1. ಸುದ್ದಿಗಳು

ಗುಡ್‌ನ್ಯೂಸ್‌: ಇಲ್ಲಿದೆ ರೈತರ ಮಕ್ಕಳಿಗೆ 50% ಮೀಸಲಾತಿ; ಏನಿದು ಗೊತ್ತೆ?

Kalmesh T
Kalmesh T
Here is 50% reservation for farmers' children

ಕೃಷಿ ಸಂಬಂಧಿತ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಿಸಲು ಬಯಸುವ ರೈತರ ಮಕ್ಕಳಿಗೆ ಶೇಕಡ 50ರಷ್ಟು ಸೀಟುಗಳನ್ನು ಮೀಸಲಿರಿಸಲಾಗಿದೆ. ಈ ಕೋಟಾದನ್ವಯ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಈ ಸಿಇಟಿ ಪ್ರಾಯೋಗಿಕ ಪರೀಕ್ಷೆ ಬರೆಯಬೇಕು.

ಇದನ್ನೂ ಓದಿರಿ:  2022 ರಲ್ಲಿ 144.67 ಲಕ್ಷ ಟನ್‌ ಆಹಾರ ಧಾನ್ಯ ಉತ್ಪಾದನಾ ಗುರಿ!

ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್ ಮೆಡಿಕಲ್ ಮತ್ತಿತರ ಪದವಿ ತರಗತಿಗಳಿಗೆ ಪ್ರವೇಶ ಬಯಸುವವರು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ ಇ ಟಿ)ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಜುಲೈ 12ರಂದು ಬೆಳಿಗ್ಗೆ 9 ಗಂಟೆಗೆ ರಾಜ್ಯದ ಎಲ್ಲಾ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ 16 ಕೇಂದ್ರಗಳಲ್ಲಿ ಮತ್ತೊಂದು ಸಿಇಟಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಕೃಷಿ ಸಂಬಂಧಿತ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಿಸಲು ಬಯಸುವ ರೈತರ ಮಕ್ಕಳಿಗೆ ಶೇಕಡ 50ರಷ್ಟು ಸೀಟುಗಳನ್ನು ಮೀಸಲಿರಿಸಲಾಗಿದೆ.

ಈ ಕೋಟಾದಡಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಈ ಸಿಇಟಿ ಪ್ರಾಯೋಗಿಕ ಪರೀಕ್ಷೆ ಬರೆಯಬೇಕು.

ಬ್ರೇಕಿಂಗ್‌; 276 ಕಳಪೆ ಬೀಜ ವಿತರಣೆ ಪ್ರಕರಣ ದಾಖಲು, 416 ಪರವಾನಗಿ ರದ್ದು!

ಈ ಪರೀಕ್ಷೆ 50 ಪ್ರಶ್ನೆಗಳ ಎರಡು ನೂರು ಅಂಕಗಳಿಗೆ ವಿನ್ಯಾಸಗೊಂಡಿದ್ದು ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ.

ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳಿಗೆ ಕೃಷಿ ವಿಜ್ಞಾನ ಪದವಿಗಳಿಗೆ ಸಿಇಟಿ ಅಂಕಪಟ್ಟಿಯಲ್ಲಿ ಪ್ರತ್ಯೇಕ ರಾಂಕ್ ನೀಡಲಾಗುತ್ತದೆ.

ಇದರ ಸಹಾಯದಿಂದ ವಿದ್ಯಾರ್ಥಿಗಳು ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ವೈದ್ಯಕೀಯ, ಆಹಾರ ತಂತ್ರಜ್ಞಾನ, ಅರಣ್ಯ ವಿಜ್ಞಾನ,

ಮೀನುಗಾರಿಕೆ, ಗೃಹ ವಿಜ್ಞಾನ, ಅಗ್ರಿಕಲ್ಚರ್ ಇಂಜಿನಿಯರಿಂಗ್,ಪಶು ಸಂಗೋಪನೆ ತಂತ್ರಜ್ಞಾನ,ಬಯೋ ಟೆಕ್ನಾಲಜಿ, ಅಗ್ರಿಕಲ್ಚರಲ್ ಮಾರ್ಕೆಟಿಂಗ್ ವಿಭಾಗಗಳಲ್ಲಿ ಪದವಿ ಪಡೆಯಲು ಅರ್ಹರಾಗುತ್ತಾರೆ.

ಗುಡ್‌ನ್ಯೂಸ್‌: ರಾಜ್ಯದ ರೈತರ ಏಳ್ಗೆಗಾಗಿ 400 ಕೋಟಿ ಅನುದಾನ ಮೀಸಲು- ಸಚಿವ ಬಿ.ಸಿ. ಪಾಟೀಲ

ಎಲ್ಲೆಲ್ಲಿ ನಡೆಯಲಿದೆ?

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯ, ಶಿವಮೊಗ್ಗ ಹಾಗೂ ಬೀದರ್ ನ ಪಶುಸಂಗೋಪನ ವಿಶ್ವವಿದ್ಯಾನಿಲಯ, ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷ ಪದವಿಗಳಿಗೆ ಪ್ರವೇಶಾವಕಾಶ

ಜೊತೆಗೆ ಈ ವಿಶ್ವವಿದ್ಯಾನಿಲಯಗಳ ಸಬ್ ಕ್ಯಾಂಪಸ್ ಗಳಲ್ಲಿ( ಮಂಡ್ಯ, ಹಾಸನ, ಹಿರಿಯೂರು,ಕೋಲಾರ, ಹೊಸಪೇಟೆ, ಗಂಗಾವತಿ, ಕಲಬುರ್ಗಿ, ಶಿರಸಿ,ಮೂಡಿಗೆರೆ, ಚಿಂತಾಮಣಿ, ಬೆಳಗಾವಿ,ಇಲವಾಲ (ಮೈಸೂರು) ಕೊಪ್ಪಳ, ಪೊನ್ನಂಪೇಟೆ, ವಿಜಯಪುರ,ಹಾವೇರಿ ಹಾಗೂ ಭೀಮರಾಯನ ಗುಡಿ) ಪ್ರವೇಶಾವಕಾಶವಿದೆ.

ಈ ಪದವಿಗಳನ್ನು ಪಡೆಯುವ ವಿದ್ಯಾರ್ಥಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹುದ್ದೆಗಳ ಜೊತೆಗೆ ಬ್ಯಾಂಕಿನಲ್ಲಿ ಫೀಲ್ಡ್ ಆಫೀಸರ್ ಪಶು ವೈದ್ಯರು ಕೃಷಿ ವಿಜ್ಞಾನಿಗಳು ಬಿಜೆಪಿ ಪರ ಕೀಟನಾಶಕ ಕಂಪನಿಗಳಲ್ಲಿ ತಂತ್ರಜ್ಞರು ಖಾದ್ಯ ವಲಯಗಳಲ್ಲಿ ಅಧಿಕಾರಗಳಾಗಿ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ.

ರಾಜ್ಯದಲ್ಲಿ ಮುಂದುವರೆಯಲಿದೆ ಮಳೆಯಬ್ಬರ; ಇನ್ನೂ 4-5 ದಿನಗಳ ಕಾಲ ಭಾರೀ ಮಳೆ..!

ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡುವ ಪ್ರಕ್ರಿಯೆ ಜುಲೈ. ಒಂದರಿಂದ ಆರಂಭವಾಗಿದೆ.( ಜುಲೈ 6 (5 ಗಂಟೆಯೊಳಗೆ )ದಾಖಲಾತಿ ಸಲ್ಲಿಕೆಗೆ ಕೊನೆ ದಿನವಾಗಿದೆ. 

ಕೃಷಿ ಕೊಟದಡಿ ಅರ್ಹ /ಅರ್ಹರಲ್ಲದ ವಿದ್ಯಾರ್ಥಿಗಳ ಪಟ್ಟಿಯನ್ನು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಅಂತರ್ಜಾಲದಲ್ಲಿ ಜುಲೈ 8ರಂದು ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಅಧಿಕೃತ ಅಂತರ್ಜಾಲ ಗಳಿಂದ ಪಡೆಯಬಹುದಾಗಿದೆ

www.uasbangalore.edu.in

www.uasd.edu.in

www.uhsbagalkot.edu.in

www.uahs.edu.in

www.uasraichur.edu.in

Published On: 07 July 2022, 11:38 AM English Summary: Here is 50% reservation for farmers' children

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.