1. ಸುದ್ದಿಗಳು

ಪದ್ಯ ಹೇಳಿದ್ರೆ ಕೊಡ್ತಾರೆ ಉಚಿತ ಪೆಟ್ರೋಲ್

ನಮ್ಮ ದೇಶದಲ್ಲಿ ಪೆಟ್ರೋಲ್ ರೇಟ್ ಈಗಾಗಲೇ ಹಲವಾರು ನಗರಗಳಲ್ಲಿ ಶತಕ ಬಾರಿಸಿದ್ದು ತಮಗೆಲ್ಲ ತಿಳಿದಿದ್ದೆ ಇದೇ,ಆದರೆ ನಮ್ಮ ದೇಶದ ಈ ಒಂದು ರಾಜ್ಯದಲ್ಲಿ ಪದ್ಯ ಹೇಳಿದರೆ ಉಚಿತವಾಗಿ ಪೆಟ್ರೋಲ್ ಕೊಡ್ತಾರೆ ಗೊತ್ತಾ?ಶಾಕ್ ಆಯ್ತಾ?ಆದ್ರೂ ನೀವು ನಂಬಲೇಬೇಕು ಯಾಕೆ ಗೊತ್ತಾ ಇದು ಬೇರೆ ಎಲ್ಲೂ ಅಲ್ಲಾ ನಮ್ಮ ದೇಶದ ತಮಿಳುನಾಡಿನಲ್ಲಿ.

ಇಲ್ಲಿರುವ ವಿಶೇಷವೇನೆಂದರೆ ಮಕ್ಕಳು ಪರೀಕ್ಷೆ ಪಾಸ್ ಆದರೆ ಪೋಷಕರಿಗೆ ಉಡುಗರೆ ಇದ್ದ ಹಾಗೆ,ಯಾಕೆಂದರೆ ಇಲ್ಲಿ ಪೋಷಕರೊಂದಿಗೆ ಕಾರ್ ಅಥವಾ ಬೈಕ್ ನಲ್ಲಿ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮಿಳಿನ ಹೆಸರಾಂತ ಕವಿ ತಿರುವಳ್ಳುವರ್ ರಚಿಸಿದ "ತಿರುಕ್ಕುರಳ್ "ಕೃತಿಯ ಹತ್ತು ದ್ವೀಪದಿಗಳನ್ನು ಹೇಳಬೇಕು,ಅದು ಎಲ್ಲಿಯೂ ತಪ್ಪಿಲ್ಲದೇ ಹೀಗೆ ಪದ್ಯ ಹೇಳಿದರಷ್ಟೇ 1 ಲೀಟರ್ ಪೆಟ್ರೋಲ್ ಉಚಿತವಾಗಿ ಸಿಗುತ್ತದೆ.

 

ಅಷ್ಟಕ್ಕೂ ಈ ಆಫರ್ ಅನ್ನು ನೀಡಿರುವುದು ತಮಿಳುನಾಡಿನ ಅರವಕೂರಿಚಿಯ ನಾಗಮಾಪಲ್ಲಿ ಹಳ್ಳಿಯ ವಳ್ಳುವರ್ ಪೆಟ್ರೋಲ್ ಬಂಕ್ ಈ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ.ವಿಶೇಷವೇನೆಂದರೆ ಈ ವರೆಗೆ 176 ವಿದ್ಯಾರ್ಥಿಗಳು ಸರಿಯಾಗಿ ಪದ್ಯವನ್ನು ಹೇಳುವ ಮೂಲಕ ಅವರ ಪೋಷಕರು 1 ಲೀಟರ್ ಉಚಿತ ಪೆಟ್ರೋಲ್ ಅನ್ನು ಪಡೆದಿದ್ದಾರೆ.

Published On: 18 February 2021, 07:34 AM English Summary: Free petrol for reciting a poem in tamilnadu

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.