1. ಸುದ್ದಿಗಳು

ತೋಟಗಾರಿಕೆ ಬೆಳೆಗಳಲ್ಲಿ ಐಒಟಿ, ಯುಕ್ತಿಕ್ಸ್‌ ಗಿಡಾಬಿಟ್ಸ್‌ ಫ್ಲಾಟ್‌ ಫಾರಂ ಬೆಳೆಗಾರರಿಗೆ ಹೇಗೆ ನೆರವಾಗುತ್ತೆ..?

Ramlinganna
Ramlinganna

ಕೃಷಿಯಲ್ಲಿ ಇದೀಗ ಐಒಟಿ ತಂತ್ರಜ್ಞಾನ ಸಾಕಷ್ಟು ಹೆಚ್ಚಾಗುತ್ತಿದೆ. ಐಒಟಿ ತಂತ್ರಜ್ಞಾನ ಅಂದರೆ ಕಂಪ್ಯೂಟರ್‌ ಅಪ್ಲಿಕೇಶನ್‌ ಬಳಸಿ ಕೃಷಿಯಲ್ಲಿ ಸುಧಾರಣೆ ತರುವ ಒಂದು ವಿಧಾನ.  ಯುಕ್ತಿಕ್ಸ್‌ ಈ ನಿಟ್ಟಿನಲ್ಲಿ ಗಿಡಾಬಿಟ್ಸ್‌ ಫ್ಲಾಟ್‌ ಫಾರಂ ಕೃಷಿ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿದೆ. ಕಂಪ್ಯೂಟರ್‌ ಅಪ್ಲಿಕೇಶನ್‌ ಮತ್ತು ಸೆನ್ಸಾರ್‌ ಮಾಹಿತಿಯನ್ನು  ಸಂಯೋಜಿಸಿ, ಕೃಷಿಯಲ್ಲಿ ಹೇಗೆ ಲಾಭ ಮಾಡಬಹುದು ಎಂಬುದರ ಸಹಜ ಮಾಹಿತಿ, ಕೃಷಿಕರೊಂದಿಗಿನ ಮಾತುಕತೆಯ ವಿವರಗಳು ಇಲ್ಲಿವೆ. 

ತೋಟಗಾರಿಕೆ ಬೆಳೆಗಳಲ್ಲಿ ಯುಕ್ತಿಕ್ಸ್‌  ಗಿಡಾಬಿಟ್ಸ್‌ ಐಒಟಿ ಬಳಕೆ ಹೇಗೆ?

ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳು  ಚೆನ್ನಾಗಿ ಬೆಳೆಯುವುದಿಲ್ಲ. ಮಣ್ಣಿನ ತೇವಾಂಶ ಬದಲಾದರೂ ಇಳುವರಿ ಕುಂಠಿತವಾಗುತ್ತದೆ. ಜೊತೆಗೆ ರೋಗ ನಿರ್ವಹಣೆ ಕೂಡಾ ಕಷ್ಟಕರ ಮತ್ತು ವೆಚ್ಚದಾಯಕವಾಗಿರುತ್ತದೆ . 

ಯುಕ್ತಿಕ್ಸ್‌  ಗಿಡಾಬಿಟ್ಸ್‌ ಫ್ಲಾಟ್‌ ಫಾರಂ ಅಳವಡಿಸಿಕೊಂಡ ರೈತರು ಹೇಳುವುದು ಏನು..?

ಈ ಬಗ್ಗೆ ಒಂದು ಕೇಸ್‌ ಸ್ಟಡಿ ಇಲ್ಲಿದೆ. ನಾವಿಲ್ಲಿ ಹೇಳುತ್ತಿರುವುದು ಅರುಣಾ ಅರಸ್‌ ಅವರ ಬಗ್ಗೆ. ಇವರು ಪಿರಿಯಾಪಟ್ಟಣದವರು. 5 ಎಕರೆ ಹೊಲದಲ್ಲಿ ಟೊಮ್ಯಾಟೋ ಕೃಷಿ ಮಾಡುತ್ತಿದ್ದಾರೆ. ಒಟ್ಟು 28 ಎಕರೆಯಲ್ಲಿ ಅವರು ಕೃಷಿ ಮಾಡ್ತಾ ಇದ್ದಾರೆ. ಕೃಷಿಯಲ್ಲಿನ ಐಒಟಿ ಅಳವಡಿಕೆಯ ಬಗ್ಗೆ ಅವರು ಮಾತಾಡಿದ್ದಾರೆ.. ಅರುಣ ಅರಸ್‌ ಹೇಳುವುದು ಏನು ಎಂಬುದು ತಿಳಿಯೋಣ. 

ಅರುಣಾ ಅರಸ್‌ ಅವರು ತಮ್ಮ ತೋಟದಲ್ಲಿ ಐಒಟಿ ನಿಖರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ನಿಖರ ಕೃಷಿ ಬಳಸಿಕೊಂಡರೆ ತುಂಬಾ ಹಣ ಉಳಿಯುತ್ತದೆ. ರೋಗ ವಿಚಾರಗಳ ಮುನ್ಸೂಚನೆ ಇದರಲ್ಲಿ ಮೊದಲೇ ಸಿಗುತ್ತೆ. ಇಳುವರಿ  ಹೆಚ್ಚಾಗುತ್ತದೆ. ಖರ್ಚು ಕಡಿಮೆ ಆಗುತ್ತೆ. ಲಾಭ ಕೂಡಾ ಚೆನ್ನಾಗಿದೆ ಎಂಬುದು ಅರುಣ ಅರಸ್‌ ಅವರ ಅನುಭವದ ಮಾತು. 

ಅರುಣ ಅರಸ್‌ ಬಗ್ಗೆ ಮೊದಲು ಏನು ಸಮಸ್ಯೆ ಇತ್ತು?

ಯುಕ್ತಿಕ್ಸ್‌  ಗಿಡಾಬಿಟ್ಸ್‌ ಫ್ಲಾಟ್‌ ಫಾರಂ ಅರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಪ್ಲಿಕೇಶನ್‌ ಅಳವಡಿಸಿಕೊಳ್ಳುವ ಮೊದಲು ಅರುಣಾ ಅರಸ್‌ ಅವರು ಅನುಭವಿಸಿದ ಸಮಸ್ಯೆಗಳೇನು ಎಂಬ ಪ್ರಶ್ನೆಯನ್ನು ಅವರಿಗೆ ಕೇಳಿದಾಗ, ಅರುಣಾ ಅರಸ್‌ ಹೇಳಿದ್ದು ಇಷ್ಟು. ಮೊದಲು ನಮಗೆ ನೀರಿನ ಮಟ್ಟ ನಿರ್ವಹಣೆ ಅರ್ಥ ಆಗ್ತಾ ಇರಲಿಲ್ಲ. ರೋಗ ನಿರ್ವಹಣೆ ಗೊತ್ತಾಗ್ತಾ ಇರಲಿಲ್ಲ. ಕೀಟ ಮತ್ತು ರೋಗ ನಿರ್ವಹಣೆ ತುಂಬಾ ಕಷ್ಟ ಮತ್ತು ವೆಚ್ಚದಾಯಕವಾಗಿತ್ತು. ನಿಖರ ಕೃಷಿ ಅಳವಡಿಸಿಕೊಂಡ ಮೇಲೆ ಕೀಟ ಮತ್ತು ನಿರ್ವಹಣೆ ಅರ್ಥ ಆಗುತ್ತಿದೆ. ಇದು ಪರಿಣಾಮಕಾರಿಯೂ ಆಗಿದೆ. ಜೊತೆಗೆ ವೆಚ್ಚವೂ ಕಡಿಮೆ. ಜೊತೆಗೆ ಇಳುವರಿ ಹೆಚ್ಚಾಗಿದೆ. ಬೆಳೆಯ ಗುಣ ಮಟ್ಟ ಉತ್ತಮವಾಗಿದೆ. 

ಯುಕ್ತಿಕ್ಸ್‌  ಗಿಡಾಬಿಟ್ಸ್‌  ಡಿವೈಸ್‌ ಖರೀದಿಸಲು ಹಾಕಿದ ಹಣ ವಾಪಾಸ್‌ ಬರುತ್ತಾ..?

ಯಾವುದೇ ಹೊಸ ತಂತ್ರಜ್ಞಾನ ಬಳಸಬೇಕಾದರೆ ಅದಕ್ಕೆ ಹಣ ಹೂಡಿಕೆ ಮಾಡಬೇಕಾಗುತ್ತದೆ. ಸ್ವಲ್ಪ ದುಡ್ಡು ಖರ್ಚಾಗುತ್ತದೆ. ಈ ಸನ್ನಿವೇಶದಲ್ಲಿ ರೈತರು ಕೇಳುವ ಸಹಜ ಪ್ರಶ್ನೆ ಏನೆಂದರೆ, ಡಿವೈಸ್‌ ಬಳಸಲು ಹಾಕಿದ ದುಡ್ಡು ವಾಪಾಸ್‌ ಬರುತ್ತಾ..? ಅನ್ನೋದು. ರೈತರ ಈ ಪ್ರಶ್ನೆಯನ್ನೇ ನಾವು ಅರುಣಾ ಅರಸ್‌ ಅವರಿಗೆ ಕೇಳಿದಾಗ ಅವರು ಹೇಳಿದಿಷ್ಟು. ಕೃಷಿಯಲ್ಲಿ ಐಒಟಿ ಬಳಸಿಕೊಂಡಾಗ ಒಳ್ಳೆಯ ಇಳುವರಿ ಬಂದಿದೆ. ಬೆಳೆಯ ಗುಣಮಟ್ಟ ಚೆನ್ನಾಗಿ ಸಿಕ್ಕಿದೆ. ಮಾರುಕಟ್ಟೆ ಧಾರಣೆಯ ಏರಿಳಿತದ ಹೊರತಾಗಿಯೂ ಸ್ವಲ್ಪ ದುಡ್ಡು ಹೆಚ್ಚಿಗೆ ಸಿಕ್ಕಿದೆಯೇ ಹೊರತು, ನಷ್ಟ ಅಂತೂ ಆಗಿಲ್ಲ. 

ಯುಕ್ತಿಕ್ಸ್‌ ಗಿಡಾಬಿಟ್ಸ್‌ ಹೇಗೆ ಕೆಲಸ ಮಾಡುತ್ತದೆ. ?

ಯುಕ್ತಿಕ್ಸ್‌ ನಿಮ್ಮ ಜಮೀನಿನಲ್ಲಿ ಐಒಟಿ ಸೆನ್ಸಾರ್‌ ಸಾಧನಗಳನ್ನು ನಿಯೋಜಿಸಿ ವಿವಿಧ  ಸನ್ನಿವೇಶಗಳ ವಿಶ್ಲೇಷಣೆ ಮಾಡುತ್ತಾ  ಜಮೀನಿನ ಒಳಮಾಹಿತಿಗಳನ್ನ ನೀಡುತ್ತದೆ.  ಇದರಿಂದ ಇಳುವರಿ ಚೆನ್ನಾಗಿರುತ್ತದೆ. ಗುಣಮಟ್ಟ, ಲಾಭ ಎರಡೂ ಹೆಚ್ಚಾಗುತ್ತದೆ. ನೀರಾವರಿ ನಿರ್ವಹಣೆ ಕೂಡಾ ಮಾಹಿತಿ ನೀಡುತ್ತದೆ. ಕೀಟ ಮತ್ತು ರೋಗಗಳ ಮುನ್ಸೂಚನೆ ನೀಡುತ್ತದೆ. ಒಂದು ಕಂಬಕ್ಕೆ ಎಲ್ಲಾ ಸೆನ್ಸಾರ್‌ ಗಳನ್ನು ಇನ್‌ ಸ್ಟಾಲ್‌ ಮಾಡಲಾಗುತ್ತದೆ.  ಇದಕ್ಕೆ ವಿದ್ಯುತ್‌ ಬೇಕಾಗಿಲ್ಲ. ಸಂಪೂರ್ಣ ಸೌರಶಕ್ತಿ ಚಾಲಿತ. ಇದರಲ್ಲೊಂದು ಸಿಮ್‌ ಇರುತ್ತದೆ. ನಿಮ್ಮ ಪ್ರದೇಶದಲ್ಲಿ ಯಾವುದರ ನೆಟ್‌ ವರ್ಕ್‌ ಚೆನ್ನಾಗಿರುತ್ತದೆಯೋ ಅದೇ ಸಿಮ್‌ ಅದರಲ್ಲಿರುತ್ತದೆ. ಎರಡು ವಿಧದ ಅಪ್ಲಿಕೇಶನ್‌ ಗಳನ್ನು ನೀಡಲಾಗುತ್ತದೆ. ಒಂದು ವೆಬ್‌ ಅಪ್ಲಿಕೇಶನ್‌. ಇದರಲ್ಲಿ ಕಂಪ್ಯೂಟರ್‌ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಜೊತೆಗೆ ಮೊಬೈಲ್‌ ಆಪ್‌ ಮೂಲಕ ದೈನಂದಿನ ಮಾಹಿತಿಯನ್ನು ಕೂಡಾ ಪಡೆಯಬಹುದು. 

ಇಲ್ಲಿ ಸೆನ್ಸಾರ್‌ ಗಾಳಿಯ ದಿಕ್ಕು, ತೇವಾಂಶ, ಮಣ್ಣಿನ ಆರೋಗ್ಯ ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡುತ್ತದೆ. ಇದರ ಮೂಲಕ ನಿಮಗೆ ನಿಖರ ಹವಾಮಾನ ಮಾಹಿತಿ ಸಿಗುತ್ತದೆ. ಅಂದರೆ ಯಾವಾಗ ಮಳೆ ಬರುತ್ತದೆ, ಎಷ್ಟು ಪ್ರಮಾಣದಲ್ಲಿ ಮಳೆ ಆಗುತ್ತದೆ. ಇದರಿಂದ ಫಸಲಿನ ಮೇಲಾಗುವ ಪರಿಣಾಮದ ಮಾಹಿತಿ ಸಿಗುತ್ತದೆ.  ಇದರಿಂದ ಕೀಟ ನಿರ್ವಹಣೆ, ರೋಗ ನಿರ್ವಹಣೆಯ ಮುನ್ಸೂಚನೆ ಸಿಗುತ್ತದೆ. ಮತ್ತು ನಿರ್ವಹಣೆ ಸುಲಭವಾಗಿರುತ್ತದೆ. 

ಡಾಟಾ ವಿಶ್ಲೇಷಣೆ ಮತ್ತು ಕ್ಯಾಲ್ಕುಲೇಶನ್‌ ಕ್ಲೌಡ್‌ ನಲ್ಲಿ ರನ್‌ ಆಗುತ್ತದೆ. ಜೊತೆಗೆ ಕ್ಷಣ ಕ್ಷಣದ  ಮಾಹಿತಿ ಸಿಗುತ್ತದೆ. ಬಹುಹಂತದ ಸೆನ್ಸಾರಿಗಳಿಗಾಗಿ ಡ್ಯಾಶ್‌ ಬೋರ್ಡ್‌ ಇರುತ್ತದೆ. ಇದು ಸೌರ ಶಕ್ತಿ ಚಾಲಿತ.  10 ದಿನಗಳ ಬ್ಯಾಟರಿ ಬ್ಯಾಕಪ್.‌ ಪ್ರಸ್ತುತ ಇದನ್ನು ತೋಟಗಾರಿಕೆ ಬೆಳೆಗಳಾದ  ದ್ರಾಕ್ಸಿ, ಟೊಮ್ಯಾಟೋ ದಾಳಿಂಬೆ ಬೆಳೆಗಳಿಗೆ  ಮಾಡಲಾಗುತ್ತಿದೆ . 

ಯಾವ ಕ್ಷೇತ್ರದ ಬಗ್ಗೆ ಹೆಚ್ಚಿನ ಆದ್ಯತೆ..?

ಇದರಲ್ಲಿ ಹೆಚ್ಚಾಗಿ ಕೇಂದ್ರೀಕರಿಸುವುದು  ಕೀಟ ಮತ್ತು ರೋಗ ಮುನ್ಸೂಚನೆಗಳು, ನೀರಾವರಿ ಸಲಹೆಗಳು , ಹವಾಮಾನ ಮಾಹಿತಿ ಮುನ್ಸೂಚನೆಗಳು ಮತ್ತು ಕೃಷಿ ತಜ್ಞರಿಂದ ಸಲಹೆಗಳು .  ಫಸಲಿಗೆ ಬರುವ ಮತ್ತು  ಬರಬಹುದಾದ ರೋಗಗಳ ಮಾಹಿತಿ ಮೊದಲೇ ಸಿಗುತ್ತದೆ. ಫಸಲಿನ ನೀರು ನಿರ್ವಹಣೆ ಸಮಸ್ಯೆಯಿಂದ ಉಂಟಾಗುವ ನಷ್ಟಗಳ ಕುರಿತು ಮಾಹಿತಿ ಜೊತೆಗೆ ಪರಿಹಾರ ಸಿಗುತ್ತದೆ. ಹವಾಮಾನದ ನೈಜ ಸಮಯದ  ಮಾಹಿತಿ ಸಿಗುತ್ತದೆ. ಜೊತೆಗೆ ಫಸಲಿಗೆ ಏನಾದರೂ ಸಮಸ್ಯೆ ಇದ್ದರೆ, ತಜ್ಞರ ಜೊತೆ ಮಾಹಿತಿ ಪಡೆದು ಅದರ ಪರಿಹಾರ ಪಡೆದುಕೊಳ್ಳಬಹುದು. 

ನೀರಾವರಿ ಸಲಹೆ ಮತ್ತು ವೇಳಾಪಟ್ಟಿ

ಇದು ದಿನದ 24 ಗಂಟೆಯೂ  ಮಣ್ಣಿನ ತೇವಾಂಶ ಮೇಲ್ವಿಚಾರಣೆ ಮಾಡುತ್ತದೆ. ತೋಟದಲ್ಲಿ ಬಿದ್ದ ಮಳೆಯ ಲೆಕ್ಕಾಚಾರ, ಹವಾಮಾನ ಮುನ್ಸೂಚನೆಯ ಮಾಹಿತಿ ಕ್ರೋಡಿಕರಿಸಿ ದಿನನಿತ್ಯ ವರದಿ ನೀಡುತ್ತದೆ.

ಕೃಷಿ ತಜ್ಞರಿಂದ ಸಲಹೆ

ಎಲ್ಲಾ ನೋಂದಾಯಿತ ರೈತರು ಕೃಷಿ ತಜ್ಞರ ಮಾಹಿತಿ ಪಡೆಯಬಹುದು.  ಜಮೀನ ಮೇಲ್ವಿಚಾರಣೆ ಮತ್ತು ಸಲಹೆಗಳು ಸದಾ ಸಿಗುತ್ತದೆ. 

ಒಟ್ಟಿನಲ್ಲಿ ಹೇಳುವುದಾದರೆ, ಯುಕ್ತಿಕ್ಸ್‌ ಗಿಡಾಬಿಟ್ಸ್‌ ಫ್ಲಾಟ್‌ ಫಾರಂ ಕೃಷಿಕರ ಪಾಲಿಗೆ ವರದಾನವೇ ಹೌದು. ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಬಂದಿರುವ ಈ ಡಿವೈಸ್‌ ರೈತರ ಲಾಭವನ್ನು ಹೆಚ್ಚಿಸುತ್ತದೆ. ತಜ್ಞರ ಸಲಹೆ ಒದಗಿಸುತ್ತದೆ. ಹಾಗೂ ರೈತರಿಗೆ ನೈಜ ಸಮಯದ ನೆರವು ನೀಡುತ್ತದೆ. 

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.