1. ಸುದ್ದಿಗಳು

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಜನಮನ ಸೆಳೆದ ICAR ಸ್ತಬ್ಧಚಿತ್ರ

Maltesh
Maltesh
ICAR Tableau captures attention at Republic Day parade

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಪ್ರಸ್ತುತಪಡಿಸಿದ ಸ್ತಬ್ಧಚಿತ್ರವು  ಜನವರಿ 26 ರ ಪರೇಡ್‌ನಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. 74ನೇ ಗಣರಾಜ್ಯೋತ್ಸವದ ಪರೇಡ್‌ನ ವಿಶೇಷ ಆಕರ್ಷಣೆಗಳಲ್ಲಿ ಇಂಟರ್ನ್ಯಾಷನಲ್ ಇಯರ್ ಆಫ್ ಮಿಲೆಟ್ಸ್ 2023 ಥೀಮ್ ಒಂದಾಗಿದೆ .ಐಸಿಎಆರ್‌ ಜೋಳ, ಬಾಜ್ರಾ, ರಾಗಿ, ಕುಟ್ಕಿ ಮತ್ತು ಸಾನ್ವಾ ಬೆಳೆಗಳನ್ನು ಇದರಲ್ಲಿ ಪ್ರದರ್ಶಿಸಿತ್ತು. ಟ್ಯಾಬ್ಲು ಮುಂಭಾಗದಲ್ಲಿ  ರಾಗಿ ಕಾಳುಗಳಿಂದ ನಿರ್ಮಿಸಿದ್ದ ರಂಗೋಲಿ ಜನಮನ ಸೆಳೆಯಿತು.

ವಿಶ್ವಸಂಸ್ಥೆಯ 2023 ಅನ್ನು ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸಿದೆ. ಇನ್ನು ಈ ವರ್ಷದ G20 ಅಧ್ಯಕ್ಷತೆಯನ್ನು ಭಾರತದಲ್ಲಿ ನಡೆಸಲಾಗುತ್ತಿದೆ, ಇವೆಲ್ಲವು ಈ ನಿರ್ದಿಷ್ಟ ಕೋಷ್ಟಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜಾಗತಿಕ ಮತ್ತು ಪ್ರಾದೇಶಿಕ ಆಹಾರ ಭದ್ರತೆಯು ಬಹಳ ಹಿಂದಿನಿಂದಲೂ G 20 ರ ಗುಂಪಿನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

ಪಿಎಂ ಕಿಸಾನ್‌ ಇಕೆವೈಸಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12ನೇಯ ಕಂತನ್ನು ಸರ್ಕಾರವು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಈಗ ರೈತರು 13 ನೇ ಕಂತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಾವತಿಯನ್ನು ಪಡೆಯಲು, ಎಲ್ಲಾ ಫಲಾನುಭವಿಗಳಿಗೆ ಇ-ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸಲು ಸರ್ಕಾರವು ಕೇಳಿದೆ.

ಯಾವುದೇ ವಿಳಂಬವಿಲ್ಲದೆ 13 ನೇ ಕಂತು ಬಯಸಿದರೆ ಜನವರಿ 28, 2023 ಒಳಗಾಗಿ ಇ-ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದೆ.

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ 'ಇಕೆವೈಸಿ ಫಲಾನುಭವಿಗಳಿಗೆ ಕಡ್ಡಾಯವಾಗಿದೆ' ಎಂದು ಹೇಳುತ್ತದೆ. ಪಿಎಂಕಿಸಾನ್ ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ. OTP ಆಧಾರಿತ eKYC PMKISAN ಪೋರ್ಟಲ್‌ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ eKYC ಗಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬಹುದು.

ಮಾಸಾಂತ್ಯಕ್ಕೆ ರೈತಶಕ್ತಿ ಯೋಜನೆ ಸಬ್ಸಿಡಿ ವರ್ಗಾವಣೆ

ರೈತ ಶಕ್ತಿ ಯೋಜನೆಯ 500 ಕೋಟಿ ಸಬ್ಸಿಡಿಯನ್ನು ಇದೇ ಜನವರಿ 31ರಂದು 31ರಂದು ನೇರ ನಗದು ಪಾವತಿ ಮೂಲಕ ವರ್ಗಾಯಿಸುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಕೃಷಿಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾಡಿನ ರೈತರಿಗೆ ಕೃಷಿ ಯಂತ್ರೋಪಕರಣಗಳು ಹಾಗೂ ಡಿಸೇಲ್ ಸಬ್ಸಿಡಿಗಾಗಿ ರೈತ ಶಕ್ತಿ ಯೋಜನೆಯಡಿಯಲ್ಲಿ ₹500 ಕೋಟಿಯನ್ನು ಇದೇ ಜನವರಿ 31ರಂದು ನೇರ ನಗದು ಪಾವತಿ ಮೂಲಕ ವರ್ಗಾಯಿಸುತ್ತಿದ್ದೇವೆ.

ರೈತನ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಹಿಡುವಳಿಗೆ ತಕ್ಕಂತೆ ಸಾಲವನ್ನು ಬ್ಯಾಂಕುಗಳು ರೈತರಿಗೆ ನೀಡುತ್ತಿಲ್ಲ. ಇದನ್ನು ಸರಿಪಡಿಸಲು ನಾವು ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸಲಿದ್ದೇವೆ. ಈ ಮೂಲಕ ರೈತರ ಬದುಕನ್ನು ಹಸನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಹಂಪಿ ಉತ್ಸವ ಆರಂಭ

ರಾಜ್ಯದ ಐತಿಹಾಸಿಕ ಹಂಪಿಯಲ್ಲಿ "ಹಂಪಿ ಉತ್ಸವ - 2023ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಚಾಲನೆ ನೀಡಿದರು. 

ನಂತರ ಮಾತನಾಡಿದ ಮುಖ್ಯಮಂತ್ರಿ, ಬೊಮ್ಮಾಯಿ ಹಂಪಿ ಸರ್ಕಿಟ್ ಶೀಘ್ರದಲ್ಲಿಯೇ ಆರಂಭವಾಗಿ, ಪ್ರವಾಸೋದ್ಯಮಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ಆರಂಭಿಸಲಿದೆ ಎಂದರು. ಸಂದರ್ಭದಲ್ಲಿ ಸಚಿವರಾದ ಬಿ. ಶ್ರೀರಾಮುಲು. ಶಶಿಕಲಾ ಜೊಲ್ಲೆ ಮತ್ತಿತರರು ಉಪಸ್ಥಿತರಿದ್ದರು.

ಈ ಬಾರಿ ಮೂರು ದಿನಗಳಲ್ಲಿ 10 ಲಕ್ಷಕ್ಕೂ ಮೀರಿ ಜನರು ಹರಿದು ಬರುವ ನಿರೀಕ್ಷೆ ಇದೆ. ಜ. 27, 28 ಮತ್ತು 29ರಂದು ಮೂರು ದಿನಗಳವರೆಗೆ ಹಂಪಿ ಉತ್ಸವ ನಡೆಯಲಿದೆ. ಮೂರು ದಿನಗಳಲ್ಲಿ ಜನಸಾಗರವೇ ಹರಿದು ಬರುವ ನಿರೀಕ್ಷೆ ಇದೆ.ಹಾಗಾಗಿ ವಿಜಯನಗರ ನೂತನ ಜಿಲ್ಲಾಡಳಿತ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

Published On: 28 January 2023, 04:57 PM English Summary: ICAR Tableau captures attention at Republic Day parade

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.