1. ಸುದ್ದಿಗಳು

Rain: ಕರ್ನಾಟಕದಲ್ಲಿ ನಾಳೆಯಿಂದ ಜೂನ್‌ 26ರವರೆಗೆ ಭಾರಿ ಮಳೆ ಮೂನ್ಸೂಚನೆ..! ಎಲ್ಲೆಲ್ಲಿ ಏನೇನು..

Kalmesh T
Kalmesh T
Heavy rains forecast in Karnataka from tomorrow

ಕರ್ನಾಟಕದ ಸುಮಾರು ಭಾಗಗಳಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ನಾಳೆಯಿಂದ ಜೂನ್‌ 26ರ ವರೆಗೆ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿರಿ: 

ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ; ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಅರ್ಜಿ ಸಲ್ಲಿಕೆ ಹೇಗೆ?

Breaking: ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ; 920 ಜನ ಸಾವು; ಸಾವಿರಾರು ಜನರಿಗೆ ಗಂಭೀರ ಗಾಯ..!

ಭಾರತೀಯ ಹವಾಮಾನ ಇಲಾಖೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆ ಅಬ್ಬರಿಸಲಿದೆ (Heavy Rain) ಎಂದು ಹೇಳಿದೆ. ಈ ಮೂರು ಜಿಲ್ಲೆಗಳಿಗೆ ಗುರುವಾರದಿಂದ 4 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಜೂನ್ 26ರ ನಂತರ ಕರಾವಳಿಯಲ್ಲಿ ಭಾಗದಲ್ಲಿ ಮಳೆ ಆರ್ಭಟ ತುಸು ಇಳಿಕೆ ಆಗಲಿದೆ. ಉತ್ತರ ಒಳನಾಡಿನ ಭಾಗದಲ್ಲಿ ಭಾರೀ (Heavy Rain) ಮಳೆ ಆಗುವ ಸಾಧ್ಯತೆ ಇದೆ. ಪ್ರತಿ ಗಂಟೆಗೆ ಸುಮಾರು 40 ರಿಂದ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಉತ್ತಮ ಮಳೆ; ಕರಾವಳಿ ಭಾಗದಲ್ಲಿ ಬುಧವಾರ ಉತ್ತಮ ಮಳೆ ಸುರಿದಿದೆ. ಭಟ್ಕಳ, ಹೊನ್ನಾವರ, ಸಿದ್ಧಾಪುರ, ಹಳಿಯಾಳ, ಕುಮಟಾ ಪ್ರದೇಶಗಳಲ್ಲಿ ಧಾರಕಾರವಾಗಿ ಮಳೆಯಾಗಿದೆ. ಕಾರವಾರ, ಶಿರಸಿ, ಅಂಕೋಲಾದ ಕೆಲವು ಕಡೆ ಆಗಾಗ ಸಾಧಾರಣ ಮಳೆ ಆಗಿದೆ.

ಬರೋಬ್ಬರಿ 300 ಕೆ.ಜಿ ತೂಕ, 13 ಅಡಿ ಉದ್ದದ ವಿಶ್ವದ ಅತಿ ದೊಡ್ಡ ಮೀನು ಪತ್ತೆ..! ಏನಿದರ ವಿಶೇಷ ಗೊತ್ತೆ?

ವಿಶ್ವದಾದ್ಯಂತ ಸದ್ದು ಮಾಡುತ್ತಿದೆ ಬರೋಬ್ಬರಿ 19 ಇಂಚಿನ ಅತಿ ಉದ್ದದ ಕಿವಿಯುಳ್ಳ ಈ ಮೇಕೆ! ಅಚ್ಚರಿಯಾದರೂ ಇದು ಸತ್ಯ..

ಮೋಡ ಕವಿದ ಮತ್ತು ತಂಪು ವಾತಾವರಣವಿತ್ತು. ಕುಮಟಾ ಹಾಗೂ ಹಳಿಯಾಳದಲ್ಲಿ ತಲಾ ಒಂದು ಮನೆಗೆ ಮಳೆಯಿಂದ ಹಾನಿಯಾಗಿದೆ. ಕರಾವಳಿ ಭಾಗ; ಉಡುಪಿ, ದಕ್ಷಿಣ ಕನ್ನಡದ ಕೆಲವು ಭಾಗದಲ್ಲಿ ಬುಧವಾರ ಆಗಾಗ ಜೋರು ಮಳೆ (Heavy Rain)  ಸುರಿದ ಬಗ್ಗೆ ವರದಿಯಾಗಿದೆ.

ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣವಿತ್ತು. ಆಗಾಗ ವೇಗದ ಗಾಳಿ ಸಹಿತ ವರ್ಷಧಾರೆಯ ಸಿಂಚನವಾಗಿದೆ. ಉಡುಪಿಯ ಮರ್ಣೆ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಕುಸಿದಿದೆ. ಶಿರೂರಿನಲ್ಲಿ 8.5 ಸೆಂ.ಮೀ. ಮಳೆ ದಾಖಲಾಗಿದೆ. ಹೀಗೆ ಮಳೆ ಮುಂದುವರಿದರೆ ಸಮುದ್ರದ ಅಲೆಗಳ ದೈತ್ಯ ರೂಪ ಪಡೆದು ಕಡಲ್ಕೊರೆತ ಉಂಟಾಗುವ ಆತಂಕವೂ ಇದೆ.

ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಮೂಡಿಗೆರೆ, ಕೊಪ್ಪ, ಕಳಸ, ಆಲ್ದೂರು, ತೆರಿಕೆರೆ ಸೇರಿದಂತೆ ಕೆಲವು ಕಡೆ ಮಳೆ ಸುರಿದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..

Audi E-rickshaw: 2023 ಹೊತ್ತಿಗೆ ಭಾರತದ ರೋಡಿಗೆ ಬರಲಿವೆ ಆಡಿ ಇ-ರಿಕ್ಷಾಗಳು..! ಇವುಗಳ ವಿಶೇಷತೆ ಏನು ಗೊತ್ತೆ?

ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಹುದಗೇರಿ, ಬಿ.ಶೆಟ್ಟಿಗೆರಿ ಮತ್ತು ಹಾತೂರು ಸುತ್ತಮುತ್ತಲೂ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿತ್ತು.

2 ದಿನ ಯೆಲ್ಲೋ ಅಲರ್ಟ್; ಉತ್ತರ ಒಳನಾಡಿನ ಹುಬ್ಬಳ್ಳಿ, ಬೆಳಗಾವಿ ಸುತ್ತಮುತ್ತ ಬುಧವಾರ ಸಾಧಾರಣ ಮಳೆ ಯಾದರೆ, ಇನ್ನು ಕೆಲವೆಡೆ ಮೋಡ ಮುಸುಕಿದ ವಾತಾವರಣ ಇದ್ದು, ಅಲ್ಲಲ್ಲಿ ಸೋನೆ ಮಳೆ ಬಿದ್ದಿದೆ.

ಬೀದರ್, ಕಲಬುರಗಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಜೂ.25 ಮತ್ತು ಜೂ.26 ರಂದು ಗುಡುಗು ಸಹಿತ ಭಾರೀ ಮಳೆ (Heavy Rain)  ನಿರೀಕ್ಷೆ ಇದೆ. ಎರಡು ದಿನ 'ಯೆಲ್ಲೋ ಅಲರ್ಟ' ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿವೆ.

Published On: 23 June 2022, 10:40 AM English Summary: Heavy rains forecast in Karnataka from tomorrow

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.