ಭಾರತ ಸರಕಾರ, ಕೃಷಿ ಇಲಾಖೆಯಿಂದ ಫಾರ್ಮಸ್- ಫಾರ್ಮ ಮಶಿನರಿ ಸೆಲೂಶನ್ಸ್ ಎಂಬ ಬಹುಭಾಷೆಯಲ್ಲಿ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ರೈತರು ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಮಷಿನರಿ ಹಬ್‍ಗಳಲ್ಲಿ ಲಭ್ಯವಿರುವ ಕೃಷಿ ಯಂತ್ರೋಪಕರಣಗಳನ್ನು 5 ಕಿ.ಮೀ. ರಿಂದ 500 ಕಿ.ಮೀ. ಅಂತರದಲ್ಲಿರುವ ಗ್ರಾಹಕ ಬೇಡಿಕೆ ಕೇಂದ್ರಗಳಿಂದ ಬಾಡಿಗೆಗೆ ಪಡೆಯಬಹುದು.
ಅಡಿಕೆ, ಕಬ್ಬು, ತೊಗರಿ, ಟೊಮ್ಯಾಟೊ, ತೆಂಗಿನಕಾಯಿ, ಭತ್ತ, ಮೆಕ್ಕೆಜೋಳ, ಮಾವು ಮುಂತಾದ ಬೆಳೆಗಳಿಗೆ ಉಪಯೋಗಿಸುವ ಯಂತ್ರಗಳಾದ ಟ್ರಾಕ್ಟರ್, ಪವರ್ ಟಿಲ್ಲರ್, ರೋಟಾವೇಟರ್, ರೀಪರ್, ಡೋಜರ್ ಮತ್ತು ಹಾರ್ವೆಸ್ಟರ್‍ಗಳ ಅವಶ್ಯಕತೆ ಇದ್ದಲ್ಲಿ ತಮ್ಮ ವಿಳಾಸ ನಮೂದಿಸಿದರೆ ಹತ್ತಿರದ ಕೃಷಿ ಯಂತ್ರೋಪಕರಣ ಕೇಂದ್ರ ಹಾಗೂ ಅದರ ವಿವರವನ್ನು ಸೂಚಿಸುತ್ತದೆ.
ಇದರಿಂದ ರೈತರು ತಮಗೆ ಬೇಕಾಗಿರುವ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಸಮಯದಲ್ಲಿ ಹಾಗೂ ವಿವಿಧ ಕೇಂದ್ರಗಳ ಬಾಡಿಗೆ ದರಗಳನ್ನು ಪರೀಕ್ಷಿಸಿ ಸೂಕ್ತ ದರವನ್ನು ಆಯ್ಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ.
https://play.google.com/store/apps/details?id=app.chcagrimachinery.com.chcagrimachinery&hl=en_IN&gl=US ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು.
ಎಲ್ಲಾ ರೈತ ಬಾಂಧವರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು ಅಥವಾ ಕೆಳಗಿನ ಲಿಂಕ್‍ನಿಂದ ಪಡೆಯಬಹುದು. ಈ ಅಪ್ಲಿಕೇಶನ್ ಮೂಲಕ ರೈತರು ಕಡಿಮೆ ಸಮಯದಲ್ಲಿ ಕೃಷಿ ಯಂತ್ರೋಪಕರಣಗಳ ಉಪಯೋಗ ಪಡೆಯಬಹುದು.
Share your comments