ನೀವು ಬ್ಯಾಂಕ್‌ನಲ್ಲಿ ಠೇವಣಿ (Fixed Deposit) ಇರಿಸಿ ಭಾರೀ ಮೊತ್ತದ ಬಡ್ಡಿ (Interest)ಪಡೆಯಬೇಕು ಎಂದು ನಿರೀಕ್ಷಿಸುತ್ತಿದ್ದೀರ ಆಗಿದ್ದರೆ, ಈ ಲೇಖನ ನಿಮಗಾಗಿ.
Fixed Deposit ನಿಶ್ಚಿತ ಠೇವಣಿ ದರಗಳನ್ನು 3 ವರ್ಷಗಳವರೆಗೆ ಬ್ಯಾಂಕಿನಲ್ಲಿ ಠೇವಣಿ ಇರಿಸಿದರೆ ಕೆಲವು ಬ್ಯಾಂಕ್‌ಗಳು
ಭಾರೀ ಮೊತ್ತದಲ್ಲಿ ಬಡ್ಡಿ ದರವನ್ನು ನೀಡಲಿವೆ. ಅಲ್ಲದೇ 3 ವರ್ಷಗಳ FD ಯಲ್ಲಿ 8.6% ವರೆಗೆ
ಬಡ್ಡಿಯನ್ನು ನೀಡುವ ಬ್ಯಾಂಕ್‌ಗಳ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
Fixed Deposit ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಾದ ಎಸ್‌ಬಿಐ, ಯೂನಿಯನ್ ಬ್ಯಾಂಕ್ ಆಫ್
ಇಂಡಿಯಾಗಳು ನೀಡುವ ಎಫ್‌ಡಿ-ಬಡ್ಡಿ ದರಗಳು ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಖಾಸಗಿ
ಬ್ಯಾಂಕ್‌ಗಳು ನೀಡುವ ದರಗಳಿಗೆ ಸಮನಾಗಿಲ್ಲ ಎನ್ನುವುದು ತುಸು ಕಹಿ ಎನಿಸಿದರೂ ಸತ್ಯವೇ.
ಮೈಕ್ರೋಫೈನಾನ್ಸ್ ಮತ್ತು ಕೆಲವು ಖಾಸಗಿ ಬ್ಯಾಂಕುಗಳು ಮೂರು ವರ್ಷಗಳ FDಗಳ ಮೇಲೆ 8.6 ಪ್ರತಿಶತದವರೆಗೆ
ಬಡ್ಡಿದರಗಳನ್ನು ನೀಡುತ್ತವೆ. ಬ್ಯಾಂಕ್ ಬಜಾರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 3 ವರ್ಷಗಳ
ಅವಧಿಯೊಂದಿಗೆ FDಗಳಿಗೆ ಹೆಚ್ಚಿನ (Interest) ಬಡ್ಡಿ ದರವನ್ನು ನೀಡುವ ಟಾಪ್ 10 ಬ್ಯಾಂಕ್‌ಗಳು ಈ ಕೆಳಗಿನಂತಿವೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷಗಳ FDಗಳ ಮೇಲೆ 8.6 ಶೇಕಡಾ ಬಡ್ಡಿಯನ್ನು ನೀಡುತ್ತದೆ.
ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ, ಇದು ಉತ್ತಮ (Interest) ಬಡ್ಡಿದರಗಳನ್ನು ನೀಡುತ್ತದೆ.
1 ಲಕ್ಷದ ಹೂಡಿಕೆ ಮೂರು ವರ್ಷಗಳಲ್ಲಿ 1.29 ಲಕ್ಷ ರೂ.ಸಿಗಲಿದೆ.
ಇನ್ನು AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಮೂರು ವರ್ಷಗಳ FDಗಳ ಮೇಲೆ 8 ಪ್ರತಿಶತ ಬಡ್ಡಿಯನ್ನು (Interest) ನೀಡುತ್ತವೆ.
1 ಲಕ್ಷದ ಹೂಡಿಕೆ ಮೂರು ವರ್ಷಗಳಲ್ಲಿ 1.27 ಲಕ್ಷ ರೂಪಾಯಿ ಸಿಗಲಿದೆ.
ವಿದೇಶಿ ಬ್ಯಾಂಕುಗಳಲ್ಲಿ, ಡಾಯ್ಚ ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ.
ಡಾಯ್ಚ ಬ್ಯಾಂಕ್ ಮೂರು ವರ್ಷಗಳ FD ಗಳ ಮೇಲೆ 7.75 ಶೇಕಡಾ(Interest) ಬಡ್ಡಿಯನ್ನು ನೀಡುತ್ತದೆ.
ಈ ಬ್ಯಾಂಕ್‌ಗಳ ಎಫ್‌ಡಿಯಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.26 ಲಕ್ಷ ರೂ ಸಿಗಲಿದೆ.
DCB ಬ್ಯಾಂಕ್ ಮೂರು ವರ್ಷಗಳ ಅವಧಿಯೊಂದಿಗೆ FT ಗಳ ಮೇಲೆ 7.60 ಶೇಕಡಾ ಬಡ್ಡಿಯನ್ನು Fixed Deposit ನೀಡುತ್ತದೆ.
ಖಾಸಗಿ ಬ್ಯಾಂಕುಗಳಲ್ಲಿ, ಇದು ಹೆಚ್ಚಿನ (Interest)ಬಡ್ಡಿದರವನ್ನು ನೀಡುತ್ತದೆ.
1 ಲಕ್ಷ ಹೂಡಿಕೆ ಎಂದರೆ ಮೂರು ವರ್ಷಗಳಲ್ಲಿ 1.25 ಲಕ್ಷ ರೂಪಾಯಿ (Investment) ಸಿಗಲಿದೆ.
ಬಂಧನ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಮೂರು
ವರ್ಷಗಳ ಅವಧಿಯೊಂದಿಗೆ ಎಫ್‌ಡಿಗಳ ಮೇಲೆ ಶೇಕಡಾ 7.25 ಬಡ್ಡಿಯನ್ನು ನೀಡುತ್ತವೆ.
1 ಲಕ್ಷ (Investment)ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.24 ಲಕ್ಷ ರೂಪಾಯಿ ನಿಮ್ಮದಾಗಲಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷಗಳ FD ಗಳ ಮೇಲೆ 7.20 ಶೇಕಡಾ (Interest)ಬಡ್ಡಿಯನ್ನು ನೀಡುತ್ತದೆ.
1 ಲಕ್ಷದ ಹೂಡಿಕೆಗೆ ಮೂರು ವರ್ಷಗಳಲ್ಲಿ 1.24 ಲಕ್ಷ ರೂಪಾಯಿಯ ದರವನ್ನು (Investment) ನೀಡಲಿವೆ.
ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಹೊಸ ಠೇವಣಿಗಳನ್ನು
ಪಡೆಯಲು ಹೆಚ್ಚಿನ (Interest) ಬಡ್ಡಿದರಗಳನ್ನು ನೀಡುತ್ತವೆ. ಗಮನಾರ್ಹವಾಗಿ, ಸೆಂಟ್ರಲ್ ಬ್ಯಾಂಕ್‌ನ
ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್, ರೂ.5 ಲಕ್ಷದವರೆಗಿನ
ಸ್ಥಿರ (Fixed Deposit) ಠೇವಣಿಗಳಲ್ಲಿ ಹೂಡಿಕೆಗೆ ಖಾತರಿ ನೀಡುತ್ತದೆ ಎನ್ನುವುದನ್ನು ಮರಿಯಬೇಡಿ.
Share your comments