1. ಸುದ್ದಿಗಳು

ಹನುಮ ಜಯಂತಿ: ಶಾಲೆಗಳಿಗೆ ಒಂದು ದಿನ ರಜೆ ಘೋಷಣೆ

Maltesh
Maltesh
Hanuman Jayanti Hunasuru

ಹನುಮ ಜಯಂತಿ (Hanuma Jayanthi ) ಹಿನ್ನೆಲೆ ಮೈಸೂರು ಜಿಲ್ಲೆಯ ಹುಣಸೂರಿನ (Hunusuru ) ಎಲ್ಲ ಸರ್ಕಾರಿ ಹಾಗೂ ಅನುದಾನಿತ, ಅನುದಾನರಹಿತ , ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಶಾಲೆ ಕಾಲೇಜುಗಳಿಗೆ ಒಂದು ದಿನ ರಜೆಯನ್ನು ಘೋಷಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ  ( K V Rajendra) ಅವರು ಡಿಸೆಂಬರ್‌ 26 ರಂದು ರಜೆಯನ್ನು ಘೋಷಣೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗೃತ ಎಚ್ಚರಿಕೆಯಾಗಿ ಯಾವುದೇ ಅವಘಡಗಳು ಸಂಭವಿಸದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

3 ದಿನ ರಜೆ!

ವಾರದ ಮೊದಲ ದಿನ ಭಾನವಾರವಾಗಿದ್ದು ಸೋಮವಾರ ಕ್ರಿಸ್‌ಮಸ್‌ (Christmas) ರಜೆ ಇದೆ. ಮಂಗಳವಾರವೂ ರಜೆ ಘೋಷಣೆ ಮಾಡಿರುವದರಿಂದ ವಿದ್ಯಾರ್ಥಿಗಳಿಗೆ ಸತತ 3 ದಿನ ರಜೆ ಸಿಕ್ಕಂತಾಗಿದೆ.

3 ದಿನ ಅದ್ದೂರಿ ಕಾರ್ಯಕ್ರಮ

ಭಾನುವಾರದಿಂದ 3 ದಿನಗಳವರೆಗೆ ಹುಣಸೂರಿನಲ್ಲಿ ಹನುಮ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೂಜಾ ಕಾರ್ಯಕ್ರಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ.

Published On: 24 December 2023, 11:30 AM English Summary: Hanuman Jayanti: One day holiday announced for schools

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.