1. ಸುದ್ದಿಗಳು

ರೈತರ ಮಕ್ಕಳಿಗೆ ಸಿಹಿಸುದ್ದಿ: ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯಲ್ಲಿ ಇನ್ನೂ 60 ಸೀಟು ಹೆಚ್ಚಳ!

Hitesh
Hitesh
Good news for farmers' children: 60 more seats increase in National Agricultural Marketing Organization!

ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಹಳ್ಳಿಗಳನ್ನು ಸಮೃದ್ಧಗೊಳಿಸಬೇಕು ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದರು. 

ವಿದ್ಯಾರ್ಥಿಗಳು ಮತ್ತು ಯುವಕರು ಕೃಷಿಯನ್ನು ಹೆಚ್ಚು ಲಾಭದಾಯಕ ವಾಗಿಸಲು ಮತ್ತು ಹಳ್ಳಿಗಳನ್ನು ಸಮೃದ್ಧಗೊಳಿಸಲು ಕೊಡುಗೆ ನೀಡಬೇಕು  ಎಂದರು.  

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ಭಾನುವಾರ ಚೌಧರಿ ಚರಣ್ ಸಿಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್, ಸೆಂಟರ್ ಫಾರ್ ಇನ್ನೋವೇಶನ್ ಇನ್ ಅಗ್ರಿಕಲ್ಚರ್ ಅಂಡ್ ಆಪರೇಷನ್ಸ್

ಜೈಪುರದಲ್ಲಿ ಕೃಷಿ ವ್ಯವಹಾರ ನಿರ್ವಹಣೆಯ ನಾಲ್ಕನೇ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.  

ಹಣದುಬ್ಬರ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌ ಮಾಡ್ತಿದೆ ಕೇಂದ್ರ; ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ ?!

ವಿಶೇಷ ಅತಿಥಿಗಳಾಗಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತೋಮರ್ ಅವರು ಮಾತನಾಡಿ, ಪ್ರಧಾನಮಂತ್ರಿ  ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ.

ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಲಾಭ ತಂದು ಗ್ರಾಮಗಳು ಹೆಚ್ಚು ಅಭಿವೃದ್ಧಿ ಹೊಂದಲು ಕೃಷಿ ಸಂಬಂಧಿತ ವಿದ್ಯಾರ್ಥಿಗಳು

ಯುವಕರು ಸಹ ಕೊಡುಗೆ ನೀಡಬೇಕು ಎಂದರು.

Gold Rate Today ಚಿನ್ನದ ಬೆಲೆಯಲ್ಲಿ ಮುಂದುವರಿದ ಏರುಪೇರು!  

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯಲ್ಲಿ ಇನ್ನೂ 60 ಸೀಟುಗಳನ್ನು ಸೇರಿಸುವುದಾಗಿ ಮತ್ತು ಕಡ್ಡಾಯ ಹಾಸ್ಟೆಲ್ ವಾಸ್ತವ್ಯದ

ನಿಯಮವನ್ನು ರದ್ದುಗೊಳಿಸುವುದಾಗಿ ಅವರು ಘೋಷಿಸಿದರು.

ಕೃಷಿ ಮುಖ್ಯವಾಗಿದ್ದು, ಎಲ್ಲರೂ ಇದರಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಯುವಜನತೆಯೂ ಇದರತ್ತ ಆಕರ್ಷಿತರಾಗಬೇಕು.

ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಕೇಂದ್ರ ಸಚಿವ ತೋಮರ್ ಹೇಳಿದರು. ಕೃಷಿ ವಲಯದಲ್ಲಿ ಜೀವನೋಪಾಯವಿದೆ.

ರೈತರ ದೇಶಭಕ್ತಿಯೂ ಇದೆ. ಏಕೆಂದರೆ ಕೃಷಿ ಉತ್ಪಾದನೆ ಇಲ್ಲದಿದ್ದರೆ ಎಲ್ಲವೂ ನಿಲ್ಲುತ್ತದೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನ ಬಳಕೆದಾದರೂ ಇನ್ಮುಂದೆ ಶುಲ್ಕ ಪಾವತಿಸಬೇಕು! 

Good news for farmers' children: 60 more seats increase in National Agricultural Marketing Organization!

ಕೃಷಿ ಕ್ಷೇತ್ರದಲ್ಲಿ ಹಲವು ಸವಾಲುಗಳಿವೆ. ಕೇಂದ್ರ ಸರ್ಕಾರ ರಾಜ್ಯಗಳ ಸಹಯೋಗದಲ್ಲಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಪ್ರಗತಿ ಸಾಧಿಸುತ್ತಿದೆ.

ಲಾಭದಾಯಕ ಬೆಳೆಗಳತ್ತ ಸಾಗುವುದು, ಬೆಳೆಗಳನ್ನು ವೈವಿಧ್ಯಗೊಳಿಸುವುದು, ಉತ್ಪನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳನ್ನು ತೊಡೆದುಹಾಕುವುದು

ಮುಂತಾದ ಅನೇಕ ಸವಾಲುಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿಭಾಯಿಸಲಾಗುತ್ತಿದೆ ಎಂದು ವಿವರಿಸಿದರು.  

ಕೃಷಿ ಕ್ಷೇತ್ರದಲ್ಲಿ ವಿಜ್ಞಾನಿಗಳು ಸಾಕಷ್ಟು ಕೆಲಸ ಮಾಡಿದ್ದು, ರೈತರ ಅವಿರತ ಶ್ರಮ ಹಾಗೂ ಕೇಂದ್ರ ಸರ್ಕಾರದ ಸೂಕ್ತ ರೈತಸ್ನೇಹಿ

ನೀತಿಗಳ ಜತೆಗೆ ಕೃಷಿಯಲ್ಲಿ ಅಭೂತಪೂರ್ವ ಪ್ರಗತಿಯಾಗಿದೆ ಎಂದು ತೋಮರ್ ಹೇಳಿದರು.

ಹೆಚ್ಚಿನ ಕೃಷಿ ಉತ್ಪನ್ನಗಳ ವಿಷಯದಲ್ಲಿ ಭಾರತ ಇಂದು ವಿಶ್ವದಲ್ಲಿ ಮೊದಲ ಅಥವಾ ಎರಡನೇ ಸ್ಥಾನದಲ್ಲಿದೆ.

ನಾವೆಲ್ಲರೂ ಒಗ್ಗೂಡಿ ಇದನ್ನು ಮುನ್ನೆಲೆಗೆ ತರಬೇಕಿದೆ. ಭಾರತದಿಂದ ಆಹಾರ ಧಾನ್ಯಗಳ ಬಗ್ಗೆ ಜಗತ್ತು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ.

ನಾವು ಅದನ್ನು ಮಾಡುತ್ತಿದ್ದೇವೆ. ಮುಂದೆಯೂ ಹಾಗೆಯೇ ಮಾಡುತ್ತೇವೆ.

ರೈತರ ಪರಿಶ್ರಮ ಹಾಗೂ ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದ ಕೃಷಿ ಸಂಶೋಧನೆಗಳು ಸಮರ್ಥವಾಗಿ ನಡೆಯುತ್ತಿವೆ.

ಜೀವನೋಪಾಯಕ್ಕೆ ಉದ್ಯೋಗಗಳು ಅತ್ಯಗತ್ಯ. ಆದರೆ ಅದೇ ಸಮಯದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಯೂ ಅಗತ್ಯ.

ಏಕೆಂದರೆ ದೇಶದ ಶೇ.56ರಷ್ಟು ಜನರು ಇದನ್ನು ಅವಲಂಬಿಸಿದ್ದಾರೆ ಎಂದರು.

ಚೀನಾದಿಂದ ಭಾರತದ ಮೇಲೂ ಬಲೂನ್‌ ಗೂಢಚಾರಿಕೆ: ವರದಿ

Published On: 20 February 2023, 04:09 PM English Summary: Good news for farmers' children: 60 more seats increase in National Agricultural Marketing Organization!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.