1. ಸುದ್ದಿಗಳು

Ration Card ಪ್ರತಿ ಕುಟುಂಬಕ್ಕೆ 10 ಕೆ.ಜಿ ಉಚಿತ ಅಕ್ಕಿ ವಿತರಣೆ

Hitesh
Hitesh
Free distribution of 10 kg rice per family

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್‌ ಪರಿಚಯಿಸಿದ್ದು, ಈ ವಾರದ ಪ್ರಮುಖ ಸುದ್ದಿಗಳು ಈ ರೀತಿ ಇವೆ.

ಈ ವಾರದ ಪ್ರಮುಖ ಸುದ್ದಿಗಳು  
1. ಮಾ.31ರ ಒಳಗೆ ಪ್ಯಾನ್‌ ಕಾರ್ಡ್‌ - ಆಧಾರ್‌ ಕಾರ್ಡ್‌ ಲಿಂಕ್‌ ಮಾಡದಿದ್ದರೆ 10 ಸಾವಿರ ದಂಡ!
2. ಪ್ರತಿ ಕುಟುಂಬಕ್ಕೆ 10 ಕೆ.ಜಿ ಉಚಿತ ಅಕ್ಕಿ ವಿತರಣೆ  
3. ರಾಜ್ಯದ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ
4. ಒಂದು ವರ್ಷ ಸಾರಸ್‌ ಕೊಕ್ಕರೆ ಸಾಕಿ ಸಂಕಷ್ಟಕ್ಕೆ ಸಿಲುಕಿದ ರೈತ!
5. ಹೊಸಪೇಟೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಕಂಚಿನ ಪ್ರತಿಮೆ ಅನಾವರಣ
6. ಈರುಳ್ಳಿ ಬೆಳೆಗಾರರಿಗೆ ಸಿಹಿ ಸುದ್ದಿ: ಪ್ರತಿ ಎಕರೆಗೆ 4,200 ಬೆಳೆ ವಿಮೆ!
7. ಟಿ.ಬಿ ರೋಗಿಗಳ ಚಿಕಿತ್ಸೆಗೆ 2000 ಸಾವಿರ ಕೋಟಿ ಮೀಸಲು!
8. ವಯಸ್ಸಾದ ಗೋವುಗಳ ರಕ್ಷಣೆ ಸಮಾಜದ ಜವಾಬ್ದಾರಿ: ಬೊಮ್ಮಾಯಿ
9. ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ; ಅಡಿಕೆಗೆ ಸಹಾಯ ಧನ ವಿಸ್ತರಣೆ
10. ಕೃಷಿ ಜಾಗರಣದಿಂದ ಒಡಿಸ್ಸಾದಲ್ಲಿ 3 ದಿನಗಳ ಕೃಷಿ ಸನ್ಯಂತ್ರಾ ಮೇಳ

ಕೇಂದ್ರದಿಂದ ಎಲ್‌ಪಿಜಿ ಗ್ಯಾಸ್‌ ಹೊಂದಿರುವವರಿಗೆ ಸಿಹಿಸುದ್ದಿ: ಬರೋಬ್ಬರಿ 200 ಸಬ್ಸಿಡಿ ನೀಡಲು ಅನುಮೋದನೆ

ಸುದ್ದಿಗಳ ವಿವರ ಈ ರೀತಿ ಇದೆ.

1. ಕೇಂದ್ರ ಸರ್ಕಾರವು ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆಗೆ ಅಂತಿಮ ಗಡುವು ನೀಡಿದೆ.

ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ಅನ್ನು ಮಾರ್ಚ್‌ 31ರ ಒಳಗಾಗಿ ಲಿಂಕ್‌ ಮಾಡದಿದ್ದರೆ, ಬರೋಬ್ಬರಿ 10,000 ಸಾವಿರ ರೂ. ದಂಡ ಪಾವತಿ ಮಾಡಬೇಕಾಗುತ್ತದೆ.

ಅಲ್ಲದೇ ಲಿಂಕ್‌ ಮಾಡದೆ ಇದ್ದರೆ ಏಪ್ರಿಲ್‌ 1ರಿಂದ ಪ್ಯಾನ್‌ ಕಾರ್ಡ್‌ನ ನಂಬರ್‌ ಸಹ ನಿಷ್ಕ್ರೀಯವಾಗಲಿದೆ.

ಹೊಸ ಪ್ಯಾನ್‌ ಕಾರ್ಡ್‌ ಮಾಡಬೇಕಾದರೂ 10,000 ಸಾವಿರ ರೂಪಾಯಿ ಪಾವತಿ ಮಾಡಿಯೇ ಹೊಸ ಅರ್ಜಿ ಸಲ್ಲಿಸಬೇಕಾಗುತ್ತದೆ.
---------
2. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳು ಹೊಸ ಭರವಸೆಗಳನ್ನು ನೀಡುತ್ತಿವೆ.

ಈಗಾಗಲೇ ಬಿಜೆಪಿ ಸರ್ಕಾರ ಚುನಾವಣೆಯ ಅಂಗವಾಗಿ ರಾಜ್ಯದ ವಿವಿಧೆಡೆ ಬಿಜೆಪಿ ವಿಜಯ ಸಂಕಲ್ಪ 

ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನರಿಗೆ ಹೊಸ ಹೊಸ ಆಶ್ವಾಸನೆ ನೀಡುತ್ತಿದೆ.

ಈಚೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ ವಿತರಿಸುವುದಾಗಿ ಘೋಷಿಸಿದ್ದಾರೆ.
---------
 ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟ ಅನುಮೋದನೆ

---------
3. ರಾಜ್ಯದ ವಿವಿಧೆಡೆ ಇನ್ನೂ ಎರಡು ದಿನ ಗುಡುಗು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ.

ಅಲ್ಲದೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಆಗುವ ಸಾಧ್ಯತೆ ಇದೆ.

ಕರಾವಳಿ ಹಾಗೂ ಒಳನಾಡಿನ ಉಳಿದ ಕಡೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. 
--------
4. ಅಪರೂಪದ ಸಾರಸ್‌ ಕೊಕ್ಕರೆಯನ್ನು ಒಂದು ವರ್ಷ ಸಾಕಿದ ರೈತನೊಬ್ಬ ಈಗ ಫಜೀತಿಗೆ ಸಿಲುಕಿದ್ದಾರೆ.

ಗಾಯಗೊಂಡ ಅಪರೂಪದ ಸಾರಸ್ ಕೊಕ್ಕರೆಯನ್ನು ಉತ್ತರ ಪ್ರದೇಶದ ರೈತ  ಮೊಹಮ್ಮದ್ ಆರಿಫ್ ಅವರು ರಕ್ಷಿಸಿ ಒಂದು ವರ್ಷ ಅವರ ಹೊಲದಲ್ಲಿಯೇ ಸಾಕಿದ್ದರು.

ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ಸಾರಸ್ ಕೊಕ್ಕರೆ ಗಳನ್ನು ಇಟ್ಟುಕೊಳ್ಳುವುದು ಅಥವಾ ಅವುಗಳಿಗೆ ಆಹಾರವನ್ನು ನೀಡುವುದು ಕಾನೂನುಬಾಹಿರವಾಗಿದೆ

ಎಂದು ಅಲ್ಲಿನ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು  ಆರಿಫ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
---------
5. ಹೊಸಪೇಟೆ ನಗರದ ಜೈಭೀಮ್ ವೃತ್ತದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ನೂತನ ಕಂಚಿನ ಪ್ರತಿಮೆ ಹಾಗೂ ವೃತ್ತದ ಉದ್ಘಾಟನಾ ಸಮಾರಂಭ ಈಚೆಗೆ ನಡೆಯಿತು.

ಈ ಸಂದರ್ಭದಲ್ಲಿ  ಜೈ ಭೀಮ್‌ ಘೋಷಣೆ ಕೇಳಿಬಂತು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ವೈಯಕ್ತಿಕ ದೇಣಿಗೆ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ.

ಸಂಸತ್ತಿನ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಅದರ ಮೇಲೆ 12.6 ಅಡಿ ಎತ್ತರದ ಕಂಚಿನ ಪ್ರತಿಮೆ‌ ಪ್ರತಿಷ್ಠಾಪಿಸಲಾಗಿದೆ.
--------- 

PM Kisan 14th Installment release: ಪಿಎಂ ಕಿಸಾನ್‌ 14ನೇ ಕಂತಿನ ಕುರಿತು ಮಹತ್ವದ ಮಾಹಿತಿ!

Rain

6. ಈರುಳ್ಳಿ ಬೆಳೆಗೆ ಶೇಕಡ 15ರಷ್ಟು ಬೆಳೆ ವಿಮೆ ಕ್ಲೇಮ್ ಆಗಿದ್ದು, ಬೆಳೆ ವಿಮೆ ಮಾಡಿಸಿದಂತ ಬೆಳೆಗಾರರಿಗೆ ಪ್ರತಿ ಎಕರೆಗೆ 4200 ರೂಪಾಯಿ ಖಾತೆಗೆ ಜಮೆಯಾಗಲಿದೆ.

2022-23ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಈರುಳ್ಳಿ ಬೆಳೆ ಬೆಳೆದು ವಿಮೆ ಮಾಡಿಸಿದಂತಹ ರೈತರಿಗೆ ಬೆಳೆ

ವಿಮೆ ಕ್ಲೇಮ್ ಪರ್ಸೆಂಟೇಜ್ ಬಿಡುಗಡೆಯಾಗಿದೆ, ಈರುಳ್ಳಿ ಬೆಳೆಗೆ ಗದಗ ಜಿಲ್ಲೆಯ, ಗದಗ ತಾಲ್ಲೂಕಿನ ಬೆಟಗೇರಿ ಹೋಬಳಿಯಲ್ಲಿ ಬರುವಂತಹ

ಗ್ರಾಮಗಳಿಗೆ ಶೇಕಡಾ 15ರಷ್ಟು ಬೆಳೆ ವಿಮೆ ಪರ್ಸೆಂಟೇಜ್ ಕ್ಲೇಮ್ ಆಗಿದ್ದು, ಸದ್ಯದಲ್ಲಿಯೇ ರೈತರ ಖಾತೆಗಳಿಗೆ ಹಣ ಜಮೆ ಆಗಲಿದೆ.  
---------
7. ಭಾರತವು 2025ರ ವೇಳೆಗೆ ಕ್ಷಯ ರೋಗ ಮುಕ್ತವಾಗಲಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈಚೆಗೆ ನಡೆದ ಒನ್ ವರ್ಲ್ಡ್ ಟಿಬಿ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಟಿಬಿ ರೋಗಿಗಳ ಚಿಕಿತ್ಸೆಗಾಗಿ ಬರೋಬ್ಬರಿ 2 ಸಾವಿರ ಕೋಟಿ ಮೀಸಲಿಡಿಲಾಗಿದೆ ಎಂದರು.
---------
8. ವಯಸ್ಸಾದ ಗೋವುಗಳ ರಕ್ಷಣೆ ಸರ್ಕಾರ ಮತ್ತು ಸಮಾಜದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗೋವನ್ನು ಬಳಸಿ, ನಂತರ ಕೈಬಿಡುವ ಪ್ರವೃತ್ತಿ ಹಾಗೂ ನಾವು ನ್ಯಾಯಯುತವಾಗಿ ಅದರೊಂದಿಗೆ ನಡೆದುಕೊಳ್ಳುತ್ತೇವೆಯೇ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕು ಎಂದಿದ್ದಾರೆ.  
---------
9. ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದ್ದಾರೆ.

ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಹನಿ ನೀರಾವರಿ ಜೊತೆಗೆ ಸೇರಿಸಬೇಕೆಂದು ರೈತರ ಒತ್ತಾಯ ಇದೆ.

ಈಚೆಗೆ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಿಕೆಗೆ ಶೇಕಡ 90ರಷ್ಟು ಸಹಾಯಧನ ನೀಡಲಾಗುತ್ತಿದೆ.

ತೋಟಗಾರಿಕೆಯಲ್ಲಿ ಅಡಿಕೆ ಸೇರಿದೆ. ಸಾಮಾನ್ಯ ವರ್ಗದವರಿಗೆ ಶೇ.50 ರಿಂದ 75 ರಷ್ಟು ಹೆಚ್ಚಿಸಿದೆ.

ವ್ಯಾಪ್ತಿ ವಿಸ್ತರಣೆಗೆ  ಅಗತ್ಯ ಕ್ರಮ ವಹಿಸಲಾಗುವುದು ಎಂದಿದ್ದಾರೆ.  
---------
10. ಕೃಷಿ ಕ್ಷೇತ್ರದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ರೈತರಿಗೆ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಒಡಿಶಾದ

ಬಾಲಸೋರ್‌ನ ಕುರುಡಾ ಜಿಲ್ಲೆಯಲ್ಲಿ  ಕೃಷಿ ಜಾಗರಣದ ಸಹಭಾಗಿತ್ವದಲ್ಲಿ ಕೃಷಿ ಸನ್ಯಂತ್ರಾ ಮೇಳವನ್ನು ಆಯೋಜಿಸಲಾಗಿದೆ.   

ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲಾ ಮಾತನಾಡಿ,

ಮೇಳವು ಒಡಿಶಾದಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತದೆ ಮತ್ತು ಬಾಲಸೋರ್ ಜಿಲ್ಲೆಯ ಕೃಷಿ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದಿದ್ದಾರೆ.  
---------
11. ಶನಿವಾರ ತಡರಾತ್ರಿ ರಾಜಸ್ಥಾನ ಹಾಗೂ ಅರುಣಾಚಲ ಪ್ರದೇಶದಲ್ಲಿ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿದೆ.

ರಾಜಸ್ಥಾನದಲ್ಲಿ ರಿಕ್ಟರ್ ಮಾಪಕದಲ್ಲಿ 4.2 ಮತ್ತು ಅರುಣಾಚಲ ಪ್ರದೇಶದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ

ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರದ ವರದಿ ತಿಳಿಸಿದೆ.

ಈಚೆಗಷ್ಟೇ ದೆಹಲಿ ಸೇರಿದಂತೆ ವಿವಿಧೆಡೆ ಲಘು ಭೂಕಂಪನ ಸಂಭವಿಸಿತ್ತು.   
---------
12.  ಪಕ್ಷಿಗಳು ಮತ್ತು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರೊಬ್ಬರು ಕಂಡುಕೊಂಡ ಉಪಾಯ ಇದೀಗ ವೈರಲ್‌ ಆಗಿದೆ.

ರೈತರೊಬ್ಬರು ಅಭಿವೃದ್ಧಿಪಡಿಸಿರುವ ಈ ಯಂತ್ರಗಳು ಹೊಲದಲ್ಲಿ ನಿರಂತರ ಶಬ್ದ ಮಾಡುತ್ತವೆ.

ಆದ್ದರಿಂದ, ಪ್ರಾಣಿಗಳು ಮತ್ತು ಪಕ್ಷಿಗಳು ಹೊಲಗಳಿಂದ ದೂರ ಉಳಿಯುತ್ತವೆ.

ರಾಗಿ ಗದ್ದೆಯಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಓಡಿಸಲು ಯಾಂತ್ರಿಕ ಮೋಟರ್ ಅನ್ನು ಬಳಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದು ಗಾಳಿಯೊಂದಿಗೆ ಸ್ವಯಂಚಾಲಿತವಾಗಿ ತಿರುಗುವ ಫ್ಯಾನ್‌ನೊಂದಿಗೆ ಅಳವಡಿಸಲಾಗಿದೆ.   
--------- 

ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ (MSP) ಸಂಪುಟ ಅನುಮೋದನೆ

Published On: 26 March 2023, 03:28 PM English Summary: Free distribution of 10 kg rice per family

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.