1. ಸುದ್ದಿಗಳು

ಬಂಗಾರ-ಬೆಳ್ಳಿ ಪ್ರಿಯರಿಗೆ ಸಮಾಧಾನದ ಸುದ್ದಿ; ತಿಂಗಳಾಂತ್ಯಕ್ಕೆ ದೇಶಾದ್ಯಂತ ಬೆಲೆ ಇಳಿಕೆ

Kalmesh T
Kalmesh T
Good news for gold and silver lovers; Price reduction across the country

ಬೆಳ್ಳಿ ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ತುಸು ಹೆಚ್ಚೆ ಬಂಗಾರ ಮತ್ತು ಬೆಳ್ಳಿ ವಸ್ತುಗಳನ್ನು ಮೆಚ್ಚುತ್ತಾರೆ. ಹಾಗಿದ್ರೆ ಸದ್ಯದ ಬೆಲೆಗಳನ್ನು ತಿಳಿದುಕೊಳ್ಳೋಣ ಬನ್ನಿ

Pradhan Mantri Jan-Dhan Yojana | ಖಾತೆದಾರರಿಗೆ ಸರ್ಕಾರದಿಂದ 10,000 ರೂಪಾಯಿ! 

ಇತ್ತೀಚೆಗೆ ಬಂಗಾರ- ಬೆಳ್ಳಿಗಳ ಬೆಲೆಗಳಲ್ಲಿ ಭಾರಿ ವ್ಯತ್ಯಾಸವಾಗುತ್ತಿದೆ. ಬಂಗಾರದ ದರ ಇಳಿಕೆಯಾದರೆ ಎಲ್ಲರ ಮುಖದಲ್ಲೂ ನಗು ಸಹಜ. ಈ ಹಿನ್ನೆಲೆ ಪ್ರತಿನಿತ್ಯ ಹಲವರು ಚಿನ್ನ, ಬೆಳ್ಳಿ ದರವನ್ನು ಪರಿಶೀಲಿಸುತ್ತಾರೆ.

ಇಂದು ದೇಶದಲ್ಲಿ ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಆದರೆ ಬೆಳ್ಳಿಯ ಬೆಲೆ ಇಳಿಕೆಯಾಗಿದೆ. ಆದರೆ, ಬೆಂಗಳೂರಲ್ಲಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಡಿಎ ಹೆಚ್ಚಳದ ನಂತರ ಇದೀಗ ಮತ್ತೊಂದು ಮಹತ್ವದ ಘೋಷಣೆ! ಏನಿದು ತಿಳಿಯಿರಿ

ಒಂದು ಗ್ರಾಂ ಚಿನ್ನ (1GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,861

24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,303

ಎಂಟು ಗ್ರಾಂ ಚಿನ್ನ (8GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,888

24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,424

ಹತ್ತು ಗ್ರಾಂ ಚಿನ್ನ (10GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 48,610

24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 53,030

ನೂರು ಗ್ರಾಂ ಚಿನ್ನ (100GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,86,100

24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,30,300

ಬೆಂಗಳೂರು ಹಾಗೂ ಇತರೆಡೆ ಇಂದಿನ ಬಂಗಾರದ ಬೆಲೆ

ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.48,610 ರೂ. ಆಗಿದ್ದು, ನಿನ್ನೆ ಸಹ ಇಷ್ಟೇ ಬೆಲೆ ಇತ್ತು.

ದೇಶದ ಪ್ರಮುಖ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 49,210, ರೂ. 48,560, ರೂ. 48,560 ಇದ್ದು, ಚೆನ್ನಯ ಹೊರತುಪಡಿಸಿ ಉಳಿದೆಡೆ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಸೋಮವಾರ 48,710 ರೂ. ಆಗಿದ್ದು, ನಿನ್ನೆ ಸಹ ಇಷ್ಟೇ ದರ ಇತ್ತು.

ಈ ದಿನದ ಬೆಳ್ಳಿ ದರ

ಇಂದು ಬೆಂಗಳೂರು, ಚೆನ್ನೈ ಹೊರತುಪಡಿಸಿ ಉಳಿದೆಡೆ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.

ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.

Published On: 28 November 2022, 01:00 PM English Summary: Good news for gold and silver lovers; Price reduction across the country

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.