡಿಎಪಿ ವಾಣಿಜ್ಯ ಬಳಕೆಗಾಗಿ ಸರ್ಕಾರದ ಅನುಮೋದನೆ

1-ONE

ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ದೇಶದ ರೈತರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ದೇಶದ ರೈತರ ಹಿತಾಸಕ್ತಿಯನ್ನ ಕಾಪಾಡಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.

ಈ ಸಂಬಂಧಪಟ್ಟಂತೆ ನಿರಂತರ ಟ್ವೀಟ್ ಮಾಡಿರುವ ಜೆಡಿಎಸ್, 2022-23ರ ಆರ್ಥಿಕ ವರ್ಷದಲ್ಲಿ 61 ಸಾವಿರದ 450 ಟನ್ ಅಡಿಕೆ ಆಮದಾಗಿರುವುದಾಗಿ ತಿಳಿಸಿದೆ.

2-TWO

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಇಂದಿನಿಂದ “ಗೆಡ್ಡೆ ಗೆಣಸು ಮೇಳ”ವನ್ನ ಆಯೋಜನೆ ಮಾಡಲಾಗಿದೆ.

ಬೆಳಿಗ್ಗೆ 10:30 ರಿಂದ ಸಂಜೆ 8 ಗಂಟೆಯವರೆಗೆ ಮೇಳ ನಡೆಯಲಿದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಅಪರೂಪದ ಗೆಡ್ಡೆ ಗೆಣಸುಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.

ಗೆಡ್ಡೆ ಗೆಣಸುಗಳ ಅಡುಗೆ ಸ್ಪರ್ಧೆ ಕೂಡ ಆಯೋಜನೆ ಮಾಡಲಾಗಿದ್ದು, ಆಸಕ್ತರು ಗೆಡ್ಡೆ ಗೆಣಸುಗಳಿಂದ ಮಾಡಿದ ಅಡುಗೆಯನ್ನು ಫೆಬ್ರವರಿ 12ರ ಭಾನುವಾರ 12.00 ಗಂಟೆಗೆ ತರುವಂತೆ ಆಯೋಜಕರು ತಿಳಿಸಿದ್ದಾರೆ.

3-Three

ಕೃಷಿ ಜಾಗರಣದ ಮಲಯಾಳಂನ ಮ್ಯಾಗಜಿನ್‌ನಲ್ಲಿ ಪ್ರಕಟಗೊಂಡಿದ್ದ ರೈತರೊಬ್ಬರ ಯಶಸ್ಸಿನ ವರದಿಗೆ ಕೇರಳ ರಾಜ್ಯ ಸರ್ಕಾರದ ವತಿಯಿಂದ ಮುದ್ರಣ ಮಾಧ್ಯಮದಲ್ಲಿ "ಅತ್ಯುತ್ತಮ ಕೃಷಿ ಲೇಖನ" ಪ್ರಶಸ್ತಿ ದೊರೆತಿದೆ.

ಕೇರಳ ಮೂಲದ ಡೈರಿ ಅಧಿಕಾರಿ ಎಂ.ವಿ. ಜಯನ್ ಅವರು ಕೃಷಿ ಜಾಗರಣಕ್ಕೆ ಬರೆದ ಲೇಖನಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಡೈರಿ ಫೆಸ್ಟ್‌ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

4-Four

ಕಿಸಾನ್ ಡ್ರೋನ್ ಪ್ರಚಾರಕ್ಕಾಗಿ 127 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

ರೈತರಿಗೆ ಡ್ರೋನ್ ಸೇವೆಗಳನ್ನು ಒದಗಿಸಲು ಸಬ್ಸಿಡಿಯಲ್ಲಿ 300 ಕ್ಕೂ ಹೆಚ್ಚು ಕಿಸಾನ್ ಡ್ರೋನ್‌ಗಳನ್ನು ರೈತರಿಗೆ ಸರಬರಾಜು ಮಾಡಲು ಮತ್ತು 1500 ಕ್ಕೂ ಹೆಚ್ಚು ಕಿಸಾನ್ ಡ್ರೋನ್ CHC ಗಳನ್ನು ಸ್ಥಾಪಿಸಲು

ವಿವಿಧ ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ

5-Five

ದೇಶದಲ್ಲಿ ಸಾವಯವ ಕೃಷಿ ಉತ್ತೇಜಿಸಲು ಸರ್ಕಾರವು ಚಿಂತನೆ ನಡೆಸಿದೆ. ಇದಕ್ಕಾಗಿ ಮೀಸಲಾದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ  ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

ಪರಂಪರಾಗತ ಕೃಷಿ ವಿಕಾಸ ಯೋಜನೆ ಮತ್ತು ಮಿಷನ್ ಸಾವಯವ ಮೌಲ್ಯ ಸರಪಳಿ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ, ಸಾವಯವ ಕೃಷಿಯನ್ನು ಕೈಗೊಳ್ಳಲು ರೈತರಿಗೆ ಪ್ರಾಥಮಿಕವಾಗಿ ಪ್ರೋತ್ಸಾಹ ನೀಡಲಾಗುತ್ತದೆ.

ಸಾವಯವ ಗೊಬ್ಬರಗಳ ಕೃಷಿ ಉತ್ಪಾದನೆ ಮತ್ತು ಅದರ ಬಳಕೆಯ ಬಗ್ಗೆ ರೈತರಿಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಇದಕ್ಕಾಗಿ  667 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

6- Six

ವಿದ್ಯುತ್ ಕಳ್ಳತನವನ್ನು ನಿಯಂತ್ರಿಸಲು ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೃತಕ ಬುದ್ಧಿಮತ್ತೆ ಮೂಲಕ ಕಳ್ಳತನದ ಪ್ರಕರಣಗಳನ್ನು ಪತ್ತೆಹಚ್ಚಲು ಸ್ಮಾರ್ಟ್ ಮೀಟರ್‌ಗಳನ್ನ ಬಳಸಲಾಗುವುದು ಎಂದು ತಿಳಿಸಿದೆ.

ಮಾರ್ಚ್ 2025 ರೊಳಗೆ 25 ಕೋಟಿ ಗ್ರಾಹಕರಿಗೆ ಪ್ರಿ-ಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಸ್ಥಾಪಿಸಲು ಡಿಸ್ಕಾಂಗಳಿಗೆ ಹಣಕಾಸಿನ ನೆರವು ನೀಡಲಾಗುವುದು.

ಕಳ್ಳತನ ಅಥವಾ ಅನಧಿಕೃತ ಬಳಕೆಯನ್ನು ತಡೆಗಟ್ಟಲು ಹಾಗೂ ವಿದ್ಯುತ್ ಸ್ಥಾವರಕ್ಕೆ ಆಗುವ ಹಾನಿ ತಪ್ಪಿಸಲು ಕೂಡ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

7- Seven

ನ್ಯಾನೊ-ಡಿಎಪಿ ವಾಣಿಜ್ಯ ಬಳಕೆಗಾಗಿ ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ. ಮುಂಬರುವ ಖಾರಿಫ್ ಬಿತ್ತನೆ ಋತುವಿನಲ್ಲಿ ನ್ಯಾನೋ-ಡಿಎಪಿ ವಾಣಿಜ್ಯ ಬಿಡುಗಡೆಗೆ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.  

ನಮಸ್ಕಾರ…

Published On: 11 February 2023, 05:42 PM English Summary: Increase in import of arecanut: Urge to protect interest of farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.