1. ಸುದ್ದಿಗಳು

ಫೆ. 15 ರಿಂದ ಎಲ್ಲಾ ವಾಹನಗಳಿಗೂ FasTag ಕಡ್ಡಾಯ

 ದೇಶಾದ್ಯಂತ ಎಲ್ಲಾ ಟೋಲ್ ಗೇಟ್ಗಳಲ್ಲಿ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ನ್ನು ಫೆಬ್ರವರಿ 15 ರಿಂದ  ಕಡ್ಡಾಯಗೊಳಿಸಲಾಗಿದೆ. ಈ ನಿಯಮ ಇದೇ ತಿಂಗಳ ಫೆಬ್ರವರಿ ೧೫ ರಿಂದ ಎಲ್ಲ ವಾಹನಗಳಿಗೂ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿದೆ. ವಾಹನ ಸವಾರರು ಫಾಸ್ಟ್ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ದುಪಟ್ಟು ಶುಲ್ಕ ತೆರಬೇಕಾಗುತ್ತದೆ.

ಫಾಸ್ಟ್ಯಾಗನ್ನು  ಜ. ೧ರಿಂದಲೇ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಆದರೆ, ಫಾಸ್ಟ್ಟ್ಯಾಗ್ ಅಳವಡಿಸಿಕೊಳ್ಳಲು ವಿನಾಯಿತಿ ನೀಡಿ ಈ ಅವಧಿಯನ್ನು ಫೆ. ೧೫ರವರೆಗೆ ವಿಸ್ತರಿಸಲಾಗಿತ್ತು. ಸೋಮವಾರದಿಂದಲೇ ಎಲ್ಲ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳಬೇಕಾಗುತ್ತದೆ.

ದೇಶದ ಬಹುತೇಕ ಎಲ್ಲಾ ಟೋಲ್ ಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇದನ್ನು ತಪ್ಪಿಸುವುದಕ್ಕಾಗಿಯೇ ಕೇಂದ್ರ ಸರ್ಕಾರವು ಈ ನಿಯಮ ಜಾರಿಗೆ ತಂದಿದೆ. ದೇಶಾದ್ಯಂತ ಟೋಲ್‌ಗಳಲ್ಲಿ ವಾಹನಗಳ ದಟ್ಟಣೆಯನ್ನು ತಪ್ಪಿಸುವ ದೃಷ್ಟಿಯಿಂದ ಕೇಂದ್ರ ಭೂಸಾರಿಗೆ ಸಚಿವಾಲಯ ಅನುಷ್ಠಾಗೊಳಿಸಿದೆ. ಸದ್ಯಕ್ಕೆ ಯಾವುದೇ ವಿನಾಯಿತಿ ನೀಡದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2019ರಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಪ್ರಾರಂಭಿಸಿತ್ತು.ಮೂಲಗಳ ಪ್ರಕಾರ ಶೇ. 75 ರಿಂದ ಶೇ. 80 ರಷ್ಟು ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳಲಾಗಿದೆ. ಫೆ. 15 ರಿಂದ ಶೇ. 100 ಕ್ಕೆ 100ರಷ್ಟು ಫಾಸ್ಟ್‌ಟ್ಯಾಗ್ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಎರಡು ವಿಷಯಗಳ ಆಧಾರದಲ್ಲಿ ಫಾಸ್ಟ್ಟ್ಯಾಗ್ ನಿರ್ಧಾರವಾಗಲಿದ್ದು, ಮೊದಲನೆಯದು ವಾಹನಗಳ ವರ್ಗ, 2ನೆಯದು ವಾಹನ ಎಲ್ಲಿ ನೋಂದಣಿಯಾಗಿದೆ ಎಂಬುದನ್ನು ಗಮನಿಸಿ ನಿರ್ಧಾರ ಕೈಗೊಳ್ಳಲಿದೆ.
ನೀವು ಫಾಸ್ಟ್ಟ್ಯಾಗ್‌ನ್ನು ಬಸ್, ಕಾರು ಅಥವಾ ಇತರ ವಾಹನಗಳಿಗೆ ಖರೀದಿಸುತ್ತಿದ್ದರೆ. ಪ್ರತಿ ಬ್ಯಾಂಕುಗಳಲ್ಲಿ ವಿಭಿನ್ನ ವ್ಯವಸ್ಥೆ ಇರಲಿದೆ. ನಿಮ್ಮ ಕಾರಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿದ್ದರೆ ಅದನ್ನು ಪೇಟಿಎಂ ಮೂಲಕ 5೦೦ ರೂ.ಗೆ ಖರೀದಿಸಲು ಅವಕಾಶವಿದೆ. ಅಮೇಜಾನ್ ಹಾಗೂ ಸ್ನ್ಯಾಪ್ ಡೀಲ್‌ಗಳಲ್ಲಿಯೂ ಫಾಸ್ಟ್‌ಟ್ಯಾಗ್ ಖರೀದಿಸಬಹುದಾಗಿದೆ.

ಫಾಸ್ಟ್ಯಾಗ್ ಎಂದರೇನು?

ಫಾಸ್ಟ್ಯಾಗ್ ನ್ನು ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಅಭಿವೃದ್ಧಿ ಪಡಿಸಿದೆ. ಹೆದ್ದಾರಿಯಲ್ಲಿ ಪ್ರಯಾಣಿಸುವ ನಾಲ್ಕು ಚಕ್ರದ ವಾಹನಗಳ ಸವಾರರಿಗೆ ತೆರಿಗೆ ಕಟ್ಟಲು ಸುಲಭವಾಗುವ ಸಲುವಾಗಿ ಇದನ್ನು ಜಾರಿಗೆ ತರಲಾಗಿದೆ. ಇದು ರೇಡಿಯೋ-ಪ್ರಿಕ್ವೆನ್ಸಿ ಐಡೆಂಟಿಫಿಕೇಷನ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಸ್ವಯಂ ಚಾಲಿತವಾಗಿ ಟೋಲ್ ಅಥವಾ ಸುಂಕವನ್ನು ಪಾವತಿಸಿಕೊಳ್ಳುತ್ತದೆ. ಟೋಲ್ ಗೇಟ್ ಬಳಿ ಇರುವ ಕ್ಯಾಮೆರಾ ಈ ಫಾಸ್ಟ್ಯಾಗ್ ನ್ನು ಪತ್ತೆ ಮಾಡುವುದರ ಮೂಲಕ ಹಣವನ್ನು ಪಾವತಿಸಿಕೊಳ್ಳುತ್ತದೆ.

Published On: 14 February 2021, 03:50 PM English Summary: fastags to become mandatory from february 15th

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.