1. ಸುದ್ದಿಗಳು

Fraud with Farmers? 'MSP ಸಮಿತಿ' ಚುನಾವಣೆ ಮುಗಿದ ನಂತರ?

Ashok Jotawar
Ashok Jotawar
Fraud with Farmers? 'MSP After Election'?

ಕೃಷಿ ಸಚಿವರ ಹೇಳಿಕೆ ಏನು

ಕನಿಷ್ಠ ಬೆಂಬಲ ಬೆಲೆಯ (MSP) ಸಮಿತಿಯನ್ನು ರಚಿಸಲು, ಸರ್ಕಾರ  ಚುನಾವಣೆ ಮುಗಿದ ನಂತರ ಅದನ್ನು ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ ಎಂದು ಕೃಷಿ ಸಚಿವ 'ನರೇಂದ್ರ ಸಿಂಗ್ ತೋಮರ್' ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎಂಎಸ್‌ಪಿ ಮೇಲಿನ ಕಾನೂನು ಖಾತರಿಯ ರೈತರ ಬೇಡಿಕೆಯನ್ನು ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಿದ್ದರು . ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ತೋಮರ್, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಹೇಳಿದರು.

ಆದರೆ ಈ ಚುನಾವಣೆ ಮುಗಿದ ನಂತರ ಮತ್ತೆ ಕರ್ನಾಟಕ ಸೇರಿದಂತೆ ಇನ್ನುಳಿದ ರಾಜ್ಯಗಳಲ್ಲೂ ಮುಂದಿನ ವರ್ಷ ಚುನಾವಣೆಗಳು ಇವೆ. ಕಾರಣ ಈ ಒಂದು MSP ಮೇಲಿನ ಕಾನೂನು ಯಾವಾಗ ರಚಿಸಲಾಗುತ್ತೋ? ಎಂಬುದೆ ನಿಗೂಢ ರಹಸ್ಯವಾಗಿದೆ.

MSP  ಸಮಿತಿಯನ್ನು ರಚಿಸುವ ವಿಷಯ ಸಚಿವಾಲಯದ ಪರಿಗಣನೆಯಲ್ಲಿದೆ ಮತ್ತು ಚುನಾವಣೆ ಮುಗಿದ ನಂತರ ರಚಿಸಲಾಗುವುದು ಎಂದು ಸಚಿವರು ಹೇಳಿದರು.

"ಬೆಳೆ ವೈವಿಧ್ಯೀಕರಣ, NATURAL ಕೃಷಿ ಮತ್ತು MSP ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸಲು ಪ್ರಧಾನ ಮಂತ್ರಿ ಸಮಿತಿಯ ರಚನೆಯನ್ನು ಘೋಷಿಸಿದ್ದಾರೆ ಎಂದು ಇಡೀ ದೇಶಕ್ಕೆ ತಿಳಿದಿದೆ. ಪ್ರಧಾನಿ ಮಾಡಿದ ಘೋಷಣೆಗೆ ಸರ್ಕಾರ ಬದ್ಧವಾಗಿದೆ.

ಚುನಾವಣೆ ನಡೆಯುತ್ತಿರುವುದರಿಂದ ಮಾರ್ಗದರ್ಶನಕ್ಕಾಗಿ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದರು.

"ಇಸಿಯ ಉತ್ತರ ಬಂದಿದೆ. ಚುನಾವಣೆ ಮುಗಿದ ನಂತರ ಸಮಿತಿಯನ್ನು ರಚಿಸಬೇಕೆಂದು ಅದು ಹೇಳಿದೆ" ಎಂದು ಸಚಿವರು ಹೇಳಿದರು. ಉತ್ತರ ಪ್ರದೇಶ , ಉತ್ತರಾಖಂಡ , ಮಣಿಪುರ, ಗೋವಾ ಮತ್ತು ಪಂಜಾಬ್

ಇನ್ನಷ್ಟು ಓದಿರಿ:

BUDGET-2022 ! No DOUBLE INCOME FOR FARMERS? ಏಕೆ?

Small Bank's Income! ಸಣ್ಣ ಬ್ಯಾಂಕುಗಳು ಹೇಗೆ ದೊಡ್ಡ ಪ್ರಮಾಣದಲ್ಲಿ ಗಳಿಸುತ್ತವೆ?

Published On: 04 February 2022, 12:26 PM English Summary: Fraud with Farmers? 'MSP After Election'?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.