1. ಸುದ್ದಿಗಳು

ಕೃಷಿ ಸಿಂಚಾಯಿ ಯೋಜನೆಯಡಿ ತರಕಾರಿ, ಹೂವಿನ ಬೆಳೆಗೆ ಶೇ. 90 ರಷ್ಟು ಸಹಾಯಧನ

vegetables

ತೋಟಗಾರಿಕೆ ಇಲಾಖೆಯ ವತಿಯಿಂದ 2020-21ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಸೂಕ್ಷ್ಮ ಹನಿ ನೀರಾವರಿ (ಡ್ರಿಪ್) ಯೋಜನೆಯಡಿಯಲ್ಲಿ ತೋಟಗಾರಿಕೆ, ತರಕಾರಿ, ಹೂವಿನ ಬೆಳೆಗಳಿಗೆ ಶೇ 90 ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಭೂ ಉತ್ಪಾದನೆಕತೆ ಹೆಚ್ಚಿಸಿ ಪ್ರತಿ ಹನಿಗೂ ಅಧಿಕ ಬೆಳೆ ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಎಲ್ಲಾ ತರಕಾರಿ, ಹೂವಿನ ಬೆಳೆ, ಕಲ್ಲಂಗಡಿ, ಬಾಳೆ, ಪಪ್ಪಾಯ, ಮಾವು, ಸಪೋಟ, ನಿಂಬೆ, ಸೀಬೆ, ತೆಂಗು ಇತ್ಯಾದಿ ತೋಟಗಳ ಬೆಳೆಗಳಿಗೆ ಈ ಸೌಲಭ್ಯ ಪಡೆಯಬಹುದು.

ಇದನ್ನೂ ಓದಿ: ಹನಿ ನೀರಾವರಿಗೆ ಶೇ. 90 ರಷ್ಟು ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ತರಕಾರಿಗೆ ಸಹಾಯಧನ ನೀಡುವ ಗರಿಷ್ಟ ವಿಸ್ತೀರ್ಣ:

ತರಕಾರಿ ಮತ್ತು ಹೂವಿನ ಬೆಳೆಗೆ 1.2 x06 ಮೀಟರ್ ಹಾಗೂ 1.8 x 06 ಮೀಟರ್ ಅಂತರದ) ಮ1ದಲ 2 ಹೆಕ್ಟೆರಿಗೆ ಶೇ. 90 ರಷ್ಟು ಹಾಗೂ ನಂತರದ 3 ಹೆಕ್ಟೇರ್ ಪ್ರದೇಶಕ್ಕೆ (ಹಣ್ಣಿನ/ತೋಟದ ಬೆಳೆಗಳಿಗೆ) ಶೇ. 45 ರ ಸಹಾಯಧನ ನೀಡಲಾಗುವುದು.

ಇಲ್ಲಿ ಎಲ್ಲಾ ರೈತರಿಗೆ ಸಹಾಯ ಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪ್ರತ್ಯೇಕ ಅನುದಾನ ಮೀಸಲಿದೆ. ಕಡಿಮೆ ಅಂತರದ  1.2x06 ಮೀ) ಬೆಳೆಗಳಿಗೆ ಮುಖ್ಯವಾಗಿ ತರಕಾರಿ ಹೂ ಬೆಳೆಗೆ ಶೇ. 90 ರಷ್ಟು ಸಹಾಯಧನ ನೀಡಲಾಗವುದು.

Flowers

ದಾಖಲಾತಿಗಳು:

ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಚೆಕ್ ಬಂಧಿ, ಬೆಳೆ ದೃಢೀಕರಣ ಪತ್ರ, ನೀರಿನ ಮೂಲದ ವಿವರ, ಹನಿ ನೀರಾವರಿ ಅಳವಡಿಸಿದ ತಾಕಿಗೆ ದಾರಿ ನಕ್ಷೆ, ಜಾತಿ ಪ್ರಮಾಣಪತ್ರ, ಝಿರಾಕ್ಸ್ ಪ್ರತಿ, (ಎಸ್.ಸಿ ಎಸ್.ಟಿ ವರ್ಗದವರಾದಲ್ಲಿ) ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಝಿರಾಕ್ಸ್, ಮೊಬೈಲ್ ಸಂಖ್ಯೆ, ರಾಷ್ಟ್ರೀಕೃತ  ಬ್ಯಾಂಕ್ ಪುಸ್ತಕದ ಝಿರಾಕ್ಸ್, ಎನ್ಓಸಿ ರೇಷ್ಮೆ ಮತ್ತು ಕೃಷಿ ಇಲಾಖೆಯ ವತಿಯಿಂದ, ಮಣ್ಣು ಮತ್ತು ನೀರು ಪರೀಕ್ಷಾ ವರದಿ, ಕಂಪನಿಯಿಂದ ದರಪಟ್ಟಿ (ಕೊಟೇಷನ್)  ಸ್ಯಾಂಕ್ಷನ್ ಆರ್ಡರ್ ನಲ್ಲಿ ನಮೂದಿಸಿರುವಂತೆ ರೈತರು ರೈತರ ವಂತಿಕೆಯನ್ನು ಸಂಬಂಧಿಸಿದ ಸೂ7ಮ ನೀರಾವರಿ ಕಂಪನಿ/ಸಂಸ್ಥೆಯವರ ಬ್ಯಾಂಕ್ ಖಾತೆಗೆ ಜಮೆ ಮಾಡಿರುವ ಬಗ್ಗೆ (ಆನ್ ಲೈನ್ ಪೇಮೆಂಟ್ ಡಿಟೇಲ್ಸ್ (ಯುಟಿಆರ್ ನಂಬರ್ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿ) ಅನ್ನು ತಾಲೂಕು ಹಿರಿಯ  ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಇರುತ್ತದೆ.  ಆದ್ದರಿಂದ ಜಿಲ್ಲಾ ತೋಟಗಾರಿಕೆ ಇಲಾಖೆ ಅಥವಾಹ  ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.