karnataka 2023 budget : ರೈತರಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯನವರು ಕೃಷಿ ಭಾಗ್ಯ ಯೋಜನೆಗೆ ಮನ್ರೇಗಾ ಯೋಜನೆಯಡಿ ₹100 ಕೋಟಿ ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ.
ಭರ್ಜರಿ ಬಹುಮತದೊಂದಿಗೆ ರಾಜ್ಯ ರಾಜಕಾರಣದ ಗದ್ದುಗೆ ಏರಿದ ಕಾಂಗ್ರೆಸ್ ಇದೀಗ ತನ್ನ 14ನೇ ಬಜೆಟ್ ಮಂಡನೆ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದು, ಸಾಕಷ್ಟು ನಿರೀಕ್ಷೆ ಹೊಂದಿರುವ ಬಜೆಟ್ ಇದಾಗಿದ್ದು, ಇಲ್ಲಿವೆ ಈ ದಿನದ ಬಜೆಟ್ ಹೈಲೆಟ್ಸ್‌ಗಳು
ಈ ದಿನದ ಬಜೆಟ್‌ನಲ್ಲಿನ ಪ್ರಮುಖ ಅಂಶಗಳು
* ಕೃಷಿ ಭಾಗ್ಯ ಯೋಜನೆಗೆ ಮನ್ರೇಗಾ ಯೋಜನೆಯಡಿಯಲ್ಲಿ ₹100 ಕೋಟಿ
* 20 ಲಕ್ಷದವರೆಗಿನ ಸಾಲಕ್ಕೆ ಶೇಕಡ 4 ರ ಬಡ್ಡಿ ದರದಲ್ಲಿ ಸಹಾಯಧನ
* ಕೃಷಿ ಉದ್ಯಮ ಉತ್ತೇಜಿಸಲು ನವೋದ್ಯಮ ಯೋಜನೆಗೆ ₹10 ಕೋಟಿ
* ನಂದಿನಿ ಮಾದರಿಯ ಏಕೀಕೃತ ಬ್ಯಾಂಡಿಂಗ್‌ಗೆ ₹10 ಕೋಟಿ
* ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ₹5 ಕೋಟಿ
* ಜಾನುವಾರುಗಳ ಆಕಸ್ಮಿಕ ಸಾವಿಗೆ "ಅನುಗೃಹ ಯೋಜನೆಯಡಿ" ಕುರಿ-ಮೇಕೆಗಳ ಸಾವಿಗೆ 5 ಸಾವಿರ ಹಾಗೂ ಹಸು, ಎತ್ತು, ಎಮ್ಮೆಗಳ ಸಾವಿಗೆ 10 ಸಾವಿರ ಪರಿಹಾರ
* ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲ ಮಿತಿಯಲ್ಲಿ ಏರಿಕೆ; 3 ರಿಂದ 5 ಲಕ್ಷಕ್ಕೆ ಹೆಚ್ಚಳ
* ವಿದ್ಯಾರ್ಥಿಗಳಿಗೆ ತೋಟಗಾರಿಕೆ ಯೋಜನೆ ಜಾರಿ
* 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ
* ವಾರದಲ್ಲಿ 2 ದಿನ ಶೇಂಗಾ ಚಿಕ್ಕಿ ಮತ್ತು ಬಾಳೆ ಹಣ್ಣು ವಿತರಣೆ
* ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಅನುದಾನ
* ಕೆಪೆಕ್ ಸಂಸ್ಥೆಯ ಮೂಲಕ ಸ್ಟಾರ್ಟಪ್‌ಗಳ ಉತ್ತೇಜನ
Share your comments