Gold and Silver Rate: ಮಾರುಕಟ್ಟೆಯಲ್ಲಿ ಮಂಗಳವಾರವೂ ಸಹ ಚಿನ್ನಾಭರಣದಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ. ಆಗಿದ್ದರೆ ದರ ಎಷ್ಟಿದೆ ಇಲ್ಲಿದೆ ವಿವರ..
ಹಬ್ಬದ ಹಿನ್ನೆಲೆಯಲ್ಲಿ ಚಿನ್ನಾಭರಣ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆಭರಣಗಳ ಖರೀದಿಗೆ ಇದು ಅತ್ಯಂತ ಸಕಾಲವಾಗಿದೆ.
ಇದನ್ನೂ ಓದಿರಿ: ಅವರೆಕಾಳಿನಲ್ಲಿದೆ ಹಲವು ವಿಟಮಿನ್, ಸೇವನೆಯಿಂದ ಆಗುವ ಲಾಭ ಗೊತ್ತಾ!
ಕಳೆದ ಒಂದು ವಾರದ ಹಿಂದೆ ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ಉಂಟಾಗಿತ್ತು. ಈ ಅವಧಿಯಲ್ಲಿ ಚಿನ್ನಾಭರಣದ ಖರೀದಿ ಪ್ರಮಾಣವೂ ಜೋರಾಗಿತ್ತು.
ದೇಶದಾದ್ಯಂತ ಸೋಮವಾರ ಮತ್ತು ಮಂಗಳವಾರ ಚಿನ್ನಾಭರಣದಲ್ಲಿ ಯಥಾಸ್ಥಿತಿ ಮುಂದುವರಿದಿದೆ.
Gold Rate: ಒಂದು ಗ್ರಾಂ ಚಿನ್ನದ ಬೆಲೆ 4,701 ರೂಪಾಯಿ ಆಗಿದೆ. ಕಳೆದ ಒಂದು ವಾರದಿಂದ ಚಿನ್ನಾಭರಣದಲ್ಲಿ ಏರಿಳಿತವಾಗುತ್ತಿದೆ.
PM Kisan Samman Sammelan 2022: ರೈತರ ಖಾತೆಗೆ ಬರಲಿದೆ ನೇರವಾಗಿ 16,000 ಕೋಟಿ!
ಮಾರುಕಟ್ಟೆಯಲ್ಲಿ ಮಂಗಳವಾರ ಬಂಗಾರದ ದರ, ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - 4,701 ರೂಪಾಯಿ ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,129 ರೂಪಾಯಿ ಆಗಿದೆ. ಅದೇ ರೀತಿ ಎಂಟು ಗ್ರಾಂ (8GM) ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ - 37,608 ರೂಪಾಯಿ ಆಗಿದೆ.
ಇತ್ತ 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 41,032 ರೂಪಾಯಿ ಆಗಿದ್ದು, ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - 47,010 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 51,290 ರೂ. ಆಗಿದೆ. ಇನ್ನು ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - 4,70,100 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,12,900 ರೂ. ಆಗಿದೆ.
ಇನ್ನಷ್ಟು ಓದಿರಿ: ಗುಡ್‌ನ್ಯೂಸ್: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ!
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,060 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,410, ರೂ. 47,010, ರೂ. 47,010 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,150 ರೂ. ಆಗಿದೆ.
Silver Rate: ಇನ್ನು, ಬೆಳ್ಳಿಯ ವಿಷಯಕ್ಕೆ ಬಂದರೆ ಇದರ ಬೆಲೆಯಲ್ಲೂ ಸಹ ಸೋಮವಾರಕ್ಕೆ ಹೋಲಿಸಿದರೆ, ಯಾವುದೇ ಬದಲಾವಣೆಯಾಗಿಲ್ಲ.
ಕಳೆದ ತಿಂಗಳಿನಲ್ಲಿ ಅಂದರೆ ಸೆಪ್ಟೆಂಬರ್ 10 ರಂದು ಬೆಳ್ಳಿಯ ಗರಿಷ್ಠ ಬೆಲೆ ಪ್ರತಿ ಕೆಜಿಗೆ 60,400 ರೂ. ಕ್ಕೆ ತಲುಪಿತ್ತು ಹಾಗೂ ಸೆಪ್ಟೆಂಬರ್ 1 ರಂದು ಕನಿಷ್ಠ ಬೆಲೆ 51,600 ರೂ. ಕ್ಕೆ ಕುಸಿದಿತ್ತು. ಈ ತಿಂಗಳಿನ ಪ್ರದರ್ಶನವನ್ನು ಕಾದು ನೋಡಬೇಕಾಗಿದೆ. ಅಷ್ಟಕ್ಕೂ, ಬೆಳ್ಳಿ ದರ ಇಂದು ಪ್ರತಿ ಕೆಜಿಗೆ 57,700 ರೂ. ಗಳಾಗಿದೆ.
ಬೆಂಗಳೂರು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ 632, ರೂ. 6,320 ಹಾಗೂ 63,200 ರೂ. ಗಳಾಗಿವೆ.
ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 63,200 ರೂ. ಆಗಿದ್ದರೆ ದೆಹಲಿಯಲ್ಲಿ 57,700 ರೂ. ಮುಂಬೈನಲ್ಲಿ 57,700 ರೂ. ಹಾಗೂ ಕೊಲ್ಕತ್ತದಲ್ಲೂ 57,700 ರೂ. ಗಳಾಗಿದೆ.
Share your comments