ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಇತ್ತೀಚಿಗೆ 2 ಸಾವಿರ ರೂಪಾಯಿಯ ಮುಖಬೆಲೆಯ ನೋಟನ್ನು ಗ್ರಾಹಾಕರಿಗೆ ವಿತರಿಸಂತೆ ಆದೇಶ ಹೊರಡಿಸಿದೆ. RBI ಮೇ 19, 2023 ರಂದು ಚಲಾವಣೆಯಿಂದ 2000 ರೂಪಾಯಿ ನೋಟನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ, ಇದೀಗ ಸಾಕಷ್ಟು ಊಹಾಪೋಹಗಳು ಈ ಕುರಿತು ಎದ್ದಿವೆ ಅವುಗಳಿಗೆ ಈ ಕೆಲವೊಂದು ಸ್ಪಷ್ಟೀಕರಣ ಹಾಗೂ ಮಾಹಿತಿಯನ್ನು ತಿಳಿದುಕೊಳ್ಳೋಣ.
2016 ರ ಸೆಪ್ಟೆಂಬರ್ ತಿಂಗಳಲ್ಲಿ ಹಳೆಯ ನೋಟ್‌ಗಳನ್ನು ಬ್ಯಾನ್ (Note Ban)ಮಾಡಿ ಹೊಸ ನೋಟುಗಳ ಚಲಾವಣೆಗೆ ತರಲಾಗಿತ್ತು. ಆಗ 500 ರೂ, 1000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗದುಕೊಳ್ಳಲಾಗಿತ್ತು. ಆ ಬಳಿಕ 2000 ಮುಖಬೆಲೆಯ ಹಾಗೂ 500 ರೂ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಇಈಗ ಅವುಗಳಲ್ಲಿ 2000 ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ಇವುಗಳನ್ನು ಗ್ರಾಹಕರಿಗೆ (Customers) ವಿತರಿಸದಂತೆ ದೇಶದ ಎಲ್ಲ ಬ್ಯಾಂಕುಗಳಿಗೆ (Banks) ತಿಳಿಸಿದೆ.
ಸೆಪ್ಟೆಂಬರ್ (September) 30 ರೊಳಗೆ 2000 ಮುಖಬೆಲೆಯ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು RBI ಅವಕಾಶ ನೀಡಿದೆ. ಸೆಪ್ಟೆಂಬರ್ 30, 2023 ರೊಳಗೆ ಯಾವುದೇ ಬ್ಯಾಂಕ್ ಶಾಖೆ ಅಥವಾ ಪೋಸ್ಟ್ ಆಫೀಸ್‌ನಲ್ಲಿ ನಿಮ್ಮ 2000-ರೂಪಾಯಿ ನೋಟುಗಳನ್ನು ನೀವು ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು. ಸೆಪ್ಟೆಂಬರ್ 30, ನಂತರ, ನೋಟುಗಳು ಇನ್ನು ಮುಂದೆ ಕಾನೂನುಬದ್ಧವಾಗಿರುವುದಿಲ್ಲ.
2000 ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾವಣೆ ಹೇಗೆ..? (How to exchange 2000 note in bank)
ಇದೀಗ ಜನಸಾಮಾನ್ಯರಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾಯಿಸುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಯಾಕಂದ್ರೆ 2016 ರಲ್ಲಿ ನೋಟ್ ಬ್ಯಾನ್ ಆದಾಗ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಈ ಬಾರಿ ಅವುಗಳಿಗೆ ಅವಕಾಶ ನೀಡದೆ ಸರಳವಾಗಿ ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು RBI ತನ್ನ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಿದೆ.
ಸದ್ಯ STATE BANK OF INDIA ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದ್ದು, ನೋಟುಗಳ ಬದಲಾವಣೆಗೆ ಯಾವುದೇ ಪುರಾವಗಳನ್ನು ಒದಗಿಸುವ ಅವಶ್ಯಕತೆ ಇಲ್ಲವೆಂದು ತಿಳಿಸಿದೆ. ಜನಸಾಮಾನ್ಯರ ಅನೂಕೂಲಕ್ಕಾಗಿ 20 ಸಾವಿರ ರೂಪಾಯಿಯ ವರೆಗೆ ಯಾವುದೇ ID ಇಲ್ಲದೆ ನೀವು ಹಣವನ್ನು ಬದಲಾಯಿಸಿಕೊಳ್ಳಬಹುದು. ಇದರೆ ಜೊತೆಗೆ ಯಾವುದೇ ಮನವಿ ಪತ್ರವನ್ನು ಕೂಡ ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಸದ್ಯ ಸಾಮಾನ್ಯ ವ್ಯವಹಾರಗಳಿಗೆ ದೈನದಿಂದ ಖರ್ಚು ವೆಚ್ಚಗಳಲ್ಲಿ 2 ಸಾವಿರ ರೂಪಾಯಿಯ ನೋಟುಗಳು ಚಾಲ್ತಿಯಲ್ಲಿರುತ್ತವೆ. ಪಾವತಿಯನ್ನು ಮಾಡಲು, ಸ್ವೀಕರಿಸಲು ಇಂದಿಗೂ 2 ಸಾವಿರ ರೂಪಾಯಿಯ ನೋಟುಗಳು ಅರ್ಹವಾಗಿರುತ್ತವೆ. ಮೇ 23 ರಿಂದ ದೇಶದ ಎಲ್ಲ ಬ್ಯಾಂಕುಗಳು, ಹಾಗೂ ಭಾರತೀಯ ರಿಸರ್ವ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿ ಇವುಗಳನ್ನು ಸೆಪ್ಟೆಂಬರ್ 30ರ ವರೆಗೆ ಬದಲಾವಣೆ ಮಾಡಿಕೊಳ್ಳಬಹದು. ಒಂದು ವೇಳೆ ಅನ್ಯ ಕಾರಣಗಳಿಂದ ನಿಮ್ಮ ಹಣವನ್ನು ಬದಲಾವಣೆ ಮಾಡಿಕೊಡಲು ಬ್ಯಾಂಕಗಳು ನಿರ್ಬಂಧ ಹೇರಿದ್ದಲ್ಲಿ ನೀವು ನೇಋವಾಗಿ RBI ಗೆ ಕಂಪ್ಲೇಂಟ್ ದಾಖಲಿಸಬಹುದು.
ಇನ್ನು ಮಹತ್ವ ವಿಷಯವನ್ನು ಗಮನಿಸುವುದಾದದರೆ ನೋಟನ್ನು ಬದಲಾವಣೆ ಮಾಡಿಕೊಳ್ಳಬೇಕಾದರೆ, ಬ್ಯಾಂಕ್‌ನಲ್ಲಿ ಯಾವುದೇ ಅಕೌಂಟ್ ಅಸ್ತಿತ್ವ ಬೇಡ. ನೀವು ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರು ಕೂಡ ನಿಮ್ಮ ಬಳಿ ಇರುವ 2000 ರೂಪಾಯಿಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು.
Share your comments