ವಿಧಾನಸಭೆಯಲ್ಲಿ ಕರ್ನಾಟಕ ಕೆಐಎಡಿಬಿ KIADB ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ರೈತರ ಭೂಮಿ ಸ್ವಾಧೀನದ ವೇಳೆ ಸರ್ಕಾರಿ ಬೆಲೆಯ 4 ಪಟ್ಟು ಪರಿಹಾರ ನೀಡಲು ಅವಕಾಶ ಮಾಡಿಕೊಡುವ ವಿಧೇಯಕ ಇದಾಗಿದೆ.
ಇದನ್ನು ಓದಿರಿ:
ಕನ್ನಡದ ನೆಲಕ್ಕಾಗಿ ಒಂದಾದ ಕಲಿಗಳು! ಮೇಕೆದಾಟುವಿಗಾಗಿ ತೊಡೆತಟ್ಟಿದ ನಾಯಕರು
ನಿರುದ್ಯೋಗಿಗಳಿಗೆ ಇರೋ ಸರ್ಕಾರದ ಜನಪ್ರಿಯ ಸ್ಕೀಂಗಳು ಯಾವು.. ಇಲ್ಲಿದೆ ಪೂರ್ಣ ಮಾಹಿತಿ
ಅನ್ನಭಾಗ್ಯ ಯೋಜನೆ ವಿಷಯದಲ್ಲಿ Fight!
ವಿಧಾನಸಭೆಯಲ್ಲಿ ಇಲಾಖಾವಾರು ಅನುದಾನ ಮತ್ತು ಬೇಡಿಕೆ ಮೇಲೆ ಚರ್ಚೆ ವೇಳೆ ಅನ್ನಭಾಗ್ಯ ಯೋಜನೆ ವಿಷಯದಲ್ಲಿ ಫೈಟ್ ನಡೆದಿದೆ. ವಿಪಕ್ಷ ಉಪನಾಯಕ ಖಾದರ್, ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನಡುವೆ ಫೈಟ್ ಆಗಿದೆ. ಕೇಂದ್ರ ಸರ್ಕಾರದ ಯೋಜನೆಯನ್ನ ಸಿದ್ದರಾಮಯ್ಯ ನಮ್ಮ ಅಕ್ಕಿಭಾಗ್ಯ ಯೋಜನೆ ಅಂದ್ರು ಎಂದು ಬೆಲ್ಲದ್ ಹೇಳುತ್ತಿದ್ದಂತೆ ಈ ಯೋಜನೆ ಪರಿಚಯಿಸಿದವರೇ ಸಿದ್ದರಾಮಯ್ಯ ಎಂದು ಖಾದರ್ ತಿರುಗೇಟು ಕೊಟ್ಟಿದ್ದಾರೆ. ಹೌದು ಸಿದ್ದರಾಮಯ್ಯ ಸಿಎಂ ಆದ ಕೂಡಲೇ ಘೋಷಿಸಿದರು.
ಸಂಪುಟದಲ್ಲಿ ಒಪ್ಪಿಗೆ ಪಡೆಯದೇ ಒಬ್ಬರೇ ಘೋಷಿಸಿದರು. ಯಾರಿಗೂ ಕ್ರೆಡಿಟ್ ಸಿಗಬಾರದೆಂದು ಏಕಾಏಕಿ ಘೋಷಣೆ ಮಾಡಿದರು ಎಂದು ಬೆಲ್ಲದ್ ಆಕ್ರೋಶಗೊಂಡಿದ್ದು ಇದೆಲ್ಲಾ ಬಿಜೆಪಿಗರಿಗೆ, ನಮಗಲ್ಲ ಎಂದು ಖಾದರ್ ತಿರುಗೇಟು ಕೊಟ್ಟಿದ್ದಾರೆ.
ಈ ವೇಳೆ ಶಾಸಕ A.S.ಪಾಟೀಲ್ ನಡಹಳ್ಳಿ ಕೂಡ ಮಧ್ಯಪ್ರವೇಶ ಮಾಡಿದ್ರು. ಕೊನೆಗೆ ಯೋಜನೆ ಕುರಿತು ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್, ಖಾದರ್, ನಡಹಳ್ಳಿ, ಬೆಲ್ಲದ್, ನಾಗೇಂದ್ರ ಮಧ್ಯೆ ವಾಗ್ವಾದ ನಡೆದಿದೆ. ಆಹಾರ ಭದ್ರತೆ ಕಾಯಿದೆಯನ್ನು ಮಾಡಿದ್ದು ಯುಪಿಎ ಸರ್ಕಾರ, ಅಕ್ಕಿಗೆ ಶೇಕಡಾ 80ರಷ್ಟು ಹಣ ಕೊಡ್ತಿರೋದು ಕೇಂದ್ರ ಸರ್ಕಾರ, ಉಳಿದ ಹಣವನ್ನು ನಮ್ಮ ಸರ್ಕಾರ ಭರಿಸಿದ್ದು, ಸುಮ್ಮನೆ ಏನೇನೋ ಮಾತಾಡೋದು ಸರಿಯಲ್ಲ ಎಂದು ಬಿಜೆಪಿಗೆ ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ತಿರುಗೇಟು ಕೊಟ್ಟಿದ್ದಾರೆ.
ಇನ್ನಷ್ಟು ಓದಿರಿ:
ಪಪ್ಪಾಯ ಬೆಳೆಸಿ 10 ಲಕ್ಷ ಗಳಿಸಿ! 350 ಕ್ವಿಂಟಾಲ್‌ವರೆಗೆ ಉತ್ಪಾದನೆ, ವರ್ಷವಿಡೀ ಬೇಸಾಯ.
ವಿಧಾನಸಭೆಯಲ್ಲಿ ಬಂದಿಖಾನೆ ತಿದ್ದುಪಡಿ ವಿಧೇಯಕ ಅಂಗೀಕಾರಗೊಳಿಸಲಾಗಿದೆ. ಜೈಲಿನೊಳಗೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಿರ್ಬಂಧ ಹಾಗೂ ಪೆರೋಲ್ ಮೇಲೆ ತೆರಳಿದವರು ನಿರ್ದಿಷ್ಟ ಸಮಯದೊಳಗೆ ವಾಪಸಾಗದಿದ್ದರೆ ಶಿಕ್ಷೆ ಮತ್ತು ಜಾಮೀನು ಕೊಟ್ಟಿರುವವರಿಗೂ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವ ವಿಧೇಯಕ ಇದಾಗಿದೆ. ಸದ್ಯ ಈ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.
ಮತ್ತಷ್ಟು ಓದಿರಿ:
Share your comments