1. ಸುದ್ದಿಗಳು

ಇನ್ನು ಮುಂದೆ ಬಡವರಿಗೆ ಚಿನ್ನದ ಖರೀದಿ ಕನಸಿನ ಮಾತಾಗಲಿದೆ

ಜಾಗತಿಕ ಮಟ್ಟದಲ್ಲಿ ಏರುಮುಖವಾಗಿರುವ ಚಿನ್ನದ ಬೆಲೆ ಭಾರತದಲ್ಲಿ 2021ರ ವೇಳೆಗೆ 10 ಗ್ರಾಂಗೆ 82 ಸಾವಿರ ರೂಪಾಯಿ ಆಗುವ ಸಾಧ್ಯತೆ ಇರುವುದಾಗಿ ಚಿನಿವಾರ ಪೇಟೆಯ ತಜ್ಞರು ಭವಿಷ್ಯ ನುಡಿದಿದ್ದಾರೆ
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆ ತಲ್ಲಣಗೊಂಡಿದೆ. ಭವಿಷ್ಯದಲ್ಲಿ ಅದು ಚೇತರಿಸಿಕೊಳ್ಳುವ ಯಾವುದೇ ಲP್ಷÀಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಗಿ ಬೀಳಲಿದ್ದಾರೆ. ಇದರಿಂದಾಗಿ ಯಾರೂ ಊಹಿಸದಷ್ಟು ಚಿನ್ನದ ಬೆಲೆ ಗಗನಕ್ಕೇರಲಿದೆ. ಇನ್ನು ಮುಂದೆ ಬಡವರಿಗೆ ಚಿನ್ನದ ಖರೀದಿ ಕನಸಿನ ಮಾತಾಗಲಿದೆ. ಕೊರೋನಾ ಸೋಂಕಿನಿಂದಾಗಿ ತತ್ತರಿಸಿರುವ ಸಾಮಾನ್ಯ ಜನತೆಯ ಪಾಡಿಗೆ ಚಿನ್ನ ಖರೀದಿ ಅಸಾಧ್ಯವಾಗಲಿದೆ.

ಗುರುವಾರದ ಚಿನಿವಾರ ಪೇಟೆಯ ವಹಿವಾಟು ಅಂತ್ಯಕ್ಕೆ 10 ಗ್ರಾಂ ಚಿನ್ನಕ್ಕೆ 46,352 ರೂಪಾರಿಯ ದರ ನಿಗದಿಯಾಗಿತ್ತು. ಇದರಿಂದಾಗಿ ಗ್ರಾಹಕರಿಗೆ ಶಾಕ್ ನೀಡಿದೆ ಇದರ ಅರ್ಥ, ಕೇವಲ ಒಂದೂವರೆ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಶೇ.75 ರಷ್ಟು ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
 ಮುಂಬೈ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಮ್ ಶುದ್ದ ಚಿನ್ನದ ದರ ಶುಕ್ರವಾರ 46607 ರೂಪಾಯಿ ಆಗಿದೆ. ಈ ಮೂಲಕ ಚಿನ್ನದ ದರ ಒಂದೇ ದಿನ 342 ರೂಪಾಯಿ ಏರಿಕೆ ಆಗಿದೆ. ಗುರುವಾರದಂದು 10 ಗ್ರಾಮ್ ಚಿನ್ನದ ದರ 462 ರೂಪಾಯಿ ಏರಿಕೆ ಆಗಿ 46080 ರೂಪಾಯಿ ತಲುಪಿತ್ತು.

ಗೋಲ್ಮ್ಯಾನ್ ಸ್ಯಾಚ್ ಎಂಬ ಮತ್ತೊಂದು ಜಾಗತಿಕ ಸಂಸ್ಥೆಯ ತಜ್ಞರ ಪ್ರಕಾರ ಹಳದಿ ಲೋಹದ ಮೇಲಿನ ಹೂಡಿಕೆ ಹೆಚ್ಚಲಾಭ ತಂದುಕೊಡಲಿದೆ. ಕಚ್ಚಾ ತೈಲದ ಮೇಲಿನ ಹೂಡಿಕೆಗಿಂತಲೂ ಇದು ಆಕರ್ಷಣೀಯವಾಗಿ ಕಾಣುತ್ತಿದೆ ಎಂದು ಹೇಳಿದೆ.

ಕಾಕತಾಳೀಯ ಎಂಬಂತೆ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಪಾತಾಳಕ್ಕೆ ಕುಸಿಯಲಿದೆ ಎಂದು ಇದೇ ಗೋಲ್ಡ್‍ಮನ್ ಪ್ಯಾಚ್ ತಜ್ಞರು ಮಾರ್ಚ್ ಕೊನೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಅದರಂತೆ ತೈಲ ಬೆಲೆಗಳು ಮೇ ವೇಳಗೆ ಭಾರಿ ಇಳಿಕೆ ಕಂಡಿವೆ.

Published On: 25 April 2020, 08:57 PM English Summary: Gold is no longer the dream of the poor

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.