ಶಾಲೆಗಳಲ್ಲಿ ಪ್ರತಿನಿತ್ಯ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಆದೇಶ ಹೊರಡಿಸಿದ್ದಾರೆ.
ಹಲವು ಅಚ್ಚರಿಗಳಿಗೆ ಸಾಕ್ಷಿಯಾದ GKVK ಕೃಷಿ ಮೇಳ: ವಿಶೇಷತೆಗಳೇನು ಗೊತ್ತೆ?
ಇನ್ನು ಮುಂದೆ ಶಾಲೆಗಳಲ್ಲಿ ನಿತ್ಯ ವಿದ್ಯಾರ್ಥಿಗಳು ಧ್ಯಾನ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆಗೆ, ಏಕಾಗ್ರತೆಗೆ, ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನ ಮಾಡಿಸುವುದು ಅಗತ್ಯ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಸಚಿವರ ಸುತ್ತೋಲೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಹಿತ್ಯ ವಲಯ ಸೇರಿದಂತೆ ಹಲವರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ!
ಕೊರೊನಾ ಸೋಂಕು ಕಾಲದಲ್ಲಿ ಶಾಲೆ ಮುಚ್ಚಿದ ಪರಿಣಾಮ ಸಮಸ್ಯೆಗಳಾಗಿದ್ದು, ಅದನ್ನು ಸರಿಪಡಿಸಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸುವುದು ಅವಶ್ಯ ಎಂದು ಹೇಳಿದ್ದಾರೆ.
ಸಂಘವು ಇದನ್ನು ಎಲ್ಲ ಶಾಲೆಗಳಿಗೆ ವಿಸ್ತರಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ರೈತರಿಗೆ ಸಿಹಿಸುದ್ದಿ: ಹಿಂಗಾರು; ಭತ್ತ ಖರೀದಿಯಲ್ಲಿ ಶೇ 12% ಹೆಚ್ಚಳ
ಮಕ್ಕಳು ಎಲ್ಲರೊಂದಿಗೆ ಬೆರೆತು, ಆಡಿ, ನಲಿದು ಬೆಳೆಯಬೇಕು ಹೊರತು ಧ್ಯಾನಿಸುವುದು ಸೂಕ್ತವಲ್ಲ.
ಶಾಲೆ ಮುಚ್ಚಿದ್ದರಿಂದ ಮಕ್ಕಳಲ್ಲಿ ಆದ ಮಾನಸಿಕ ಸಮಸ್ಯೆ ನಿಭಾಯಿಸಲು ಯೂನಿಸೆಫ್ ಸಹ ಕಾರ್ಯಸೂಚಿ ಪ್ರಕಟಿಸಿದ್ದು, ಅದರಲ್ಲಿ ಧ್ಯಾನ ಅಥವಾ ಪ್ರಾಣಾಯಾಮ ಎಂಬ ಪದಗಳೇ ಇಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಚಿವರ ಈ ಪ್ರಸ್ತಾವನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಹಲವರು ವ್ಯಂಗ್ಯವಾಡಿದ್ದಾರೆ.
ಮಕ್ಕಳಿಗಿಂತ ಸಚಿವರಿಗೆ ಧ್ಯಾನದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
Share your comments