ಕೃಷಿ ಬೆಳೆಯನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಗೋಧಿಯ ಕನಿಷ್ಠ ಬೆಂಬಲ ಬೆಲೆಯ 50 ರೂಪಾಯಿ ಸೇರಿದಂತೆ ಇತರ ಆರು ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದೆ. ಪ್ರತಿ ಕ್ವಿಂಟಾಲ್ ಗೋಧಿಯ ಕನಿಷ್ಠ ಬೆಂಬಲ ಬೆಲೆ 1,975 ರೂಪಾಯಿ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಮಹತ್ವದ ಎರಡು ಕೃಷಿ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡ ನಂತರ ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಮತ್ತು ರೈತ ಸಂಘಟನೆಗಳಿಂದ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿರುವ ಬೆನ್ನಲ್ಲೇ, ಸರ್ಕಾರ
ಬೇಳೆಕಾಳು, ಕಡಲೆ, ಜವೆ, ಸಾಸಿವೆ, ಕುಸುಬೆ ಹೂವಿನ ದಳದ (ಸ್ಯಾಫ್ಲವರ್) ಎಂಎಸ್‌ಪಿಯನ್ನೂ ಹೆಚ್ಚಿಸಿದೆ.
ಕನಿಷ್ಟ ಬೆಂಬಲ ಬೆಲೆ
ಬೆಳೆ |
2020-21ಕ್ಕೆ ನಿಗದಿಪಡಿಸಿದ ಎಂಎಸ್.ಪಿ (ಕ್ವಿಂಟಾಲಿಗೆ) |
ಏರಿಕೆಯಾದ ಎಂಎಸ್.ಪಿ (ರುಪಾಯಿಗಳಲ್ಲಿ |
ಗೋಧಿ |
1975 |
50 |
ಜವೆ |
1600 |
75 |
ಕಡಲೆ |
5100 |
225 |
ಬೇಳೆಕಾಳು |
5100 |
225 |
ಸಾಸಿವೆ |
4650 |
225 |
ಕುಸುಬೆ |
5327 |
112 |
ಮಾನವ ಕೆಲಸದ ಕೂಲಿ, ಎತ್ತುಗಳ ಕೆಲಸ / ಯಂತ್ರಗಳ ಕೆಲಸ, ಭೂಮಿ ಗುತ್ತಿಗೆಗೆ ಪಾವತಿಸಿದ ಬಾಡಿಗೆ, ಬೀಜ, ರಸಗೊಬ್ಬರ, ಗೊಬ್ಬರ, ನೀರಾವರಿ ಶುಲ್ಕ, ಉಪಕರಣಗಳ ಸವಕಳಿ ಮುಂತಾದ ವಸ್ತುಗಳ ಬಳಕೆಗೆ ಆಗುವ ವೆಚ್ಚಗಳು, ಕೃಷಿ ಕಟ್ಟಡಗಳು, ಕಾರ್ಯ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ಗಳ ಕಾರ್ಯಾಚರಣೆಗೆ ಡೀಸೆಲ್ / ವಿದ್ಯುತ್ ಇತ್ಯಾದಿ, ವಿವಿಧ ವೆಚ್ಚಗಳು ಮತ್ತು ಕುಟುಂಬ ಕಾರ್ಮಿಕರ ಮೌಲ್ಯ ಮತ್ತು ಪಾವತಿಸಿದ ಎಲ್ಲಾ ವೆಚ್ಚಗಳನ್ನು ಇದು ಒಳಗೊಂಡಿದೆ.
Share your comments