1. ಸುದ್ದಿಗಳು

ಗುಡ್‌ನ್ಯೂಸ್‌: ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಒಪ್ಪಿಗೆ– ಸಿಎಂ ಬಸವರಾಜ ಬೊಮ್ಮಾಯಿ

Kalmesh T
Kalmesh T
Good News: Center agrees to Kalasa Banduri project – Chief Minister Basavaraja Bommai

ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಕೇಂದ್ರದ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಬಹುದಿನಗಳ ಕನಸು ನನಸಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ನಿಧನ! ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರ ಸಂತಾಪ ಸೂಚನೆ

ಗುರುವಾರ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಸಿಎಂ, 1.7 ಟಿಎಂಸಿ ಕಳಸಾ ಡ್ಯಾಮ್‌ನಿಂದ ನೀರು ಪಡೆಯುವ ಯೋಜನೆ ಇದಾಗಿದ್ದು, ‌2.18 ಬಂಡೂರಿ ಡ್ಯಾಮ್‌ನಿಂದ ನೀರು ಪಡೆಯುವ ಯೋಜನೆಯಾಗಿದೆ.

ಯೋಜನೆಯ ಡಿಪಿಆರ್ (DPR) ಕೇಂದ್ರಕ್ಕೆ ಸಲ್ಲಿಕೆ ಮಾಡಿದ್ದೆವು, ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಡಿಪಿಆರ್ ಒಪ್ಪಿಕೊಂಡಿದೆ ಎಂದು ತಿಳಿಸಿದರು.

ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸುತ್ತೇವೆ. ಯೋಜನೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಸರಕಾರ ಬದ್ಧವಾಗಿದೆ. ಬೆಳಗಾವಿ ಅಧಿವೇಶನದ ವೇಳೆಗೆ ಸಿಹಿ ಸುದ್ದಿ ಬಂದಿದೆ ಎಂದು ತಿಳಿಸಿದ್ದಾರೆ.

1988 ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು ಅಂದಿನ ಮುಖ್ಯಮಂತ್ರಿ ರಾಣೆಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನಂತರ ಗೋವಾದಲ್ಲಿ ಬಂದ ಸರ್ಕಾರಗಳು ಇದನ್ನು ಕಾರ್ಯಗತಗೊಳಿಸದೆ ವಿರೋಧಿಸಿದ್ದರು.

ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದೊರೆಯಲಿದೆ ಬರೋಬ್ಬರಿ 2 ಲಕ್ಷ ಮಾಸಿಕ ಪಿಂಚಣಿ!

ಒಟ್ಟಾರೆ ಮಹದಾಯಿ ಯೋಜನೆಗೆ ಮೊದಲು  ಚಿಂತನೆ ಮಾಡಿದ್ದು  ಬಾದಾಮಿ ಶಾಸಕ ಬೆಟಗೇರಿ ಹಾಗೂ ಆರ್.ಟಿ. ದೇಸಾಯಿಯವರು. ನಂತರ ಕರ್ನಾಟಕಕ್ಕೆ ನೀರು ಮತ್ತು ಅವರಿಗೆ ವಿದ್ಯುತ್ ನೀಡುವುದು ಎಂದಾಗಿತ್ತು. ಇದು ಮೂಲ ಕೆಪಿಸಿ ಆರಂಭಿಸಿದ ಯೋಜನೆ ಎಂದರು.

ಇನ್ನು ಸಚಿವ ಗೋವಿಂದ ಕಾರಜೋಳ ಮಾತನಾಡಿ, ‌ಸಿಎಂ ಬೊಮ್ಮಾಯಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಬೊಮ್ಮಾಯಿ ಅವರು ಸಿಎಂ ಆಗದಿದ್ದಿದ್ರೆ ಕಳಸಾ ಬಂಡೂರಿ ಯೋಜನೆಗೆ ಮುಕ್ತಿ ಸಿಕ್ತಿರಲಿಲ್ಲ.‌

ಬೊಮ್ಮಾಯಿ ಅವರು ಆಡಳಿತಗಾರರೂ ಹೌದು, ತಾಂತ್ರಿಕ ಪರಿಣಿತರೂ ಹೌದು, ನೀರಾವರಿ ತಜ್ಞರೂ ಹೌದು. ಬೊಮ್ಮಾಯಿ ಮಾರ್ಗದರ್ಶನದಲ್ಲಿ ಡಿಪಿಆರ್ ಮರು ಪರಿಷ್ಕರಣೆ ಮಾಡಲಾಯಿತು.

ಡ್ಯಾಮ್ ಎತ್ತರವನ್ನು ಕಡಿಮೆ ಮಾಡಲಾಯ್ತು. ನಮಗೆ ಸಿಗುವ 3.9 ಟಿಎಂಸಿ ಅಡಿ ನೀರು ಸದ್ಬಳಕೆ ಮಾಡಿಕೊಳ್ಳಲು ಡಿಪಿಆರ್ ಮರು ಪರಿಷ್ಕರಣೆ ಮಾಡಲಾಯ್ತು. ಹತ್ತಾರು ಬಾರಿ ದೆಹಲಿಗೆ ಹೋಗಿ ಬಂದ್ವಿ. ಅನೇಕ ಭೇಟಿಗಳ ಬಳಿಕ ಈ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು‌.

ತೊಗರಿ ಬೆಳೆಗೆ ನೆಟೆ ರೋಗ: ₹500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆಗೆ ಪ್ರಿಯಾಂಕ್‌ ಖರ್ಗೆ ಮನವಿ

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿದ್ದ ಹೋರಾಟಗಾರರಿಗೆ ಸಿಹಿಸುದ್ದಿ ಸಿಕ್ಕಿದೆ. ಕೇಂದ್ರ ಜಲ ಆಯೋಗವು ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿಗೆ ಅನುಮತಿಯನ್ನು ನೀಡಿದೆ.

ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪ್ರಹ್ಲಾದ್‌ ಜೋಶಿ ಧನ್ಯವಾದ ತಿಳಿಸಿದ್ದಾರೆ.

Published On: 30 December 2022, 01:48 PM English Summary: Good News: Center agrees to Kalasa Banduri project – Chief Minister Basavaraja Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.