1. ಸುದ್ದಿಗಳು

ಹೊಸ ವರ್ಷಾಚರಣೆಗೆ ಮಾರ್ಗಸೂಚಿ: ರಾತ್ರಿ 1ರ ವರೆಗಷ್ಟೇ ಅವಕಾಶ, ಮತ್ತೆ ಮಾಸ್ಕ್‌ ಕಡ್ಡಾಯ!

Hitesh
Hitesh
Guidelines for New Year celebration: Only allowed till 1 am, again mask is mandatory!

ಕೋವಿಡ್‌ ಸೋಂಕು ಭೀತಿಯಿಂದಾಗಿ ಈ ವರ್ಷವೂ ಹೊಸ ವರ್ಷಾಚರಣೆ ಮಂಕಾಗುವ ಆತಂಕ ಎದುರಾಗಿದ್ದು, ಇದೀಗ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಸರ್ಕಾರ ತುಸು ಚೇತರಿಕೆಯಾಗಬಹುದಾದ ಮಾರ್ಗಸೂಚಿಯನ್ನೇ ಪ್ರಕಟಿಸಿದೆ.

ಬಂಡೂರು ಕುರಿ ಸಂರಕ್ಷಣೆ: ಕರ್ನಾಟಕದ ರೈತನಿಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ! 

ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.  

ಕೊರೊನಾ ವೈರಸ್‌ನ ಹೊಸ ತಳಿಯ ಕಾರಣಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೋಗ ತಡಗೆ ರಾಜ್ಯದಲ್ಲೂ ಕೆಲವು ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ.

ನರೇಗಾ: ಕರ್ನಾಟಕಕ್ಕೆ ಕನಿಷ್ಠ 127 ಕೋಟಿ ಮೊತ್ತ ಇನ್ನೂ ಬಾಕಿ! 

ರಾಜ್ಯದಲ್ಲಿ ಕೊರೊನಾ ಸೋಂಕು ತಡೆ ಹಾಗೂ ನೂತನ ಮಾರ್ಗಸೂಚಿ ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಸೋಮವಾರ ಸಭೆ ನಡೆಸಲಾಯಿತು.  

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್‌ ಮತ್ತು ಕಂದಾಯ ಸಚಿವ ಆರ್‌. ಆಶೋಕ ಅವರು ಹೊಸ ನಿಯಮಗಳನ್ನು ಪ್ರಕಟಿಸಿದರು.

ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಉತ್ತಮ ವರ: ಕೇಂದ್ರ ಸಚಿವ ಹೀಗಂದಿದ್ದೇಕೆ ಗೊತ್ತೆ? 

ಚಿತ್ರಮಂದಿರಗಳು, ಶಾಲಾ-ಕಾಲೇಜುಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಹೊಸ ವರ್ಷ ಆಚರಿಸುವ ವೇಳೆ ಮಾಸ್ಕ್‌ ಧರಿಸಿರಲೇಬೇಕು.

ಹೊಸ ವರ್ಷದ ಆಚರಣೆಗಳು ರಾತ್ರಿ 1ರ ಒಳಗೇ ಅಂತ್ಯವಾಗಬೇಕು. ಯಾರೂ ಭಯಪಡುವ ಅವಶ್ಯಕತೆ ಇಲ್ಲ ಆದರೆ, ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಉತ್ತರ ಭಾರತದಲ್ಲಿ ತೀವ್ರ ಚಳಿ; ದೆಹಲಿಯಲ್ಲಿ ಮೈಕೊರೆವ ಥಂಡಿ! 

Guidelines for New Year celebration: Only allowed till 1 am, again mask is mandatory!

ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ‌ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದರು.  

ಬೂಸ್ಟರ್ ಡೋಸ್‌ ನೀಡಲು ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಶಿಬಿರ ಏರ್ಪಡಿಸಬೇಕು. ಆರೋಗ್ಯ ಪರಿಕರಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಔಷಧ ಹಾಗೂ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿರುವ ಆಮ್ಲಜನಕ ಘಟಕಗಳು ತುರ್ತು ಸಂದರ್ಭದಲ್ಲಿ‌ ಸಮರ್ಪಕವಾಗಿ‌ ಕಾರ್ಯನಿರ್ವಹಿಸುವಂತೆ, ಅವುಗಳನ್ನು ಪ್ರಾಯೋಗಿಕವಾಗಿ ಚಾಲನೆಯಲ್ಲಿಡಲು ತಿಳಿಸಲಾಗಿದೆ ಎಂದು ಹೇಳಿದ್ದರು.

Published On: 26 December 2022, 04:56 PM English Summary: Guidelines for New Year celebration: Only allowed till 1 am, again mask is mandatory!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.