1. ಸುದ್ದಿಗಳು

ಮಿಶ್ರ ಬೇಸಾಯ: ತೆಂಗಿನ ಸಾಲಿನ ನಡುವೆ ಚೆಂಡುಹೂವು

Multi crop

ಭಾರತವು ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು , ಕೃಷಿಯಲ್ಲಿ ಅನೇಕ ಮೈಲುಗಲ್ಲುಗಳನ್ನು ಸೃಷ್ಟಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಹಾಗೂ ಕಡಿಮೆ ಇಳುವರಿಗಳಿಂದ ಕೃಷಿಯಲ್ಲಿಯುವಕರ ಆಸಕ್ತಿ ಕಡಿಮೆಯಾಗುತ್ತಿದೆ. ಜನರು ಜೀವನೋಪಾಯಕ್ಕಾಗಿ ಪಟ್ಟನಗಳತ್ತ ಮುಖಮಾಡುತ್ತಿದ್ದಾರೆ . ಇಂತಹ ಸಮಸ್ಯೆಗಳನ್ನು ತಡೆಯುವಲ್ಲಿ ಮಿಶ್ರಬೇಸಾಯ ಸಹಾಯಕವಾಗಬಲ್ಲದು.

ಮಿಶ್ರಬೇಸಾಯ ಎಂದರೆ ಕೃಷಿ ಬೆಳೆಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿಸಾಕಣೆ,  ಜೇನುಸಾಕಣೆ, ರೇಷ್ಮೆ ಕೃಷಿ ಮುಂತಾದವು ಬೇಸಾಯ ಅಳವಡಿಸಿಕೊಳ್ಳುವುದನ್ನುಮಿಶ್ರ ಬೇಸಾಯ ಪದ್ಧತಿ ಎನ್ನುವರು .

ಅಲ್ಲದೆ ಮಿಶ್ರ ಬೇಸಾಯವು , ಒಂದಕ್ಕಿಂತ ಹೆಚ್ಚು ಕೃಷಿ ಬೆಳೆಗಳನ್ನು ಏಕಕಾಲಕ್ಕೆನಿಯಮಿತ ಅಂತರ ಕಾಯ್ದುಕೊಂಡು ಬೆಳೆಗಳನ್ನು ಒಂದೇ ಭೂಮಿಯಲ್ಲಿ ಬೆಳೆಯುವುದೂ ಆಗಿದೆ. ( ಉದಾ: ತೆಂಗಿನಮರಗಳೊಂದಿಗೆ ಚಂಡುಹೂವು ಕೃಷಿ.) ಪುರಾತನ ಇತಿಹಾಸ ಹೊಂದಿದ ಮಿಶ್ರ ಬೇಸಾಯ ಪದ್ಧತಿಯು ಭಾರತದ ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ.

ಮಿಶ್ರ ಬೇಸಾಯ ಪದ್ಧತಿಯ ಪ್ರಮುಖ ಗುಣಲಕ್ಷಣಗಳೆಂದರೆ

೧. ಈ ವ್ಯವಸಾಯದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುವುದು.

೨. ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸುವುದು.

೩. ನಿರಂತರ ಹಾಗೂ ಅಧಿಕ ಇಳುವರಿ.

೪ ರೈತರ ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

ಈ  ಮಿಶ್ರಬೇಸಾಯವನ್ನುಉದಾಹರಣೆಯೊಂದಿಗೆ ಹೇಳಬೇಕೆಂದರೆ ಕೃಷಿಚಟುವಟಿಕೆಗಳೊಂದಿಗೆ ಹಸು ,ಕುರಿ ,ಮೇಕೆ, ಎಮ್ಮೆಗಳಂತಹ ಪ್ರಾಣಿಗಳನ್ನುಸಾಕುವುದರಿಂದ ಅವು ಪ್ರತಿದಿನ ಹಾಲು ಹಾಗೂ ಸಗಣಿಗಳನ್ನು ನೀಡುತ್ತವೆ . ಸಗಣಿಗೊಬ್ಬರ ತಯಾರಿಕೆಗೆ ಸಹಾಯಕವಾದರೆ , ಹಾಲು ಪ್ರತಿದಿನವೂ ಮಾರಾಟವಾಗುತ್ತದೆ. ಪ್ರತಿದಿನ ಒಂದು ಲೀಟರ್ ಹಾಲಿಗೆ ಕನಿಷ್ಟ ಬೆಲೆ 35 ರೂಪಾಯಿಗಳು ಮತ್ತು ಚನ್ನಾಗಿ ತಯಾರಿಸಿದ ಸಾವಯುವ ಗೊಬ್ಬರದ ಇಂದಿನ ಆನ್ಲೈನ್ಬೆಲೆ ಪ್ರತಿ 5 ಕೆಜಿಗೆ  250 ರಿಂದ 350 ರೂಪಾಯಿ .ಹೀಗೆ ಜೇನು ಸಾಕಾಣಿಕೆ , ಕೊಳಿ ಸಾಕಾಣಿಕೆ , ಅಡಿಕೆ ಬೆಳೆಯಲ್ಲಿ ಪುಷ್ಪಕೃಷಿ , ಹತ್ತಿಯೊಂದಿಗೆ ಕಲ್ಲಂಗಡಿ ಹಣ್ಣಿನ ಕೃಷಿ ಗಳಂತಹ ಹಲವಾರು ಮಿಶ್ರಬೇಸಾಯ ಪದ್ಧತಿಗಳು ಅಧಿಕ ಲಾಭದಾಯಕವಾಗಿದ್ದು ,  ರೈತರಿಗೆ ನಿರಂತರ ಹಣವನ್ನು ಒದಗಿಸಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತವೆ. ಅಲ್ಲದೆ ಬರೀ ಕೃಷಿಬೆಳೆಯ ಮೇಲೆ ಅಧಿಕ ಕಾಲದವರೆಗಿನ ಅವಲಂಬನೆ ತಡೆಯಲು ಮತ್ತು ನಷ್ಟಗಳನ್ನು ಭರಿಸಲು ಸಹಾಯಮಾಡುತ್ತದೆ.

ಲೇಖನ : ಸಮ್ಮೇದ ಮೈಗೂರ

Published On: 29 April 2021, 09:32 AM English Summary: High yield from mixed farming

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.