1. ಸುದ್ದಿಗಳು

ಐಟಿ ರಿಟರ್ನ್ಸ್‌, ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯ ಅವಧಿ ಮತ್ತೆ ವಿಸ್ತರಣೆ..!

ಕೊರೋನಾ ಸೋಂಕಿನಿಂದಾಗಿ ಜನರು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು ಮತ್ತೆ20121 ರ ಫೆಬ್ರವರಿ 15ರವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ತೆರಿಗೆ ಇಲಾಖೆ ತಿಳಿಸಿದೆ.

ಕೊರೊನಾ ಸಂಕಷ್ಟದಲ್ಲಿ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ಉದ್ದೇಶದಿಂದ  ಡಿಸೆಂಬರ್‌ 31ರವರೆಗೂ ಇದ್ದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಅವಧಿಯನ್ನು ಜನವರಿ 10, 2021ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಇನ್ನು, ತೆರಿಗೆ ಪಾವತಿಸದ ತೆರಿಗೆ ಪಾವತಿದಾರರಿಗೆ ರಿಲೀಫ್‌ ಸಿಕ್ಕಂತಾಗಿದೆ.

2019-20ನೇ ಸಾಲಿಗೆ ಸಂಬಂಧಿಸಿದಂತೆ 4.54 ಕೋಟಿಗಿಂತ ಹೆಚ್ಚಿನ ಆದಾಯ ತೆರಿಗೆ ವಿವರಗಳು ಡಿಸೆಂಬರ್ 28 ರವರೆಗೆ ಸಲ್ಲಿಕೆಯಾಗಿವೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 4.77 ಕೋಟಿ ವಿವರಗಳು ಸಲ್ಲಿಕೆಯಾಗಿದ್ದವು.

ಇನ್ನು, ಆಡಿಟಿಂಗ್ ಅಗತ್ಯ ಇರುವ ಖಾತೆಗಳವರಿಗೆ ಐಟಿ ರಿಟರ್ನ್ ಸಲ್ಲಿಕೆಯ ಅವಧಿಯನ್ನು ಜನವರಿ 31ರ ಬದಲಾಗಿ ಫೆಬ್ರವರಿ 15ರವರೆಗೆ ವಿಸ್ತರಣೆ ಮಾಡಲಾಗಿದೆ. ವಿವಾದ್‌ ಸೇ ವಿಶ್ವಾಸ್‌ ಘೋಷಣೆಗೆ ಜನವರಿ 31 ಕೊನೆ ದಿನವಾಗಿದೆ. ಆದಾಯ ತೆರಿಗೆ ಇಲಾಖೆಯ ಟ್ವೀಟ್‌ ಪ್ರಕಾರ ಬುಧವಾರ 3 ಗಂಟೆ ವೇಳೆಗೆ 8,96,617 ಐಟಿಆರ್‌ಗಳು ಸಲ್ಲಿಕೆಯಾಗಿವೆ. ಕಳೆದ 1 ಗಂಟೆಯಲ್ಲಿ 1,67,093 ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದೆ.

Published On: 30 December 2020, 09:10 PM English Summary: Income Tax Returns filing deadline extended to 10 January

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.