1. ಸುದ್ದಿಗಳು

Milk Price: ಹಾಲು ಉತ್ಪಾದಕರಿಗೆ ಸಿಹಿಸುದ್ದಿ; ನವೆಂಬರ್‌ 1ರಿಂದ ಲೀಟರ್‌ಗೆ 2ರೂ ಹೆಚ್ಚಳ!

Kalmesh T
Kalmesh T
Good news for milk producers; Increase of Rs 2 per litre from November 1!

ಹಾಲು ಉತ್ಪಾದನಾ ರೈತರಿಗೆ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಿಹಿಸುದ್ದಿ ದೊರಕಿದೆ. ಇಲ್ಲಿದೆ ವಿವರ

Stubble burning: ಕಳೆ ಸುಡುವ ಸಮಸ್ಯೆ ಪರಿಹರಿಸಲು ಪರಾಮರ್ಶೆ ಸಭೆ!

ಹಾಲು ಉತ್ಪಾದನೆಯಲ್ಲಿ ತಪಡಗಿರುವ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟವಾದ ಶಿಮುಲ್‌ ಕನ್ನಡ ರಾಜ್ಯೋತ್ಸವದ  ನಿಮಿತ್ತ ಬಂಪರ್‌ ಉಡುಗೊರೆ ನೀಡಿದೆ.

ಮುಂಬರುವ ನವೆಂಬರ್‌ 1ರಿಂದ ಹಾಲು ಉತ್ಪಾದಕರಿಂದ 2 ರೂಪಾಯಿ ಹೆಚ್ಚಳದ ದರದಲ್ಲಿ ಕೊಳ್ಳಲಾಗುವುದು ಎಂದಿದೆ.

ನವೆಂಬರ್‌ ತಿಂಗಳ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಶಿಮುಲ್‌ (Shimul) ತಿಳಿಸಿದೆ. 

10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

ರೈತರಿಂದ ಕೊಂಡುಕೊಳ್ಳುವ ಪ್ರತಿ ಲೀಟರ್‌ ಹಾಲಿಗೆ ರೂಪಾಯಿ 2 ಹೆಚ್ಚುವರಿಯಾಗಿ ನೀಡಲಿದೆ.

ಇದರಿಂದ ಈವರೆಗೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ಸಿಗುತ್ತಿದ್ದ ರೂ. 28.20 ಬದಲಿಗೆ ರೂ.30.29 ಸಿಗಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಶಿಮುಲ್‌ ಅಧ್ಯಕ್ಷ ಶ್ರೀಪಾದ ರಾವ್‌ ಅವರು ಮಾಹಿತಿ ನೀಡಿದ್ದಾರೆ.

ಹಾಲು ಉತ್ಪಾದಕರ ಖರ್ಚು- ವೆಚ್ಚಗಳನ್ನು ಪರಿಗಣಿಸಿ ಮತ್ತು ಶಿಮುಲ್‌ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಶಿಮುಲ್‌ಗೆ ರೂ. 10 ಕೋಟಿ ಆರ್ಥಿಕ ಹೊರೆಬೀಳಲಿದೆ ಎಂದು ಕೂಡ ತಿಳಿಸಿದ್ದಾರೆ.

'Water Heroes: Share Your Stories’ ಸ್ಪರ್ಧೆಗೆ ಅರ್ಜಿ ಆಹ್ವಾನ; ನೀವೂ ನಿಮ್ಮ ಕಥೆ ಹಂಚಿಕೊಂಡು ರೂ.10,000 ಗೆಲ್ಲಬಹುದು!

ಒಕ್ಕೂಟದ ವ್ಯಾಪ್ತಿಯಲ್ಲಿ ಅಸ್ವಾಭಾವಿಕ ಮಳೆಯಿಂದಾಗಿ ಮೇವಿನ ಕೊರತೆ ಉಂಟಾಗಿತ್ತು. ಜೊತೆಗೆ ಉತ್ಪಾದನಾ ವೆಚ್ಚ, ಹಿಂಡಿ ದರದಲ್ಲಿ ಹೆಚ್ಚಳ, ಹೈನು ರಾಸುಗಳಲ್ಲಿ ಕಂಡುಬಂದಿರುವ ಚರ್ಮಗಂಟು ರೋಗ ಮುಂತಾದವುಗಳಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಖರೀದಿ ದರ ಪರಿಷ್ಕರಿಸಲಾಗಿದೆ.

ರೈತರ ಜೊತೆಗೆ ಹಾಲು ಒಕ್ಕೂಟಗಳಿಗೆ ಕೂಡ ಲಾಭ ವರ್ಗಾಯಿಸಲಾಗಿದೆ. ಹಾಲು ಒಕ್ಕೂಟಗಳಿಗೆ ಪ್ರತಿ ಲೀ.ಗೆ ರೂ.30.06 ನೀಡುತ್ತಿದ್ದು, ಇದನ್ನು .32.15ಕ್ಕೆ ಹೆಚ್ಚಿಸಿದೆ. ಆದರೆ ಗ್ರಾಹಕರಿಗೆ ಮಾತ್ರ ಹಾಲಿನ ಮಾರಾಟ ದರ ಹೆಚ್ಚಿಸಿಲ್ಲ ಎಂದರು.

ಪಡಿತರ ಚೀಟಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ, ಇನ್ಮುಂದೆ ನೀವು ಎಲ್ಲೆ ಇದ್ದರೂ ಈ ಸೌಲಭ್ಯ ಪಡೆಯಬಹುದು! ಏನದು ಗೊತ್ತೆ?

2022ರ ಜನವರಿ 1ರ ಹೊತ್ತಿಗೆ ರೂ.16 ಕೋಟಿ ನಷ್ಟದಲ್ಲಿದ್ದ ಒಕ್ಕೂಟವು ಆಡಳಿತ ಮಂಡಳಿಯ ಸಕಾಲಿಕ ನಿರ್ಣಯಗಳಿಂದಾಗಿ ಮಾರ್ಚ್‌ ಮಾಸಾಂತ್ಯಕ್ಕೆ 19 ಕೋಟಿಗಳ ಲಾಭ ಹಾಗೂ ಅಕ್ಟೋಬರ್‌ ಮಾಸಾಂತ್ಯದಲ್ಲಿ ರೂ.6.50 ಕೋಟಿ ಲಾಭ ಗಳಿಸಿದೆ.

ಇದನ್ನು ಉತ್ಪಾದಕರಿಗೆ ವರ್ಗಾಯಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಮುಲ್‌ನ ಅನಗತ್ಯ ಖರ್ಚು ವೆಚ್ಚಗಳನ್ನು ಕಡಿತ ಮಾಡಿದ್ದು, ಲಾಭ ಹೆಚ್ಚಿಸುವತ್ತ ಗಮನ ಹರಿಸಲಾಗಿತ್ತು. ಇದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.

Published On: 28 October 2022, 06:05 PM English Summary: Good news for milk producers; Increase of Rs 2 per litre from November 1!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.