1. ಸುದ್ದಿಗಳು

ದಿಢೀರನೆ ರಸಗೊಬ್ಬರ ಬೆಲೆಯಲ್ಲಿ ಹೆಚ್ಚಳ: ಪ್ರತಿ 50 ಕೆಜಿಗೆ 700 ರೂಪಾಯಿ ಹೆಚ್ಚಳ

Fertilizer

ರಸಗೊಬ್ಬರ ಬೆಲೆ ಏಕಾಏಕಿ ಗಗನಕ್ಕೇರಿ ರೈತರಿಗೆ ಶಾಕ್ ನೀಡಿದೆ. ಹೌದು ಬರೋಬ್ಬರಿ 700 ರೂಪಾಯಿ ಏರಿಕೆಯಾಗೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಸಗೊಬ್ಬರ ಕಂಪನಿಗಳು ಏ. 1 ರಿಂದಲೇ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿವೆ.  ಇದಕ್ಕೆ ಮುಖ್ಯ ಕಾರಣ ಕಚ್ಚಾವಸ್ತುಗಳ ಬೆಲೆ ಏರಿಕೆಯೇ ಕಾರಣ ಎನ್ನಲಾಗುತ್ತದೆ.

ಪ್ರತಿ 50 ಕೆಜಿ ಚೀಲಕ್ಕೆ 1200 ರೂಪಾಯಿಯಿದ್ದ ಡಿಎಪಿ 1900 ರೂಪಾಯಿಗೆ ಏರಿಕೆಯಾಗಿದೆ. ಎನ್.ಪಿ.ಕೆ  10.26.26 ರಸಗೊಬ್ಬರ 1175 ರೂಪಾಯಿ ಇದ್ದುದ್ದು ಪರಿಷ್ಕೃತ ಬೆಲೆ 1775 ರೂಪಾಯಿ ಆಗಿದೆ. 12.32.16 ರಸಗೊಬ್ಬರ ದರ 1185 ರೂಪಾಯಿ ಇದ್ದುದ್ದು 1800 ರೂಪಾಯಿ ಆಗಿದೆ. 20.20.20 ರಸಗೊಬ್ಬರ 925 ಇದ್ದಿದ್ದು 1350 ರೂಪಾಯಿಗೆ ಹೆಚ್ಚಳವಾಗಿದೆ.

ರಸಾಯನಿಕ ಗೊಬ್ಬರ ದರ ಏರಿಕೆ

ಅನೇಕ ಕಂಪನಿಗಳು ಈ ಮೊದಲು ಡೀಸೆಲ್ (ಡೀಸೆಲ್ ಬೆಲೆ) ಮತ್ತು ಬೀಜಗಳನ್ನು ದುಬಾರಿಯಾಗಿಮಾಡಿವೆ. ಈಗ ಡಿ ಅಮೋನಿಯಂ ಫಾಸ್ಫೇಟ್ ಅಂದರೆ ಡಿಎಪಿ (ಡಿಎಪಿ) ಬೆಲೆಯನ್ನು ಹೆಚ್ಚಿಸಲಾಗಿದೆ.

ಯಾವ ಕಂಪನಿಗಳು ಬೆಲೆಯನ್ನು ಹೆಚ್ಚಿಸಿವೆ

ಈ ಪಟ್ಟಿಯಲ್ಲಿ ಡಿಎಪಿ ತಯಾರಕ ಇಂಡೋರಾಮ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಚಂಬಲ್ ರಸಗೊಬ್ಬರ ಮತ್ತು ರಾಸಾಯನಿಕ ಲಿಮಿಟೆಡ್, ಮಂಗಳೂರು ಕೆಮಿಕಲ್ ಅಂಡ್ ರಸಗೊಬ್ಬರ ಲಿಮಿಟೆಡ್, ಪರದೀಪ್ ಫಾಸ್ಫೇಟ್ ಲಿಮಿಟೆಡ್, ಗುಜರಾತ್ ಸ್ಟೇಟ್ ರಸಗೊಬ್ಬರ ನಿಗಮ ಮತ್ತು ಕ್ರಿಬ್ಕೊ (ಕ್ರಿಬಿಎಚ್ ಕೊ) ಸೇರಿವೆ. ಎಲ್ಲರಿಗೂ ತಿಳಿದಿರುವಂತೆ, ಪ್ರಸ್ತುತ ಹಿಂಗಾರು ಬೆಳೆಗಳನ್ನು ಕೊಯ್ಲು ಮಾಡುತ್ತಿರುವಾಗ, ಮುಂಗಾರು ಬೆಳೆಗಳನ್ನು ಜೂನ್-ಜುಲೈನಲ್ಲಿ ಬಿತ್ತನೆ ಮಾಡಲಾಗುತ್ತದೆ, ಮುಖ್ಯವಾಗಿ ಡಿಎಪಿಗೆ ಬೇಡಿಕೆ ಇದೆ.

ರಸಗೊಬ್ಬರಕ್ಕೆ ಬೇಕಾಗುವ ಕಚ್ಚಾವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಚೀನಾ, ಆಫ್ರಿಕಾ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳುವ ದರದ ಆಧಾರದ ಮೇಲೆ ರಸಗೊಬ್ಬರ ದರ ಈ ಪರಿ ಏರಿಕೆಯಾಗಿದೆ. ಇತಿಹಾಸದಲ್ಲೇಯೇ ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದು.

Published On: 10 April 2021, 06:49 PM English Summary: Fertilizer price hike

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.