1. ಸುದ್ದಿಗಳು

ಐದು ರಾಜ್ಯಗಳ ಬುಡಕಟ್ಟು ಪ್ರದೇಶಗಳಲ್ಲಿ ಸಾರವರ್ಧಿತ ಅಕ್ಕಿ ಐಇಸಿ ಅಭಿಯಾನ

Kalmesh T
Kalmesh T
Enriched rice IEC campaign in tribal areas of five states

ಸಾರವರ್ಧಿತ ಅಕ್ಕಿಯ ಪ್ರಯೋಜನದ ಬಗ್ಗೆ ಅದರಲ್ಲೂ ವಿಶೇಷವಾಗಿ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಜನಪ್ರಿಯಗೊಳಿಸಲು ಹಾಗೂ ಜಾಗೃತಿ ಮೂಡಿಸಲು, ಆಹಾರ ಮತ್ತು ನಾಗರಿಕ ಸರಬರಾಜು  ಇಲಾಖೆ (ಡಿ.ಎಫ್.ಪಿ.ಡಿ) ಮತ್ತು ಗುಜರಾತ್, ಮಹಾರಾಷ್ಟ್ರ, ಛತ್ತೀಸಗಡ, ಮಧ್ಯಪ್ರದೇಶ, ಜಾರ್ಖಂಡ್, ತೆಲಂಗಾಣ ರಾಜಸ್ಥಾನ, ಕೇರಳ ರಾಜ್ಯ ಸರ್ಕಾರಗಳು ತಲಸ್ಸೇಮಿಯಾ ಮತ್ತು ಸಿಕಲ್ ಸೆಲ್ ಅನಿಮಿಯಾ-ರಕ್ತಹೀನತೆಗೆ ತುತ್ತಾಗುವ ಜನಸಂಖ್ಯೆಯನ್ನು ಹೊಂದಿರುವ ಬುಡಕಟ್ಟು ಪ್ರದೇಶಗಳು ಮತ್ತು ಜಿಲ್ಲೆಗಳಲ್ಲಿ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಿವೆ.

ಇದನ್ನೂ ಓದಿರಿ: 7ನೇ ವೇತನ ಆಯೋಗ: 48 ಲಕ್ಷ ನೌಕರರಿಗೆ ದೀಪಾವಳಿ ನಿಮಿತ್ತ ಇಲ್ಲಿದೆ ಸಿಹಿಸುದ್ದಿ!

ಗುಜರಾತ್ ನಲ್ಲಿ, ರಾಜ್ಯ ಸರ್ಕಾರವು ಸೆಪ್ಟೆಂಬರ್ 9, 2022 ರಂದು ವಾಪಿಯ ಮೆರಿಲ್ ಅಕಾಡೆಮಿಯಲ್ಲಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಇದರ ನಂತರ, 13.09.2022 ರಂದು ನನುರ್ಬಾರ್ (ಮಹಾರಾಷ್ಟ್ರ), 14.09.2022 ರಂದು ನಾಸಿಕ್ (ಮಹಾರಾಷ್ಟ್ರ), 15.09.2022 ರಂದು ಕಂಕೇರ್ (ಛತ್ತೀಸ್ ಗಢ), 16.09.2022 ರಂದು ಜಮ್ಷೆಡ್ಪುರ (ಜಾರ್ಖಂಡ್),

20.09.2022ರಂದು ಭರ್ವಾನಿ (ಮಧ್ಯಪ್ರದೇಶ), 20.09.2022ರಂದು ಮಂಡ್ಲಾ (ಮಧ್ಯಪ್ರದೇಶ) ಮತ್ತು  24.09.2022 ರಂದು ಶಾಹದೋಲ್ (ಮಧ್ಯಪ್ರದೇಶ)ದಲ್ಲಿ ಡಿಎಫ್‌ಪಿಡಿ, ಅಭಿವೃದ್ಧಿ ಪಾಲುದಾರರು ಮತ್ತು ಎಫ್‌ಸಿಐ ಸಹಯೋಗದಲ್ಲಿ ರಾಜ್ಯ ಸರ್ಕಾರಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ದಂಡಾಧಿಕಾರಿಗಳು,

Recruitment: ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ, 42,000 ಸಂಬಳ!

ತಾಂತ್ರಿಕ ತಜ್ಞರು, ಸ್ಥಳೀಯ ತಜ್ಞರು, ವೈದ್ಯರು, ನಾಗರಿಕ ಶಸ್ತ್ರಚಿಕಿತ್ಸಕರು (ಸಿವಿಲ್ ಸರ್ಜನ್ಸ್), ಎನ್.ಜಿ.ಓ.ಗಳು, ನ್ಯಾಯಬೆಲೆ ಅಂಗಡಿ ನಡೆಸುವವರು, ಸರಪಂಚರು, ಬುಡಕಟ್ಟು ಪ್ರದೇಶಗಳ ಮುಖಂಡರು, ನಾಗರಿಕ ಸರಬರಾಜು, ಆರೋಗ್ಯ, ಐಸಿಡಿಎಸ್ ಅಧಿಕಾರಿಗಳು, ಅಭಿವೃದ್ಧಿ ಪಾಲುದಾರರು ಮತ್ತು ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನರ ಕಳವಳಗಳನ್ನು ಪರಿಹರಿಸಿದ ತಜ್ಞರಲ್ಲಿ - ವಡೋದರದ ಎಂ.ಎಸ್. ವಿಶ್ವವಿದ್ಯಾಲಯದ ಡಾ. ಎಸ್. ನಾಯರ್, ಡಾ. ಎಚ್. ಗಾಂಧಿ, ನವದೆಹಲಿಯ ಏಮ್ಸ್ ನ ಡಾ. ಕೆ. ಯಾದವ್, ಡಾ. ಟಿ. ಆಚಾರಿ, ಎಂ.ಎ.ಎಂ.ಸಿ. ನವದೆಹಲಿಯ ಡಾ. ರಾಘವೇಂದ್ರ ಸಿಂಗ್, ಅಮರಾವತಿಯ ಪಿಡಿಎಂ ವೈದ್ಯಕೀಯ ಕಾಲೇಜಿನ ಡಾ. ಎನ್. ತಾಯಡೆ, ನಾಗಪುರದ ನೆಟ್ ಪ್ರೋ ಫ್ಯಾನ್ ನ ಡಾ. ಎನ್. ಭಾವಾ, ನಂದೂರ್ಬಾರ್,

ಡಾ. ಆರ್. ಮೈಂಡೇ, ರಾಯಪುರ ಏಮ್ಸ್ ನ ಡಾ. ಎಂ. ರೂಯ್ಕರ್, ಛತ್ತೀಸಗಢ ಆರೋಗ್ಯ ಇಲಾಖೆಯ ಡಾ. ಎಸ್. ಅಗರ್ವಾಲ್, ಛತ್ತೀಸಗಢದ ಸಿಕಲ್ ಸೆಲ್ ಸಂಸ್ಥೆಯ ಮಹಾ ನಿರ್ದೇಶಕ ಡಾ. ಯು. ಜೋಶಿ, ಕನ್ಕೇರ್ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಕಾಸ ಕೇಂದ್ರದ ವಿಜ್ಞಾನಿಗಳಾದ ಡಾ. ಬಿ. ಸಾಹು, ಡಾ. ಕೆ. ಸಿಂಗ್, ಡಾ. ಎಸ್.ಕೆ. ಮಕರಮ್, ರಾಂಚಿಯ ರಿಮ್ಸ್ ನ ಸಹಾಯಕ ಪ್ರಾಧ್ಯಾಪಕ ಡಾ. ಡಿ. ಕುಮಾರ್, ಭೋಪಾಲ್ ಏಮ್ಸ್ ನ ಡಾ. ಎ. ಚಟರ್ಜಿ ಮತ್ತು ಡಾ. ಡಿ. ಪಾಂಡೇ ಅವರಂತಹ ಪ್ರಮುಖರು ಸೇರಿದ್ದರು. ತಜ್ಞರು ಸಾರವರ್ಧಿತ ಆಹಾರಧಾನ್ಯಗಳು ಮತ್ತು ಕಂಪುರಕ್ತ ಕಣಗಳಿಂದ ಆಗುವ ತಲಸ್ಸೇಮಿಯಾ ಮತ್ತು ಸಿಕಲ್ ಸೆಲ್ ಅನಿಮಿಯಾ ಮೇಲೆ ಅವುಗಳ ಪರಿಣಾಮ ಕುರಿತು ಪ್ರಾತ್ಯಕ್ಷಿಕೆ ನೀಡಿದರು. 

Published On: 28 September 2022, 03:02 PM English Summary: Enriched rice IEC campaign in tribal areas of five states

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.