ತರಕಾರಿ ಬೆಳೆಯುವ ರೈತರಿಗಿಲ್ಲದೆ ಸಂತಸದ ಸುದ್ದಿ. ನಿಮ್ಮ ಬೆಳೆಯಲ್ಲಿ ಇಳುವರಿ ಕಡಿಮೆಯಾಗತ್ತಿದೇಯೇ? ಇಳುವರಿ ಕಡಿಮೆಯಾಗುತ್ತಿದ್ದರೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಹೆಚ್ಚು ಇಳುವರಿ ಹಾಗೂ ಉತ್ತಮ ಗುಣಮಟ್ಟದ ತರಕಾರಿಗಾಗಿ ಅರ್ಕಾ ತರಕಾರಿ ಸ್ಪೇಷಲ್ ಸಿಂಪರಣೆ ಮಾಡಬಹುದು. ಈ ಲಘು ಪೋಷಕಾಂಶಗಳ ಮಿಶ್ರಣವನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.
ಮೊದಲ ಬಾರಿಗೆ ಗಿಡ ನಾಟಿ ಮಾಡಿದ 25-30 ದಿನಗಳ ನಂತರ ಅಥವಾ ಬಿತ್ತನೆ ಮಾಡಿದ 40-45 ದಿನಗಳ ಅಂತರದಲ್ಲಿ ಸಿಂಪಡಿಸಬಹುದು. ಎರಡನೇ ಮತ್ತು ಮೂರನೇ ಬಾರಿಗೆ 20 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಇದನ್ನು ಬಳ್ಳಿಯ ಎಲೆ, ಕುಡಿ ಸಂಪೂರ್ಣ ತೊಯ್ಯುವ ಹಾಗೆ ಸಿಂಪಡಿಸಬೇಕು. ಅರ್ಕಾ ವೆಜಿಟೇಬಲ್ ಬೆಲೆ ಪ್ರತಿ ಕಿ.ಗ್ರಾಗೆ 150 ರೂಪಾಯಿಯಿದೆ.
ಟೊಮ್ಯಾಟೋ, ಕೋಸು, ಹೂಕೋಸು, ಎಲೆಕೋಸು, ದಪ್ಪ ಮೆಣಸಿನಕಾಯಿಗೆ ಪ್ರತಿ ಲೀಟರಿಗೆ 5 ಗ್ರಾಂನ್ನು ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.
ಮೆಣಸಿನಕಾಯಿ, ಬದನೆ, ಈರುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಮೂಲಂಗಿಗೆ 3 ಗ್ರಾಂ ಪ್ರತಿ ಲೀಟರಿಗೆ ನಿಗದಿಪಡಿಸಿರುವ ಪ್ರಮಾಣದ ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.
ಹುರುಳಿ, ಬೆಂಡೆ, ಅವರೆಕಾಯಿಗೆ 2 ಗ್ರಾಂಗೆ ನಿಗದಿಪಡಿಸಿರುವ ಪ್ರಮಾಣದ ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.
ಸೌಕೆಕಾಯಿ, ಕಲ್ಲಂಗಡಿ, ಕರಬೂಜ, ಹೀರೇಕಾಯಿ, ಹಾಗಲಕಾಯಿಗೆ 1 ಗ್ರಾಂ ಲೀಟರ್ ನಿಗದಿಪಡಿಸಿರುವ ಪ್ರಮಾಣದ ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ದೂರವಾಣಿ ಸಂಖ್ಯೆ 9480696316, 8123922495 ಗೆ ಸಂಪರ್ಕಿಸಬಹುದು.
ಸೂಚನೆ: ಈ ಮಿಶ್ರಣದ ಜೊತೆ ಯಾವುದೇ ಕೀಟನಾಶಕ ಮತ್ತು ರೋಗನಾಶಕಗಳನ್ನು ಬೆರೆಸಿ ಸಿಂಪಡಿಸಬಾರದು.
Share your comments