1. ಸುದ್ದಿಗಳು

ಉತ್ತರ ಕರ್ನಾಟಕದ ಹಲವೆಡೆ ಧಾರಾಕಾರ ಮಳೆ-ನಾಲ್ವರ ಸಾವು, ಸಾವಿರಾರು ಎಕರೆ ಬೆಳೆ ಹಾನಿ

Crop Damage
Crop Damage

ರಾಜ್ಯದಲ್ಲಿ ಮುಂಗಾರು ಆರ್ಭಟ (Heavy rain) ಶುಕ್ರವಾರವೂ ಮುಂದುವರೆಯಿತು. ಕಲ್ಯಾಣ ಕರ್ನಾಟಕದ ಭಾಗದ ಕಲಬುರಗಿ, ರಾಯಚೂರು, ಬಳ್ಳಾರಿ,  ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದ್ದಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಸಂಬಂಧಿತ ದುರ್ಘಟನೆಗೆ ರಾಯಚೂರು ಜಿಲ್ಲೆಯಲ್ಲಿ  (four death) ನಾಲ್ವರು ಸಾವನ್ನಪ್ಪಿದ್ದಾರೆ.

ರಾಯಚೂರು ತಾಲೂಕಿನ ದೇವದುರ್ಗ ಪಟ್ಟಣದ ಗೌರಮ್ಮಪೇಟೆಯಲ್ಲಿ ಗುಡ್ಡಕುಸಿದು ಆಟವಾಡುತ್ತಿದ್ದ ಮಕ್ಕಳಾದ ವಿರೇಶ (13), ರಮೇಶ (10) ಮೃತಪಟ್ಟಿದ್ದಾರೆ. ಅದೇ ರೀತಿ ಸಿಂಗನೋಡಿ ಗ್ರಾಮದಲ್ಲಿ ಸಿಡಲು ಬಡಿದು ಸಹೋದರರಾದ ರವಿಚಂದ್ರ (23) ಹಾಗೂ ವಿಷ್ಣು (18) ಮೃತಪಟ್ಟಿದ್ದಾರೆ.

ಅಪಾರ ಬೆಳೆ ಹಾನಿ(crop damage)

ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಅಫಜಲ್ಪುರ, ಆಳಂದ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಮಳೆಗೆ ಹಳ್ಳಕೊಳ್ಳಗಳು ತುಂಬಿದವು. ರೈತರ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದರಿಂತ (thousands of acre crop damage) ಅಪಾರ ಪ್ರಮಾಣ ಬೆಳೆ ಹಾನಿಯಾಗಿದೆ. ಬಡದಾಳ ಗ್ರಾಮದ ಹಳ್ಳದ ನೀರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಸೇರಿದ ಮಾರುತಿ ಕಾರ್ ಸಿಲುಕಿಕೊಂಡಿತ್ತು. ಗ್ರಾಮಸ್ಥರು ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ಐವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಆಳಂದ  ತಾಲೂಕಿನ ಮಾದನಹಿಪ್ಪರಗಾ, ನಿಂಗದಳ್ಳಿ, ಹೆಬಳಿ, ಜೀರಹಳ್ಳಿ, ಮಟಕಿ, ತೀರ್ಥಹಳ್ಳಗಳಿಗೆ ಪ್ರವಾಹ ಬಂದಿದ್ದರಿಂದ ಈ ಗ್ರಾಮಗಳ ಹಾಗೂ ಕಮಲಾಪುರ ತಾಲೂಕಿನ ಏಳು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ದಸ್ತಾಪುರ ಗ್ರಾಮ ನಡುಗಡ್ಡೆಯಾಗಿದೆ. ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ.

Bike of Petty Vendor
Bike of Petty Vendor

ಕೊಡ ಮಾರುವ ವ್ಯಾಪಾರಿ ಪ್ರಾಣಾಪಾಯದಿಂದ ಪಾರು (petty vendor escape while crossing stream):

ಆಳಂದ ತಾಲೂಕಿನ ಹಡಲಗಿ ಸಮೀಪ ವ್ಯಾಪಕ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳವನ್ನು ಬೈಕ್ (Bike) ನಲ್ಲಿ ದಾಟುತ್ತಿದ್ದ ಪ್ಲಾಸ್ಟಿಕ್ ಕೊಡ ಮಾರುವ ವ್ಯಕ್ತಿಯೊಬ್ಬರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಅವರು ನಂತರ ಮರದ ನೆರವಿನಿಂದ ಜೀವ (petty vendor escape) ಉಳಿಸಿಕೊಂಡಿದ್ದಾರೆ. ಆದರೆ ಬೈಕ್, ಕೊಡಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಮನೆ ಕುಸಿದಿದ್ದು, ಅದರಡಿ ಸಿಲುಕಿದ್ದ 8 ತಿಂಗಳ ಮಗು ಸೇರಿ ನಾಲ್ವರನ್ನು ನೆರೆಹೊರೆಯವರು ರಕ್ಷಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ಮೆಕ್ಕೆಜೋಳ, ಈರುಳ್ಳಿ(onion), ಜೋಳ, ಶೇಂಗಾ ಬೆಳೆ ಹಾನಿಯಾಗಿದ್ದು, ದಾಳಿಂಬೆ (pomegranate) ಬೆಳೆ ಕೊಚ್ಚಿಕೊಂಡು ಹೋಗಿದೆ. ಹೊಲಗಳ ಒಡ್ಡುಗಳಉ ಕೊಚ್ಚಿಕೊಂಡು ಹೋಗಿವೆ. ದಾಳಿಂಬೆ ತೋಟಗಳಲ್ಲಿ ನೀರು ನಿಂತಿದ್ದು, ಹನಿ ನೀರಾವರಿಗೆ ಹಾಕಿದ್ದ ಪೈಪ್ ಲೈನ್ ಕೂಡನೀರಿನ ರಭಸಕ್ಕೆ ಕಿತ್ತುಹೋಗಿದೆ.

Published On: 25 July 2020, 10:09 AM English Summary: Heavy rain pummels kalyana karantaka districts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.