1. ಸುದ್ದಿಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ: ಸಿ.ಎಂ ಬೊಮ್ಮಾಯಿ

Hitesh
Hitesh
ಬಸವರಾಜ ಬೊಮ್ಮಾಯಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರ ಅಗತ್ಯ ಕ್ರಮ ವಹಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಚೆಗೆ ಸಿದ್ಧಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಹಾಗೂ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.

Heat wave ರಾಜ್ಯದಲ್ಲಿ ಶಾಖದ ಅಲೆ: ಹವಾಮಾನ ಇಲಾಖೆ ಮುನ್ಸೂಚನೆ

ಭಾರತದಲ್ಲಿ ನಿಂತ ನೀರಾಗಿದ್ದ ಅಭಿವೃದ್ಧಿ ಕೆಲಸಗಳಿಗೆ ಇಂದು ವೇಗ ನೀಡಲಾಗಿದೆ. ದೇಶದ ಪ್ರತಿ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಗುರಿ

ತಲುಪಿಸಲು ಜಲಜೀವನ ಮಿಷನ್ ಯೋಜನೆಯಡಿ ದೇಶದ 10 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿಸಲಾಗಿದೆ.

ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ತಲುಪಿಸಲಾಗಿದೆ. ಸರ್ವೋದಯದೊಂದಿಗೆ ನವೋದಯವನ್ನು ಸಾಧಿಸಿ,

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ.

Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್‌ ಉದ್ಯೋಗಿಗಳಿಗೆ ಕೆಲಸ ?

ಭಾರತ ಬದಲಾವಣೆಯ ಪರ್ವದಲ್ಲಿದೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿಕೆಯ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭಾರತ ಶೇ. 6.7 ರಷ್ಟು ಅಭಿವೃದ್ಧಿಯನ್ನು ಕಂಡಿದೆ.

ದೇಶದ ಜನಸಂಖ್ಯೆಯನ್ನು ಶಾಪವೆಂದು ಪರಿಗಣಿಸುವ ಕಾಲವೊಂದಿತ್ತು. ಆದರೆ, ಈಗ ಜನಸಂಖ್ಯೆಯ ಶೇ.46 ರಷ್ಟು ಯುವಜನರಿದ್ದು, ಪ್ರಧಾನಿ ಮೋದಿಯವರು ಈ ಯುವಶಕ್ತಿಯೇ ದೇಶದ ಶಕ್ತಿ ಎಂದರು.

ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದೇಶದ ಯುವಶಕ್ತಿ ಪ್ರಮುಖ ಪಾತ್ರವಹಿಸಲಿದೆ. ನಕಾರಾತ್ಮಕತೆಯಿಂದ ಸಕಾರಾತ್ಮಕತೆಯೆಡೆಗೆ,

ಸವಾಲುಗಳನ್ನು ಅವಕಾಶಗಳಾಗಿ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

ಹಕ್ಕಿಜ್ವರದ ಸಮಯದಲ್ಲೇ ಹೆಚ್ಚು ಕೋಳಿ ತಿಂತೀನಿ: ಜಾರ್ಖಂಡ್‌ ಆರೋಗ್ಯ ಸಚಿವ

money

ರೈತ ವಿದ್ಯಾನಿಧಿ

ರಾಜ್ಯದಲ್ಲಿ ಶಿಕ್ಷಣಕ್ಕೆ  ಒತ್ತು ನೀಡಲಾಗುತ್ತಿದೆ.  ವಿದೇಶಿ ಬಂಡವಾಳ, ಆವಿಷ್ಕಾರದಲ್ಲಿ ರಾಜ್ಯ ಮುಂದಿದೆ.

ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ , ಬಡತನನಿರ್ಮೂಲನೆಯಲ್ಲಿ ಅಲ್ಲಲ್ಲಿ ಅಸಮಾನತೆಯನ್ನು ಕಂಡುಬರುತ್ತಿದ್ದ ಕಾರಣ,

ಹಲವು ಜನಪರ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ.

ರೈತರ, ರೈತ ಕೂಲಿಕಾರ್ಮಿಕರ, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಪಿಯುಸಿ

ಮತ್ತು ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಸುಮಾರು 8 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

100 ಪಿಎಚ್‌ಸಿಗಳನ್ನು ಸಮುದಾಯ ಆರೋಗ್ಯಕೇಂದ್ರಗಳಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ಎಲ್ಲ ವರ್ಗದ ಜನರಿಗೆ ಸ್ವಾಭಿಮಾನದ ಬದುಕು

ರಾಜ್ಯದಾದ್ಯಂತ 438 ನಮ್ಮ  ಕ್ಲೀನಿಕ್, ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ, ಶ್ರವಣ ಸಾಧನಾ ವಿತರಣೆ, ಡಯಾಲಿಸಿಸ್ ಸೈಕಲ್ ಗಳ ಹೆಚ್ಚಳ,

ಕಿಮೋಥೆರಪಿ ಸೈಕಲ್ಗಳನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ 8000 ಶಾಲಾಕೊಠಡಿಗಳ ನಿರ್ಮಾಣ ದಾಖಲೆಯ ಕಾರ್ಯಕ್ರಮ.

ಈ ವರ್ಷದ ಆಯವ್ಯಯದ ಶೇ.12 ರಷ್ಟು ಪ್ರಮಾಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. 

ಮೀನುಗಾರರಿಗೆ ವಿಶೇಷ ಯೋಜನೆಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ

ಯೋಜನೆಗಳಿಂದ ಜನರನ್ನು ಆರ್ಥಿಕ ಸ್ವಾವಲಂಬನೆಯನ್ನು ನೀಡಿ ಸ್ವಾಭಿಮಾನ ಬದುಕು ನಡೆಸಲು ಸರ್ಕಾರ ಸಹಕರಿಸುತ್ತಿದೆ.

ಸರ್ಕಾರ ದುಡಿಯುವ ವರ್ಗಕ್ಕೆ ಬೆಂಬಲವನ್ನು ನೀಡುತ್ತಿದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲ ಬಂದಿದೆ.

ಅಭಿವೃದ್ಧಿ ಆಕಾಂಕ್ಷೆ ತಾಲ್ಲೂಕುಗಳನ್ನು  ಗುರುತಿಸಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ,  ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ತಳವರ್ಗದವರಿಗೆ ನೀಡದರೆ ಅವರೂ ಮುಖ್ಯವಾಹಿನಿಗೆ ಸೇರುತ್ತಾರೆ ಎಂದರು.

 ನವ ಕರ್ನಾಟದಿದ ನವ ಭಾರತ ನಿರ್ಮಾಣ ಮಾಡೋಣ ಎಂದರು.  ಜನಕಲ್ಯಾಣಕ್ಕೆ ಯಾವ ಸ್ಥಾನವೂ ಅಡ್ಡಿಬರುವುದಿಲ್ಲ.  

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.  

PM ಕಿಸಾನ್ ಸಮ್ಮಾನ್ ನಿಧಿ: ಆಧಾರ್‌ ತಿದ್ದುಪಡಿ ಹೇಗೆ, 13ನೇ ಕಂತು ಬಂದಿಲ್ಲವೇ ಅದಕ್ಕೂ ಇದೆ ಪರಿಹಾರ! 

Published On: 06 March 2023, 12:09 PM English Summary: Establishment of Environmental University in Uttara Kannada District: CM Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.