1. ಸುದ್ದಿಗಳು

Gold Rate Today ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ಗಗನ ಮುಖಿ!

Hitesh
Hitesh
Gold Rate Today Decrease in Gold Price; The face of the silver sky!

ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಚಿನ್ನ ಖರೀದಿ ಮಾಡಲು ಇದು ಅತ್ಯಂತ ಸೂಕ್ತ ಸಂದರ್ಭ ಎಂದೇ ಹೇಳಬಹುದಾಗಿದೆ.

ನಮ್ಮ ದೇಶದಲ್ಲಿ ಚಿನ್ನ ಖರೀದಿ ಎನ್ನುವುದು ಕೇವಲ ಆಭರಣ ಅಥವಾ ಒಡೆವೆಗಳನ್ನು ಕೊಳ್ಳುವ ಉದ್ದೇಶದಿಂದ ಮಾತ್ರ ಖರೀದಿ ಮಾಡುವುದಿಲ್ಲ.

ಚಿನ್ನ ಖರೀದಿ ಎನ್ನುವುದು ಭವಿಷ್ಯದ ಹೂಡಿಕೆಯೂ ಹೌದು.  

ಇನ್ನು ರಾಜ್ಯದಲ್ಲಿ ಚಿನ್ನದ ದರವು ಇಳಿಕೆ ಆಗುತ್ತಲೇ ಇದೆ. ಬೆಂಗಳೂರಿನಲ್ಲಿ  22 ಕ್ಯಾರಟ್ ಬಂಗಾರದ ಬೆಲೆಯು 10Grms ಗೆ 54,450 ರೂಪಾಯಿ

ಆಗಿರುವುದು ವರದಿ ಆಗಿದೆ. ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ಬುಧವಾರ ಚಿನ್ನದ ಬೆಲೆಯು 54,600 ಸಾವಿರ ರೂಪಾಯಿ ಮುಟ್ಟಿದೆ.  

ಒಂದು ಗ್ರಾಂ 1GMನ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯು 5,445 ರೂಪಾಯಿ ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ ಅಪರಂಜಿಯ

ಬೆಲೆಯನ್ನು ನೋಡುವುದಾದರೆ, 5,941 ರೂಪಾಯಿ ಆಗಿದೆ. ಅಲ್ಲದೇ ಎಂಟು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ

ಬೆಲೆ 43,560 ರೂಪಾಯಿ ತಲುಪಿದೆ.  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) 59,410 ರೂಪಾಯಿ ಆಗಿದೆ.

ಇನ್ನು  10 ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 54,450  ರೂಪಾಯಿ ಆಗಿದ್ದರೆ,

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ)ಯು 59,410 ರೂಪಾಯಿ ಆಗಿದೆ.

ಉಳಿದಂತೆ ನೂರು ಗ್ರಾಂ 100GM 22 ಕ್ಯಾರಟ್ ಆಭರಣ ಚಿನ್ನದ ಬೆಲೆಯು   5,44,500  ರೂಪಾಯಿ ಆಗಿದೆ.

ಇನ್ನು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) 5,94,100 ರೂಪಾಯಿ ಮುಟ್ಟಿದೆ.  

ಬೆಳ್ಳಿ ಬೆಲೆ ದುಬಾರಿ

ರಾಜ್ಯದಲ್ಲಿ ಚಿನ್ನದ ಬೆಲೆಯು ಇಳಿಕೆ ಆಗುತ್ತಿದ್ದರೂ, ಬೆಳ್ಳಿ ಬೆಲೆಯಲ್ಲಿ ಏರಿಕೇ ಆಗುತ್ತಲ್ಲೇ ಇರುವುದು ವರದಿ ಆಗುತ್ತಿದೆ.

ಬುಧವಾರ ಹಾಗೂ ಗುರುವಾರ ಬೆಳ್ಳಿಯ ಬೆಲೆಯು ಒಂದು ಕೆಜಿಗೆ ಬೆಳ್ಳಿ ಬೆಲೆಯು ಬರೋಬ್ಬರಿ 73,400 ಸಾವಿರ ರೂಪಾಯಿ ಮುಟ್ಟಿತ್ತು.

ಕಳೆದ ಎರಡು ದಿನಗಳ ಬೆಳ್ಳಿಯ ಬೆಲೆಯನ್ನು ನೋಡಿದರೆ, 100 ರೂಪಾಯಿ ಆಗಿದೆ. 

ರಾಜ್ಯ ರಾಜಧಾನಿಯಲ್ಲಿ ಬೆಳ್ಳಿಯ ಬೆಲೆಯನ್ನು ನೋಡುವುದಾದರೆ, ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿರುವುದು ಕಂಡುಬರುತ್ತಿದೆ.

ಬೆಳ್ಳಿಯು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಯು ಕ್ರಮವಾಗಿ 727 ರೂಪಾಯಿ, 7,275 ರೂಪಾಯಿ

ಮತ್ತು  72,750 ರೂಪಾಯಿ ಆಗಿರುವುದು ವರದಿ ಆಗಿದೆ.  

Published On: 13 July 2023, 10:04 AM English Summary: Gold Rate Today Decrease in Gold Price; The face of the silver sky!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.