ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು, ಮದುವೆ ಸಂಭ್ರಮದ ಸಂದರ್ಭದಲ್ಲಿಯೇ ಚಿನ್ನದ ದರ ಇಳಿಕೆ ಆಗಿರುವುದು ಚಿನ್ನ ಪ್ರಿಯರಲ್ಲಿ ಖುಷಿ ಮೂಡಿಸಿದೆ.
ಮದುವೆ ಹಾಗೂ ಶುಭ ಸಮಾರಂಭಗಳಿಗೆ ಚಿನ್ನ ಅತ್ಯಂತ ಅವಶ್ಯ ಎಂದೇ ಪರಿಗಣಿಸಲಾಗುತ್ತದೆ.
ಅಲ್ಲದೇ ಮದುವೆ ಖರ್ಚುಗಳಲ್ಲಿ ಶೇ 25ಕ್ಕೂ ಹೆಚ್ಚಿನ ಪ್ರಮಾಣ ಚಿನ್ನ ಖರೀದಿಗೆ ಹೋಗುವುದೇ ಹೆಚ್ಚು.
ಚಿನ್ನ ಖರೀದಿಗಾಗಿಯೇ ಹಲವರು ಮದುವೆ ಸಂಭ್ರಮದ ಸಂದರ್ಭದಲ್ಲಿ ಸಾಲ ಮಾಡುವುದೂ ಇದೆ.
ಇದೀಗ ಅಂತವರಿಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದು ಸಹಜವಾಗಿಯೇ ನಿರಾಳತೆ ಮೂಡಿಸಿದೆ.
ರಾಜ್ಯದ ವಿವಿಧೆಡೆ ಮುಂದುವರಿದ ಧಾರಾಕಾರ ಮಳೆ!
ಮಾರ್ಚ್ 22ಕ್ಕೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಆಗಿದ್ದು, ವರದಿ ಆಗಿತ್ತು.
ಇದಾದ ನಂತರದಲ್ಲಿ ಅಂದರೆ, ಕಳೆದ ಒಂದು ವಾರದ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿತ್ತು.
ಕಳೆದ ಐದಾರು ದಿನಗಳಲ್ಲಿ ಚಿನ್ನದ ಬೆಲೆ 800 ರೂಪಾಯಿ ಹೆಚ್ಚಳವಾಗಿ ಚಿನ್ನ ಖರೀದಿದಾರರಿಗೆ ಶಾಕ್ ಮೂಡಿಸಿತ್ತು.
ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ.
ವಾರಾಂತ್ಯದಲ್ಲಿ ಚಿನ್ನ ಬೆಲೆ ಇಳಿಕೆ ಆಗಿರುವುದು ಖರೀದಿದಾರರಿಗೆ ಡಬಲ್ ಖುಷಿಯನ್ನು ನೀಡಿದೆ.
ಭಾರತದಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಕಡಿಮೆ ಆಗಿರುವುದು ವರದಿ ಆಗಿದೆ.
ಇನ್ನು 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯೂ ಇಳಿಕೆ ಆಗಿದ್ದು, 24 ಕ್ಯಾರಟ್ನ 10 ಗ್ರಾಂ ಚಿನ್ನದ ದರ 160 ಕಡಿಮೆ ಆಗಿದೆ.
22 ಕ್ಯಾರಟ್ನ 1 Grmನ ಮೊತ್ತ 5,485 ರೂಪಾಯಿ 8 Grmn ಚಿನ್ನದ ಬೆಲೆ 43,880 ರೂಪಾಯಿ, 10 Grmನ ಬೆಲೆ 54,850 ರೂಪಾಯಿ ಆಗಿದೆ.
ಇನ್ನು 24 ಕ್ಯಾರಟ್ ಚಿನ್ನದ 1 Grmನ ಬೆಲೆಯೂ ಇಳಿಕೆ ಆಗಿರುವುದು ವರದಿ ಆಗಿದೆ.
ಕೇಂದ್ರದಿಂದ ಎಲ್‌ಪಿಜಿ ಗ್ಯಾಸ್ ಹೊಂದಿರುವವರಿಗೆ ಸಿಹಿಸುದ್ದಿ: ಬರೋಬ್ಬರಿ 200 ಸಬ್ಸಿಡಿ ನೀಡಲು ಅನುಮೋದನೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಹೇಗಿದೆ ?
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದು ವರದಿ ಆಗಿದೆ.
1 Grmನ ಚಿನ್ನದ ಬೆಲೆಯು 15 ರೂಪಾಯಿ ಕಡಿಮೆ ಆಗುವ ಮೂಲಕ 5,490 ರೂಪಾಯಿ ಮುಟ್ಟಿದೆ.
ಅದೇ ರೀತಿ 8 ಗ್ರಾಂ 43,920 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆ 54,900 ರೂಪಾಯಿ ಆಗಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟ ಅನುಮೋದನೆ
ಬೆಳ್ಳಿ ಬೆಲೆಯಲ್ಲಿ ಏರಿಳಿತ
ಚಿನ್ನದ ಬೆಲೆಯಂತೆಯೇ ಬೆಳ್ಳಿ ಬೆಲೆಯಲ್ಲೂ ಇಳಿಕೆ ಆಗಿದೆ. ಆದರೆ, ಚಿನ್ನದ ಬೆಲೆಗೆ ಹೋಲಿಕೆ ಮಾಡಿದರೆ, ಬೆಳ್ಳಿ ಬೆಲೆಯಲ್ಲಿ ದೊಡ್ಡ ಬದಲಾವಣೆ ಆಗಿಲ್ಲ.
ಭಾನುವಾರ 10 ಗ್ರಾಂನ ಬೆಳ್ಳಿ ಬೆಲೆ 3 ರೂಪಾಯಿ ಏರಿಕೆ ಆಗಿತ್ತು.
1 ಕೆಜಿ ಬೆಳ್ಳಿ ಬೆಲೆಯು 300 ರೂಪಾಯಿ ಏರಿಕೆ ಆಗುವ ಮೂಲಕ 76,000 ಸಾವಿರ ರೂಪಾಯಿ ಆಗಿದೆ.
Share your comments