Krishi Jagran Kannada
Menu Close Menu

ರೈತರಿಗೆ ಗುಡ್ ನ್ಯೂಸ್: ಈಗ ಮನೆಯಲ್ಲಿಯೇ ಕುಳಿತು ಪಿಎಂ ಕಿಸಾನ್ ಸಮ್ಮಾನ್ ನೋಂದಣಿ ಮಾಡಿ

Friday, 16 October 2020 03:36 PM

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ವರ್ಷ 6000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಸೇರಿಸಲಾಗುತ್ತದೆ. ಒಂದು ವೇಳೆ ನೀವು ಸಲ್ಲಿಸಲಾಗಿರುವ ಅರ್ಜಿ ಯಾವುದೇ ಒಂದು ದಾಖಲೆಯ (ಅಂದರೆ ಆಧಾರ್, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ) ಕಾರಣ ನಿಂತು ಹೋಗಿದ್ದರೆ, ಅದನ್ನೂ ಕೂಡ ನೀವು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ  ಈ ಯೋಜನೆಯ ಲಾಭ ಪಡೆಯಬಹುದು.

 ಹೆಸರು ತಪ್ಪಾಗಿದ್ದರೆ, ನೋಂದಣಿಯಾಗದಿದ್ದರೆ ರೈತರೇ ಮನೆಯಲ್ಲಿ ಕುಳಿತು ನೋಂದಣಿ ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗ ಈ ಸೌಲಭ್ಯವನ್ನು ಆನ್‌ಲೈನ್‌ನಲ್ಲಿಯೂ ಒದಗಿಸಿದೆ. ಅಧಿಕೃತ ವೆಬ್‌ಸೈಟ್ pmkisan.gov.in ಗೆ  ಭೇಟಿ ನೀಡುವ ಮೂಲಕ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಒಂದು ವೇಳೆ ನಿಮ್ಮ ಖಾತೆಗೆ ಕೃಷಿ ಸಮ್ಮಾನ್ ನಿಧಿ ಹಣ ವರ್ಗಾವಣೆ ಆಗಿರದಿದ್ದರೆ, ಸರಕಾರಕ್ಕೆ ನೀವು ನೀಡಿರುವ ಮಾಹಿತಿಯಲ್ಲಿ ಏನಾದರೂ ಲೋಪವಿರಬಹುದು. ಅಥವಾ ನಿಮ್ಮ ಖಾತೆಯಲ್ಲಿ ಸಮಸ್ಯೆ ಇರಬಹುದು ಎಂಬುದನ್ನು ಮೊದಲು ಪರಿಶೀಲಿಸಿ. ಪಿಎಂ ಕಿಸಾನ್ ಮುಂದಿನ ಕಂತಿನ ಹಣ ನವೆಂಬರ್ ತಿಂಗಳಲ್ಲಿ ಬರುತ್ತದೆ. ಈ ಹಣ ಸರ್ಕಾರ ಬಿಡುಗಡೆ ಮಾಡುವುದಕ್ಕಿಂತ ಮೊದಲೇ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ನೀವು ಈ ಯೋಜನೆಯ ಲಾಭ ಪಡೆಯಬಹುದು.

ಯಾವ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ:

ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಲ್ಲಿನ ವ್ಯತ್ಯಾಸದಿಂದಾಗಿಯೂ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಇಂತಹ ತಪ್ಪುಗಳಾಗಿದ್ದರೆ ಕೂಡಲೇ ಸರಿಪಡಿಸಬೇಕು. ನಂತರವಷ್ಟೇ ನೀವು ಮುಂದಿನ ಕಂತನ್ನು ಪಡೆಯಬಹುದು.

ಲೋಪಗಳನ್ನು ಸರಿಪಡಿಸುವುದು ಹೇಗೆ?

ಪಿಎಂ-ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://pmkisan.gov.in/  ನಲ್ಲಿ ಕ್ಲಿಕ್ ಮಾಡಿದಾಗ ವೆಬಸೈಟ್ ತೆರೆಯುತ್ತದೆ. ಬಲಗಡೆಗೆ ನ್ಯೂ ಫಾರ್ಮರ್ ರೆಜಿಸ್ಟ್ರೇಷನ್, ಎಡಿಟ್ ಆಧಾರ್ ಫೇಲಿಯರ್ ರಿಕಾರ್ಡ್, ಬೆನಿಫಿಸಿಯರಿ ಸ್ಟೇಟಸ್ ಲೀಸ್ಟ್ ಹೀಗೆ ವಿವಿದ ಆಫ್ಷನ್ ಇದೆ. ತಪ್ಪು ಸರಿಪಡಿಸುವುದಿದ್ದರೆ ಎಡಿಟ್ ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ. ಆಧಾರ್ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ಕ್ಯಾಪ್ಚಾ ಕೋಡ್ ಕ್ರಿಯೇಟ್‌ ಆಗುತ್ತದೆ. ನಿಗದಿತ ಸ್ಥಳದಲ್ಲಿ ಅದನ್ನು ನಮೂದಿಸಿದ ನಂತರ ಸಲ್ಲಿಸಿ.

ಆನ್‌ಲೈನ್‌ನಲ್ಲಿ ಹೆಸರು ಸರಿಪಡಿಸಿ:

ನಿಮ್ಮ ಹೆಸರು ತಪ್ಪಾಗಿರುವುದರಿಂದಲೂ ಹಣ ಜಮೆಯಾಗಿಲ್ಲದಿರುವ ಸಾಧ್ಯತೆಗಳಿವೆ. ಅಂದರೆ, ವೆಬ್‌ಸೈಟ್‌ನಲ್ಲಿ ನೀವು ನೀಡಿರುವ ಹೆಸರು ಮತ್ತು ಆಧಾರ್‌ನಲ್ಲಿ ನಿಮ್ಮ ಹೆಸರು ವಿಭಿನ್ನವಾಗಿದ್ದರೆ, ಈ ಸಮಸ್ಯೆಯಾಗುತ್ತದೆ. ನಂತರ ನೀವು ಅದನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು.

ಸ್ಟೇಟಸ್, ಹಣ ಜಮೆಯಾಗಿದ್ದನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:

ಪಿಎಂ ಕಿಸಾನ್ (PM-Kisan) ಸ್ಟೇಟಸ್  ಹಣ ಜಮೆಯಾಗಿರುವುದನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈಗಲೇ ನಿಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದು. https://pmkisan.gov.in/beneficiarystatus.aspx  ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್, ಅಕೌಂಟ್ ಅಥವಾ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಬಹುದು.

ಯಾರು ಫಲಾನುಭವಿಗಳು:

ಗಂಡ, ಹೆಂಡತಿ ಹಾಗು 18 ವರ್ಷದೊಳಗಿನ ಮಕ್ಕಳು ಇರುವ ಕುಟುಂಬ ಇರಬೇಕು.  ಎರಡು ಹೆಕ್ಟೇರ್ ಜಮೀನು ಇರಬೇಕು. ಫೆಬ್ರವರಿ 1, 2019ರ ಕ್ಕಿಂತ ಮೊದಲಿನ ಭೂ ದಾಖಲೆಗಳಲ್ಲಿ ಹೆಸರು ಇರುವ ರೈತರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆಬ್ರವರಿ 1ರ ನಂತರ ಬದಲಾವಣೆ ಮಾಡಲಾದ ಭೂ ದಾಖಲಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.  ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಹಳ್ಳಿಗಳಲ್ಲಿ ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿ ಹೋಗಿದ್ದರೂ ಪರಿಗಣಿಸಲಾಗುತ್ತದೆ.

ಎಲ್ಲೆಲ್ಲಿ ಹೆಸರು ನೋಂದಣಿ:

 ಮೊಬೈಲ್ ಮೂಲಕ ಅಪ್ ಲೋಡ್ ಮಾಡಲು ಸಮಸ್ಯೆಯಾಗುತ್ತಿದ್ದರೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಅಟಲ್‌ಜಿ ಜನ ಸೇವಾ ಕೇಂದ್ರ, ಗ್ರಾಮ ಪಂಚಾಯಿತಿ ಕೇಚೇರಿಗಳು, ನಾಡ ಕಚೇರಿಗಳಲ್ಲಿ ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿಯ ಯೋಜನೆಯಡಿ ರೈತರ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ:

ಮತ್ತೇನಾದರೂ ತಪ್ಪಾದರೆ ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಗೆ ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು. ಅಲ್ಲಿ ನಿಮಗೆ ಯಾವುದೇ ಮಾಹಿತಿ ಸಿಗದಿದ್ದರೆ, ಕೇಂದ್ರ ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ನೀವು ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ 1800115526 ಅನ್ನು ಸಂಪರ್ಕಿಸಬಹುದು. ಇದಲ್ಲದೆ ನೀವು ಸಚಿವಾಲಯದ ಈ ಸಂಖ್ಯೆಯನ್ನು (011-23381092) ಸಹ ಸಂಪರ್ಕಿಸಬಹುದು.

Pradhan mantra kisan samman nidhi PM Kisan PM Kisan registration Pm kisan status PM kisan beneficiary pm kisan scheme how to check status How to register pm kisan scheme

Share your comments

Krishi Jagran Kannada Subscription

CopyRight - 2020 Krishi Jagran Media Group. All Rights Reserved.