1. ಸುದ್ದಿಗಳು

ಬರೋಬ್ಬರಿ 46 ವರ್ಷಗಳಿಂದ ತೇಲುತ್ತಿದ್ದ ಹಾಂಗ್ ಕಾಂಗ್ ನ ಪ್ರಸಿದ್ಧ “ಜಂಬೋ ಪ್ಲೋಟಿಂಗ್ ರೆಸ್ಟೋರೆಂಟ್” ಮುಳುಗಡೆ!

Kalmesh Totad
Kalmesh Totad
Hong Kong's famous "Jumbo Floating Restaurant" sinks

46 ವರ್ಷಗಳಿಂದ ತೇಲುತ್ತಿದ್ದ ಹಾಂಗ್ ಕಾಂಗ್ ನ ಪ್ರಸಿದ್ಧ ಜಂಬೋ ಪ್ಲೋಟಿಂಗ್ ರೆಸ್ಟೋರೆಂಟ್ ಹವಾಮಾನದ ಪರಿಣಾಮದಿಂದಾಗಿ ಮುಳುಗಿದ ಘಟನೆ ದಕ್ಷಿಣ ಚೀನಾದ ಸಮುದ್ರದಲ್ಲಿ ನಡೆದಿದೆ. ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ: Breaking: ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ; 920 ಜನ ಸಾವು; ಸಾವಿರಾರು ಜನರಿಗೆ ಗಂಭೀರ ಗಾಯ..!

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..

ನೀರಿನಲ್ಲಿ ಮುಳುಗುತ್ತಿರುವ ಹಾಂಗ್‌ಕಾಂಗ್‌ನ ಜಂಬೋ ಪ್ಲೋಟಿಂಗ್ ರೆಸ್ಟೋರೆಂಟ್...

ಕಳೆದ 46 ವರ್ಷಗಳಿಂದ ಪ್ರವಾಸಿಗರ ಹಾಗೂ ಗಣ್ಯಾತಿಗಣ್ಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಜಂಬೋ ತೇಲುವ ರೆಸ್ಟೋರೆಂಟ್‌ (Jumbo Floating Restaurant) ಇತಿಹಾಸದ ಪುಟ ಸೇರಿದಂತಾಗಿದೆ.

ಈ ದುರ್ಘಟನೆಯಲ್ಲಿ ರೆಸ್ಟೋರೆಂಟ್ ನ ಯಾವುದೇ ಸಿಬ್ಬಂದಿಗಳು ಗಾಯಗೊಂಡಿಲ್ಲ ಎಂದು ಅಬೇರ್ಡೀನ್ ರೆಸ್ಟೋರೆಂಟ್ ಎಂಟರ್ ಪ್ರೈಸಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಕ್ಷಿಶಾ ದ್ವೀಪ ಪ್ರದೇಶವನ್ನು ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ತೇಲುವ ರೆಸ್ಟೋರೆಂಟ್ ಮುಳುಗಿರುವುದಾಗಿ ವರದಿಯಲ್ಲಿ ತಿಳಿದು ಬಂದಿದೆ.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ!

ಈ ತೇಲುವ ರೆಸ್ಟೋರೆಂಟ್ 1976ರಿಂದಲೂ ಅಬೇರ್ಡೀನ್ ಬಂದರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿತ್ತು. ರೆಸ್ಟೋರೆಂಟ್ ಜವಾಬ್ದಾರಿ ಹೊತ್ತಿದ್ದ ಟೇಯಿಂಗ್ ಕಂಪನಿ ತೇಲುವ ಹಡಗಿನ ರೆಸ್ಟೋರೆಂಟ್ ಅನ್ನು ರಕ್ಷಿಸುವ ಪ್ರಯತ್ನ ವಿಫಲವಾಗಿತ್ತು. ಅಂದಾಜು ಒಂದು ಸಾವಿರ ಮೀಟರ್ ನಷ್ಟು ನೀರಿನ ಆಳವಿದ್ದು, ಇದೊಂದು ತುಂಬಾ ದುಃಖಕರ ಸಂಗತಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಚೀನಿ ಸಾಮ್ರಾಜ್ಯಶಾಹಿ ಅರಮನೆಯಂತೆ ಹೋಲುವ ಈ ಹಡಗು 1976ರಿಂದ ಕಾರ್ಯಾಚರಿಸುತ್ತಿದ್ದು, ರಾಣಿ ಎಲಿಜಬೆತ್ ಮತ್ತು ಟಾಮ್ ಕ್ರೂಸ್ ನಂತಹ ಪ್ರಸಿದ್ಧ ವ್ಯಕ್ತಿಗಳು ಭೇಟಿ ನೀಡಿದ್ದರು.

Published On: 23 June 2022, 04:10 PM English Summary: Hong Kong's famous "Jumbo Floating Restaurant" sinks

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.