1. ಸುದ್ದಿಗಳು

ಮುಂದಿನ 5 ದಿನ ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ! ಹವಾಮಾನ ಇಲಾಖೆಯಿಂದ ಆರೆಂಜ್‌ ಅಲರ್ಟ್‌ ಘೋಷಣೆ..

Kalmesh T
Kalmesh T
Heavy rains likely across the island for five days!

ಮುಂಬರುವ ಐದು ದಿನಗಳ ಕಾಲ ರಾಜ್ಯಾದ್ಯಂತ ಅಧಿಕ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯಿಂದ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿರಿ: 70 ಎಕರೆ ಜಾಗ, 5 ಕೋಟಿ ಮರಗಳು, ಒಂದು ದೊಡ್ಡ ಕಾಡನ್ನೇ ಸೃಷ್ಟಿಸಿದ ಆಧುನಿಕ ಭಗೀರಥ!

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..

ಜೂನ್‌ 23 ಮತ್ತು 24ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಮೇಲ್ಮೈ ಸುಳಿಗಾಳಿ ಹಿನ್ನೆಲೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಹೆಚ್ಚು ಮಳೆಯಾಗುವ ಹಿನ್ನೆಲೆಯಲ್ಲಿ ‘ಯಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಜತೆಗೆ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ‘ಆರೆಂಜ್‌ ಅಲರ್ಟ್‌’ ನೀಡಿ ಜಿಲ್ಲಾಡಳಿತಗಳಿಗೆ ಎಚ್ಚರಿಸಲಾಗಿದೆ.

ಉತ್ತರ ಒಳನಾಡಿನ ವಿಜಯಪುರ, ಬೀದರ್‌, ಬೆಳಗಾವಿ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೂಡ ಮುಂದಿನ ಎರಡು ದಿನ ಗುಡುಗು ಸಹಿತ ಮಳೆ ನಿರೀಕ್ಷೆ ಇದ್ದು, ಈ ಜಿಲ್ಲೆಗಳಿಗೂ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ಬರೋಬ್ಬರಿ 23 ಅಡಿ ಉದ್ದದ ಕಬ್ಬು ಬೆಳೆದ ರೈತ! ಅಚ್ಚರಿಯಾದರೂ ಇದು ಸತ್ಯ

ರೈತರೊಬ್ಬರಿಂದ ಬೀಜರಹಿತ ಕಲ್ಲಂಗಡಿ ಕೃಷಿ ಪ್ರಯೋಗ! ವಿದೇಶದಿಂದ ನೋಡಲು ಬಂದ ಸಂಶೋಧಕರು! 

ಉಳಿದಂತೆ ಈ ಜಿಲ್ಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಮಂಗಳವಾರ, ಬುಧವಾರ ಸಂಜೆ ಬಳಿಕ ಗುಡುಗುಸಹಿತ ಬಿರುಸಿನ ಮಳೆ ಆಗುವ ಲಕ್ಷಣಗಳು ಇವೆ. ನಗರ ವ್ಯಾಪ್ತಿಯ ಹಲವೆಡೆ ಭಾರಿ ಮಳೆ ಸುರಿದರೆ, ಇನ್ನು ಕೆಲವು ಪ್ರದೇಶದಲ್ಲಿ ಸಾಧಾರಣವಾಗಿ ಮಳೆ ಬೀಳಲಿದೆ.

ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ತಿಳಿಸಲಾಗಿದೆ.

Published On: 21 June 2022, 02:46 PM English Summary: Heavy rains likely across the island for five days!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.