ಕಷ್ಟಪಟ್ಟು ಬಿತ್ತಿ ಬೆಳೆದ ರೈತ ಕೊನೆಗೆ ಉತ್ತಮ ಬೆಲೆ ಕಾಣದೇ ಕಣ್ಣೀರು ಹಾಕುವುದು ರೈತಾಪಿ ವರ್ಗವನ್ನು ಬಲ್ಲ ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ, ಕೃಷಿಯಲ್ಲಿ ನೂತನ ಮಾರ್ಗಗಳನ್ನು ಹುಡುಕಿಕೊಂಡು ಆರ್ಥಿಕತೆಯನ್ನು ಸ್ಥಿರವಾಗಿ ಇಟ್ಟುಕೊಳ್ಳವುದು ಕೂಡ ಇಂದಿನ ದಿನಕ್ಕೆ ಬಹಳ ಮುಖ್ಯವಾದದ್ದಾಗಿದೆ. ಇಲ್ಲಿದೆ ರೈತರಿಗೆ ಲಾಭದಾಯಕ ಉಪಾಯ. ನೀವು ಈ ರೀತಿ ಮಾಡುವ ಮೂಲಕ ಲಕ್ಷ ರೂಪಾಯಿವರೆಗೆ ಲಾಭ ಪಡೆದುಕೊಳ್ಳಬಹುದು.
ಹೌದು! ನೀವು ರೈತರಾಗಿದ್ದು ಸೂರ್ಯಕಾಂತಿಯನ್ನು ಬೆಳೆಯುತ್ತಿದ್ದರೆ ಇಲ್ಲಿದೆ ನಿಮಗೆ ಒಂದು ಸರಳ ಉಪಾಯ. ಸೂರ್ಯಕಾಂತಿ ನೋಡಲು ಎಷ್ಟು ಸುಂದರ ಮತ್ತು ಆಕರ್ಷಕವಾಗಿದೆಯೋ ಅದರ ಹೂವು, ಬೀಜಗಳು ಅಷ್ಟೇ ಪ್ರಯೋಜನಕಾರಿಯಾಗಿವೆ ಕೂಡ. ಸೂರ್ಯಕಾಂತಿ ಪ್ರಪಂಚದ ಅತ್ಯಂತ ಸುಂದರವಾದ ಹೂವುಗಳಲ್ಲಿ ಒಂದಾಗಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಸೂರ್ಯಕಾಂತಿ ಹೂವುಗಳಿಂದ ಅನೇಕ ರೀತಿಯ ಔಷಧಿಗಳನ್ನು ಸಹ ತಯಾರಿಸಲಾಗುತ್ತದೆ . ಇದು ನಮ್ಮ ದೇಹಕ್ಕೆ ತುಂಬ ಪ್ರಯೋಜನಕಾರಿಯೂ ಹೌದು ಎಂದು ಸಾಬೀತಾಗಿದೆ.
ಇದನ್ನೂ ಓದಿರಿ:
Pomegranate Farming:ಈ ತಂತ್ರಗಳನ್ನು ಅನುಸರಿಸಿ ಲಾಭದಾಯಕ ದಾಳಿಂಬೆ ಬೆಳೆಯಿರಿ
ಸೂರ್ಯಕಾಂತಿಯಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು
ಸೂರ್ಯಕಾಂತಿ ಬೆಳೆಯನ್ನು ನಗದು ಬೆಳೆ ಎಂದೂ ಕರೆಯುತ್ತಾರೆ ಎಂಬುದು ನಿಮಗೆ ತಿಳಿದಿದಿಯೇ. ಹೌದು! ಖಾರಿಫ್, ರಬಿ ಮತ್ತು ಜಾಯೆದ್ ಈ ಮೂರು ಋತುಗಳಲ್ಲಿ ರೈತರು ಸುಲಭವಾಗಿ ಬೆಳೆಯಬಹುದಾದ ಒಂದು ಬೆಳೆ ಎಂದರೆ ಅದು ಸೂರ್ಯಕಾಂತಿ ಬೆಳೆ. ಸುಮಾರು 40 ರಿಂದ 50 ಪ್ರತಿಶತ ಸೂರ್ಯಕಾಂತಿ ಬೀಜಗಳು ಖಾದ್ಯ ತೈಲವನ್ನು ಹೊಂದಿರುತ್ತವೆ . ಯಾವ ರೈತರು ಸುಲಭವಾಗಿ ಉತ್ತಮ ಲಾಭ ಪಡೆಯಬಹುದು.
ಈ ಕಾರಣದಿಂದಾಗಿ ಸೂರ್ಯಕಾಂತಿ ಬೆಳೆಯ ಕೃಷಿಯು ದೇಶದ ರೈತವರ್ಗದಲ್ಲಿ ಬಹಳ ಜನಪ್ರಿಯವಾಗಿದೆ. ನೀವು ಸೂರ್ಯಕಾಂತಿ ಬೀಜಗಳಿಂದ ಮತ್ತು ಎಣ್ಣೆಯಲ್ಲಿ ವ್ಯಾಪಾರ ಮಾಡಿದರೆ ಅಥವಾ ಸೂರ್ಯಕಾಂತಿ ಕೃಷಿ ಮಾಡಿದರೆ, ನೀವು ಪ್ರತಿ ವರ್ಷ ಅದರಿಂದ ಉತ್ತಮ ಹಣವನ್ನು ಗಳಿಸಬಹುದು.
Tomato Cultivation: ಮನೆಯಲ್ಲೇ ಟೊಮೆಟೊ ಬೆಳೆಯುವುದು ಹೇಗೆ..?
Pomegranate Farming:ಈ ತಂತ್ರಗಳನ್ನು ಅನುಸರಿಸಿ ಲಾಭದಾಯಕ ದಾಳಿಂಬೆ ಬೆಳೆಯಿರಿ
ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೀಜಗಳಿಗೆ ಮತ್ತು ಸೂರ್ಯಕಾಂತಿಯ ಎಣ್ಣೆಗೆ ಉತ್ತಮ ಬೇಡಿಕೆ ಇದೆ. ಹಾಗೂ ಉತ್ತಮ ಬೆಲೆಯೂ ಇದೆ ಎಂಬುದು ಗಮನದಲ್ಲಿರಲಿ. ಸೂರ್ಯಕಾಂತಿ ಬೀಜಗಳಲ್ಲಿ ಸತ್ವಯುತ ಪೌಂಷ್ಟಿಕಾಂಶಗಳಿದ್ದು ಇದನ್ನು ಆರೋಗ್ಯದ ದೃಷ್ಟಿಯಲ್ಲಿ ಡಯಟ್ ಮಾಡುವ ಪ್ರತಿಯೊಬ್ಬರು ತಿನ್ನುತ್ತಾರೆ.
ಸೂರ್ಯಕಾಂತಿ ಎಣ್ಣೆಯ ಪ್ರಯೋಜನಗಳು
ಸೂರ್ಯಕಾಂತಿ ಎಣ್ಣೆ ವಿರೇಚಕ ಗುಣಗಳನ್ನು ಹೊಂದಿದೆ. ಅದರ ಬಳಕೆಯು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಎಣ್ಣೆಯಲ್ಲಿನ ಕೊಲೆಸ್ಟ್ರಾಲ್ ಮಟ್ಟವೂ ಒಳ್ಳೆಯದು. ಸೂರ್ಯಕಾಂತಿ ಎಣ್ಣೆಯನ್ನು ಉದ್ದನೆಯ ದಪ್ಪ ಕೂದಲಿಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್-ಇ ಸಮೃದ್ಧವಾಗಿದೆ, ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಸೂರ್ಯಕಾಂತಿ ಎಣ್ಣೆ ಚರ್ಮ ರೋಗಗಳಿಗೆ ತುಂಬಾ ಪ್ರಯೋಜನಕಾರಿ. ಇದು ಅಸ್ತಿತ್ವದಲ್ಲಿರುವ ಉರಿಯೂತದ ಡರ್ಮಟೈಟಿಸ್ ಅನ್ನು ನಿವಾರಿಸುತ್ತದೆ. ಹೀಗೆ ಸೂರ್ಯಕಾಂತಿಯನ್ನು ಹಲವಾರು ಬಗೆಯಲ್ಲಿ ಬಳಸಿಕೊಳ್ಳುವ ಮೂಲಕ ರೈತರು ಲಕ್ಷಗಟ್ಟಲೆ ಆದಾಯವನ್ನು ಮಾಡಿಕೊಳ್ಳಬಹುದು.
ಕೋಳಿ ಸಾಕಣೆಗೆ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು..?
Indoor Fish Farming: ಒಳಾಂಗಣ ಮೀನು ಸಾಕಾಣಿಕೆ ಮಾಡಿ 3 ಪಟ್ಟು ಲಾಭ ಗಳಿಸಿ
Share your comments