News

ನೀವು Job ಬಿಟ್ಟಿದ್ದೀರಾ? ನಿಮ್ಮ Gratuity Fund ಬಗ್ಗೆ ಚಿಂತೆ ಆಗಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.

14 April, 2022 1:00 PM IST By: Kalmesh T
Have You Left Job? Worried about your Gratuity Fund? Here's the full information

ನೀವು ಈಗಾಗಲೇ ಒಂದು ಕಡೆ ಕೆಲಸ ಮಾಡಿರುತ್ತೀರಿ. ವ್ಯಯಕ್ತಿಕ ಕಾರಣದಿಂದ ಆ ಕೆಲಸ ಬಿಟ್ಟು ಬೇರೆ ಕೆಲಸದತ್ತ ಮುಖ ಮಾಡುತ್ತೀರಿ ಅಥವಾ ಕೆಲಸವನ್ನು ಬಿಡುವ ಸಂದರ್ಭ ಬಂದರೂ ಬರಬಹುದು. ಅಂತ ಸಮಯದಲ್ಲಿ ಈಗಾಗಲೇ ಪಾವತಿಸಿದ ಗ್ರ್ಯಾಚುಟಿ ಫಂಡ್‌ ಹೇಗೆ (Gratuity Fund) ಪಡೆಯಬಹುದು? ಅಥವಾ  ಗ್ರ್ಯಾಚುಟಿ ಫಂಡ್‌ ಬರುತ್ತದೊ ಇಲ್ಲವೋ? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಇಲ್ಲಿದೆ ನಿಮ್ಮ ಚಿಂತೆಗೆ ಪರಿಹಾರ.

ಇದನ್ನು ಓದಿರಿ:

ಸುಸ್ಥಿರ ಕೃಷಿಯಲ್ಲಿ ಸಲ್ಫರ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಏಕೆ ಬೇಕು?

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..

ಯಾವುದೇ ಕಂಪನಿಯಲ್ಲಿ ಐದು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವ ಉದ್ಯೋಗಿಗಳು ಗ್ರಾಚ್ಯುಟಿಗೆ (Gratuity Fund) ಅರ್ಹರಾಗುತ್ತಾರೆ. ಆದರೆ ಗ್ರ್ಯಾಚುಟಿ ಪ್ರಯೋಜನ 5 ವರ್ಷಗಳಿಗಿಂತ ಕಡಿಮೆ ಅವಧಿಯ ಸೇವೆಯ ಮೇಲೆ ಸಹ ಲಭ್ಯವಿದೆ ಎಂದು ನಿಮಗೆ ತಿಳಿದಿದೆಯೇ.

ಯಾರಿಗೆಲ್ಲ ಸಿಗುತ್ತೆ ಲಾಭ!

ಪಾವತಿ ಮತ್ತು ಗ್ರ್ಯಾಚುಟಿಯ ಕಾಯ್ದೆಯು ದೇಶದ ಎಲ್ಲಾ ಕಾರ್ಖಾನೆಗಳು, ಗಣಿಗಳು, ತೈಲ ಕ್ಷೇತ್ರಗಳು, ಬಂದರುಗಳು ಮತ್ತು ರೈಲ್ವೆಗಳಿಗೆ ( factories, mines, oil fields, ports and railways) ಅನ್ವಯಿಸುತ್ತದೆ. ಇದರೊಂದಿಗೆ, 10 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಅಂಗಡಿಗಳು ಮತ್ತು ಕಂಪನಿಗಳ ಉದ್ಯೋಗಿಗಳು ಸಹ ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ.

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಯಾವ ಆಧಾರದ ಮೇಲೆ ಗ್ರ್ಯಾಚುಟಿ ಲಭ್ಯ

ಗ್ರ್ಯಾಚುಟಿ ಕಾಯ್ದೆಯ ಪ್ರಕಾರ, ಯಾವುದೇ ಒಂದು ಉದ್ಯೋಗದಾತರೊಂದಿಗೆ ಸತತ ಐದು ವರ್ಷಗಳ ಕಾಲ ಕೆಲಸ ಮಾಡುವ ಉದ್ಯೋಗಿಗಳು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಕಾಯಿದೆಯ ಸೆಕ್ಷನ್ 2A 'ಕೆಲಸವನ್ನು ಮುಂದುವರೆಸುವುದು' ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ.

ಇದರ ಪ್ರಕಾರ, ಅನೇಕ ಉದ್ಯೋಗಿಗಳು ಪೂರ್ಣ 5 ವರ್ಷಗಳ ಕಾಲ ಕೆಲಸ ಮಾಡದಿದ್ದರೂ ಸಹ ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯಬಹುದು.

TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ

5 ವರ್ಷಕ್ಕೂ ಮೊದಲೇ ಹೇಗೆ ಪಡೆಯುವುದು?

ಗ್ರ್ಯಾಚುಟಿ ಕಾಯ್ದೆಯ ಸೆಕ್ಷನ್-2ಎ ಪ್ರಕಾರ, ಭೂಗತ ಗಣಿಗಳಲ್ಲಿ ಕೆಲಸ ಮಾಡುವ ನೌಕರರು ತಮ್ಮ ಉದ್ಯೋಗದಾತರೊಂದಿಗೆ 4 ವರ್ಷ 190 ದಿನಗಳನ್ನು ಪೂರ್ಣಗೊಳಿಸಿದರೆ, ಅವರು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು 4 ವರ್ಷ 240 ದಿನಗಳವರೆಗೆ ಕೆಲಸ ಮಾಡಿದ ನಂತರ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ.

ಗ್ರ್ಯಾಚುಟಿಯ ಅವಧಿಯನ್ನು ಲೆಕ್ಕಾಚಾರ ಮಾಡುವಾಗ ನೋಟೀಸ್ ಅವಧಿಯನ್ನು ಸೇರಿಸಲಾಗುತ್ತದೆಯೇ ಎಂಬ ಬಗ್ಗೆ ಅನೇಕ ಜನರಲ್ಲಿದೆ. ಆದರೆ ನೋಟಿಸ್ ಅವಧಿಯೂ ನಿಮ್ಮ 'ನಿರಂತರ ಸೇವೆ'ಯಲ್ಲಿ ಎಣಿಸಲಾಗುತ್ತದೆ ಎಂಬುವುದು ಮುಖ್ಯ ವಿಷಯವಾಗಿದೆ.

POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!