1. ಸುದ್ದಿಗಳು

ಶ್ರೇಷ್ಠ ವಿಜ್ಞಾನಿಗಳು ಮತ್ತು ಕೃಷಿಕರು ಕರ್ನಾಟಕದಲ್ಲಿ ಬಿ ಆರ್ ಲ್ 1 (BRL1) ಕ್ಷೇತ್ರ ಪ್ರಯೋಗಗಳಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಕರೆ ನೀಡಿದ್ದಾರೆ

KJ Staff
KJ Staff
Government to allow BRL1 field trials in Karnataka

ಬೆಂಗಳೂರು, ಅಕ್ಟೋಬರ್ 25, 2021: ಕರ್ನಾಟಕದ ಶ್ರೇಷ್ಠ ವಿಜ್ಞಾನಿಗಳು ಮತ್ತು ಕೃಷಿ ತಜ್ಞರು ಕರ್ನಾಟಕದಲ್ಲಿ ಬಿಟಿ(Bt) ಹತ್ತಿ ಮತ್ತು ಮೆಕ್ಕೆಜೋಳದ ಬಯೋಸೇಫ್ಟಿ ರೆಗ್ಯುಲೇಟರಿ ಲೆವೆಲ್ 1 (ಬಿಆರ್ ಲ್1(BRL1)) ಕ್ಷೇತ್ರ ಪ್ರಯೋಗಗಳಿಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ. ಭಾರತದಲ್ಲಿ ಬಿಟಿ(Bt) ಹತ್ತಿಯ ಯಶಸ್ಸಿನ ನಂತರ, 2002 ರಿಂದ ಯಾವುದೇ ಜೈವಿಕ ತಂತ್ರಜ್ಞಾನದ ಮೂಲಕ ವರ್ಧಿಸಲಾದ ಬೆಳೆ ಬಿಡುಗಡೆಯಾಗಿಲ್ಲ. ಬೆಳೆ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಕೀಟಗಳ ದಾಳಿಯನ್ನು ನಿಯಂತ್ರಿಸಲು ರೈತರು ಇಂತಹ ತಂತ್ರಜ್ಞಾನಗಳನ್ನು ಉಪಯೋಗಿಸಲು ಒತ್ತಾಯಿಸುತ್ತಿದ್ದರೂ, ಇದುವರೆಗೂ ಸರ್ಕಾರವು ಯಾವುದನ್ನೂ ಅನುಮೋದಿಸಿಲ್ಲ.

ಹೊಸದಾಗಿ ಅಭಿವೃದ್ಧಿ ಪಡಿಸಿದ ಜೈವಿಕ ಬೆಳೆಗಳ ಕಾರ್ಯಕ್ಷಮತೆಯ  ಮೌಲ್ಯಮಾಪನ ಮಾಡಲು ನಿಯಂತ್ರಿತ ಕ್ಷೇತ್ರ ಪ್ರಯೋಗಗಳು, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಈ ಪ್ರಯೋಗಗಳನ್ನು ಜೈವಿಕ ತಂತ್ರಜ್ಞಾನ ಇಲಾಖೆಯು ನಿಗದಿಪಡಿಸಿದ ಕಠಿಣ ಜೈವಿಕ ಸುರಕ್ಷತೆ ನಿಯಮಗಳಿಗೆ ಅನುಸಾರವಾಗಿ ನಡೆಸಲಾಗುತ್ತದೆ, ಈ ಪ್ರಕ್ರಿಯೆಯು ಮಾನವ ಬಳಿಕೆಗೆ ಔಷದವನು ಬಿಡುಗಡೆ ಮಾಡುವ ಮುನ್ನ ನಡೆಸುವ ನಿರ್ಣಾಯಕ ವೈಜ್ಞಾನಿಕ ಪ್ರಯೋಗಗಳನ್ನು ಹೋಲುತ್ತದೆ . ಯಾವ ರಾಜ್ಯಗಳಲ್ಲಿ ಇಂತಹ ಪ್ರಯೋಗಗಳನ್ನು ನಡೆಸಲು ಪ್ರಸ್ತಾಪಿಸಲಾಗಿದೆಯೋ ಆ ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು (ನಿ ಪ್ರ ಪ(NOC)) ಪಡೆಯುವ ಅನುಸರಣೆ ಇದೆ. ಇತ್ತೀಚೆಗೆ, ಒಂದು ಕಂಪನಿಯು ಬಿ ಆರ್ ಲ್ 1(BRL1) ಪ್ರಯೋಗಗಳನ್ನು ನಡೆಸಲು ನಿ ಪ್ರ ಪ(NOC) ಕೋರಿ ಕರ್ನಾಟಕದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯನ್ನು ಸಂಪರ್ಕಿಸಿತ್ತು. ಆ ಇಲಾಖೆಯು ಈ ಪ್ರಯೋಗಗಳನ್ನು ನಡೆಸುವ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಸಂಶೋಧನಾ ನಿರ್ದೇಶಕರ ಅಭಿಪ್ರಾಯವನ್ನು ಪಡೆಯಿತು. ಅದಲ್ಲದೇ ಈ ಕ್ಷೇತ್ರ ಪ್ರಯೋಗಗಳನ್ನು ನಡೆಸಲು ಸಾರ್ವಜನಿಕ ಅಭಿಪ್ರಾಯವನ್ನು (ಆಕ್ಷೇಪಣೆಗಳು/ ಅಭಿಪ್ರಾಯಗಳು) ಪಡೆಯಲು ಇಲಾಖೆಯು ಪತ್ರಿಕೆಯಲ್ಲಿ ಜಾಹೀರಾತನ್ನು ಪ್ರಕಟಿಸಿತು.

ಸಾರ್ವಜನಿಕರಿಗೆ   ಇಂತಹ ತಂತ್ರಜ್ಞಾನದ ಬಗ್ಗೆ ಉತ್ತಮ ತಿಳುವಳಿಕೆ ಇದ್ದರೆ ಮಾತ್ರ ಸಾರ್ವಜನಿಕ ಸಮಾಲೋಚನೆಯು ಸಂಶೋಧನೆಯ ಪ್ರಯೋಗದ ಬಗ್ಗೆ ಮಾನ್ಯ ಮತ್ತು ನಿಷ್ಪಕ್ಷವಾಗಿರುತ್ತದೆ. ಇಲ್ಲದಿದ್ದರೆ ಇದು ಸಾರ್ವಜನಿಕರ ಮೇಲೆ ಅನಗತ್ಯ ಹೊರೆ ಉಂಟುಮಾಡುತ್ತದೆ. ಸಂಶೋಧನಾ  ಹಂತದಲ್ಲಿ, ಸಂಭಾವನೀಯ  ಪ್ರಯೋಜನಗಳನ್ನು ಮೌಲ್ಯಮಾಪನ ಮಾಡಲು, ಅದರ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಸಂಶೋಧನಾ ಪ್ರಯೋಗಗಳನ್ನು ನಡೆಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಸೂಚಿಸಲು ವಿಷಯ ತಜ್ಞರಿಂದ ಸಮಾಲೋಚನೆ ಪಡೆಯಬೇಕು. ಭಾರತದಲ್ಲಿ, ಸಾಮಾನ್ಯವಾಗಿ, ಸುಧಾರಿತ ಬೆಳೆಗಳ ಪರಿಸರ ಬಿಡುಗಡೆಗಾಗಿ ಸಾರ್ವಜನಿಕ ಸಮಾಲೋಚನೆಯನ್ನು ಪಡೆಯಲಾಗುತ್ತದೆ ಆದರೆ ಇದಕ್ಕೆ ಸಂಭಂದಿತ ಸಂಶೋಧನಾ ಪ್ರಯೋಗಗಳಿಗೆ ಅಲ್ಲ. ಪ್ರಸ್ತುತ ವ್ಯವಸ್ಥೆಯ ಪ್ರಕಾರ ನಿ ಪ್ರ ಪ(NOC) ಯನ್ನು ಜಿಇಎಸಿ(GEAC) (ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ) ಅನುಮೋದನೆಗೆ ಮುಂಚಿತವಾಗಿ ಪಡೆಯಬೇಕು. ಜಿಇಎಸಿ(GEAC) ಮುಂಗಡ ಅನುಮೋದನೆಯ ಅನುಪಸ್ಥಿತಿಯಲ್ಲಿ ರಾಜ್ಯಗಳು ಅನುಮೋದನೆಗಾಗಿ ತಜ್ಞರ ಸಲಹೆಯನ್ನು ಪರಿಗಣಿಸಬೇಕು. ಪರಿಸರ ಬಿಡುಗಡೆಯ ಮೊದಲು ಸಾರ್ವಜನಿಕ ಸಮಾಲೋಚನೆ ಪಡೆಯಬೇಕು, ಸಾರ್ವಜನಿಕರು ಹೊಂದಿರುವ ಕಾಳಜಿಯನ್ನು ಕ್ರೋಡೀಕರಿಸಿ ಅದನ್ನು ಅಭಿವರ್ಧಕರು ಮತ್ತು ತಜ್ಞರು ಸ್ಪಷ್ಟಪಡಿಸಬೇಕು. ವಾಸ್ತವವಾಗಿ ರಾಜ್ಯಗಳಿಂದ ನಿ ಪ್ರ ಪ(NOC) ಕಾನೂನಿನಲ್ಲಿ ಅಗತ್ಯವಿಲ್ಲ. ಇತೀಚಿನ ಹವಾಮಾನ ಬದಲಾವಣೆಯ ಬವಣೆಯನ್ನು ಗಮನಿಸಿದರೆ ಭಾರತೀಯ ಕೃಷಿಯಲ್ಲಿ ಪ್ರಗತಿಯನ್ನು ತರುವಲ್ಲಿ ಹೊಸ ತಂತ್ರಜ್ಞಾನಗಳನ್ನು ಮೌಲ್ಯಮಾಪನ ಮಾಡಲು ಉತ್ತಮ ವೈಜ್ಞಾನಿಕ ಆಧಾರವನ್ನು ಹೊಂದಿರುವುದು ಪ್ರಮುಖ ಮೊದಲ ಹೆಜ್ಜೆಯಾಗಿದೆ.

ಡಾ.ಬಿ.ವಿ.ಪಾಟೀಲ, ಮಾಜಿ ಉಪ ಕುಲಪತಿಗಳು ಮತ್ತು ಹಿರಿಯ ಕೀಟಶಾಸ್ತ್ರಜ್ಞ, ಕೃಷಿ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ - “ರೈತ ಸಮುದಾಯದಿಂದ  ನವೀನ ವಿಧಾನಗಳು / ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಬೆಳೆಯುತ್ತಿರುವ ಜನಸಂಖ್ಯೆಗೆ ಪೋಷಿಸುವ  ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಕೃಷಿಯನ್ನು ಸುಸ್ಥಿರಗೊಳಿಸುತ್ತದೆ ಮತ್ತು ರೈತರಿಗೆ ಲಾಭದಾಯಕವಾಗಿಸುತ್ತದೆ, ಹಾಗೆಯೆ ರೈತರ ಆದಾಯ ದ್ವಿಗುಣಗೊಳಿಸುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಯನ್ನು ಪೂರೈಸುತ್ತದೆ. ಇಂತಹ  ಒಂದು ನವೀನ ವಿಧಾನವೆಂದರೆ ಯಶಸ್ವಿ ಮತ್ತು ಸಾಬೀತಾಗಿರುವ ಜಿ ಎಂ(GM) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು. ನಮ್ಮ ರೈತರು ಈಗಾಗಲೇ ಬಿಟಿ(Bt) ಜೀನ್‌ನ ಅಗಾಧವಾದ ಪ್ರಯೋಜನವನ್ನು ಕಂಡಿದ್ದಾರೆ, ಇದನ್ನು ಹತ್ತಿ ಗಿಡಕ್ಕೆ ಸಂಯೋಜಿಸಿದಾಗ, ವಿಶೇಷವಾಗಿ ಹೆಲಿಕೋವರ್ಪಾ ಬೋಲ್‌ವರ್ಮ್ (ಕಾಯಿ ಕೊರಕ ಹುಳಗಳು) ಅನ್ನು ಸಂಪೂರ್ಣವಾಗಿ ನಿರ್ವಹಿಸಿ ಹತ್ತಿ ಬೆಳೆಯಿಂದ ಹೆಚ್ಚಿನ ಲಾಭವನ್ನು ಪಡೆಯಲು ಸಹಾಯ ಮಾಡಿತು. ನಾವು ಬಯಸಿದ ಗುರಿ/ಉದ್ದೇಶವನ್ನು ಸಾಧಿಸುವವರೆಗೆ ಹೊಸ ಆಲೋಚನೆಗಳು ಹಾಗು ಸಂಶೋಧನೆಗಳನ್ನು  ಮುಂದುವರಿಸುವುದೇ  ನಮ್ಮ  ದೇಯವಾಗಿರಬೇಕು. ಹತ್ತಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳು ಬೆಳೆಗಳ ಉತ್ಪಾದನೆಯ ಮೇಲೆ ಕೀಟಗಳ ಹಾನಿ ವಿಪರೀತ  ಪರಿಣಾಮಬೀರುತ್ತದೆ. ಸಮಗ್ರ ಕೀಟ ನಿರ್ವಹಣೆ ಕ್ಷೇತ್ರದಲ್ಲಿ ಒಬ್ಬ ವಿಜ್ಞಾನಿಯಾಗಿ, ಕೀಟಶಾಸ್ತ್ರಜ್ಞರಾಗಿ ಕೆಲಸ ಮಾಡಿದ ನನಗೆ ಈ ಬೆಳೆಗಳಲ್ಲಿ ಜಿ ಎಂ(GM) ತಂತ್ರಜ್ಞಾನವನ್ನು ಸಮಗ್ರ ಕೀಟ ನಿರ್ವಹಣೆಯಲ್ಲಿ  ಒಂದಾಗಿ ಸಂಯೋಜಿಸಲು ನಾನು ಶಿಫಾರಸು ಮಾಡುತ್ತೇನೆ. ಈ ದಿಕ್ಕಿನಲ್ಲಿ ಇದಕ್ಕೆ ಸಂಭಂದಿತ ಸಂಶೋಧನಾ ಪ್ರಯೋಗಗಳನ್ನು ವಿಜ್ಞಾನಿಗಳ  ಮೂಲಕ ನಡೆಸಲು ಮೊದಲ ಆದ್ಯತೆಯ ಮೇಲೆ ಅನುಮತಿ ನೀಡಬೇಕು ಮತ್ತು ತಂತ್ರಜ್ಞಾನದ  ಅರ್ಹತೆ ಮತ್ತು ನ್ಯೂನತೆಗಳನ್ನು ಪರಿಗಣಿಸಿ, ನಂತರ ನಮ್ಮ ರೈತ ಸಮುದಾಯದಿಂದ ಅಳವಡಿಸಿಕೊಳ್ಳುವುದನ್ನು ನಿಯಂತ್ರಿಸಬಹುದು.”

ಡಾ.ಕೆ.ಕೆ.ನಾರಾಯಣ್, ಸಂಸ್ಥಾಪಕ ನಿರ್ದೇಶಕರು , ಸ್ಥಾಯಿಕ  ಸೀಡ್ಸ್ ಪ್ರೈವೇಟ್ ಲಿಮಿಟೆಡ್, ನಿರ್ದೇಶಕರು  ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಗ್ರಿಜಿನೊಮ್  ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ನಿರ್ದೇಶಕರು, ಫೌಂಡೇಶನ್ ಫಾರ್ ಅಡ್ವಾನ್ಸಡ್ ಟ್ರೇನಿಂಗ ಇನ್ ಪ್ಲಾಂಟ್ ಬ್ರೀಡಿಂಗ್ (ಎಟಿಪಿಬಿಆರ್ (ATPBR)) - " ಹತ್ತಿ ಮತ್ತು ಮೆಕ್ಕೆಜೋಳ ರಾಜ್ಯ ಮತ್ತು ದೇಶದ ಪ್ರಮುಖ ಬೆಳೆಗಳು. ಅವುಗಳು ಹಲವಾರು ಕೀಟಗಳಿಂದ ಪೀಡಿಸಲ್ಪಟ್ಟಿವೆ, ಅವುಗಳಲ್ಲಿ ಪ್ರಮುಖವಾದವು ಹತ್ತಿ ಕಾಯಿ ಕೊರಕ ಹುಳುಗಳು ಮತ್ತು ಇತ್ತೀಚಿನ ದಿನಗಳಲ್ಲಿ, ಮೆಕ್ಕೆಜೋಳದಲ್ಲಿ ಸೈನಿಕ ಹುಳ. ಈ ಬೆಳೆಗಳಲ್ಲಿ ಅಭಿವೃದ್ಧಿಪಡಿಸಿದ ಬಿಟಿ(Bt) ತಂತ್ರಜ್ಞಾನವು ಈ ಕೀಟಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ. ಇದಲ್ಲದೆ, ಯಾವುದೇ ಬೆಳೆಯಲ್ಲಿ ಕಳೆ ನಿರ್ವಹಣೆ ಅನಿವಾರ್ಯವಾದ ಬೇಸಾಯ ಪಧತ್ತಿ ಆಗಿರುತ್ತದೆ, ಆದರೆ ಇದಕ್ಕೆ ಹೆಚ್ಚು ಕೃಷಿ ಕಾರ್ಮಿಕರು ಹಾಗು ಹೆಚ್ಚು ಖರ್ಚಿನ ಅನಿವಾರ್ಯತೆ ಇರುತ್ತದೆ. ಕೃಷಿ ವಲಯದಲ್ಲಿ ಹೆಚ್ಚುತ್ತಿರುವ ಕಾರ್ಮಿಕರ ಕೊರತೆ, ವಿಶೇಷವಾಗಿ ಕೃಷಿ ಚಟುವಟಿಕೆಗಳು ಚುರುಕಾಗಿರುವಾಗ ಹೆಚ್ಚಾಗಿದೆ. ಈ  ಕೊರತೆಯಿಂದ ಪಾರಾಗಲು  ಕಳೆನಾಶಕ ಸಹಿಷ್ಣುತೆ ತಂತ್ರಜ್ಞಾನವು ಈ ಬೆಳೆಗಳಿಗೆ ಅಳವಡಿಸಿದರೆ ರೈತರಿಗೆ ವರದಾನವಾಗುವುದಲ್ಲದೆ, ಮಣ್ಣಿನ ಸವೆತವನ್ನು ತಡೆಯಲು ತುಂಬಾ ಸಹಾಯ ಮಾಡುತ್ತದೆ. ಇಂತಹ ತಂತ್ರಜ್ಞಾನಗಳು ಪ್ರಪಂಚದಾದ್ಯಂತ ಈಗಾಗಲೇ ವ್ಯಾಪಕ ಬಳಕೆಯಲ್ಲಿವೆ. ನಮ್ಮದೇ ದೇಶದಲ್ಲಿ, ಕೀಟ-ರಕ್ಷಿತ ಹತ್ತಿಯಲ್ಲಿ ಬಿಟಿ(Bt) ಜೀನ್ ಅನ್ನು ಸೇರಿಸಲಾಗಿದ್ದು, ಒಟ್ಟು ಹತ್ತಿ ವಿಸ್ತೀರ್ಣದ 95% ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಈಗ ಕ್ಷೇತ್ರ ಪ್ರಯೋಗಗಳಿಗೆ ಅನುಮತಿ ಕೋರಿರುವ ತಂತ್ರಜ್ಞಾನವು ಹಲವಾರು  ಸುರಕ್ಷತಾ ಪರೀಕ್ಷೆ ಸೇರಿದಂತೆ ಹಲವು ವರ್ಷಗಳ ಅಭಿವೃದ್ಧಿಯ ಮೂಲಕ ಸಾಗಿವೆ. ಒಬ್ಬ ಅರ್ಹ ಸಸ್ಯ ತಳಿಗಾರನಾಗಿ, ಈ ತಂತ್ರಜ್ಞಾನಗಳು ವೈಜ್ಞಾನಿಕ ದತ್ತಾಂಶವನ್ನು ಆಧರಿಸಿ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ನಾನು ಧೃಡೀಕರಿಸಬಹುದು. ಹಾಗಾಗಿ ಈ ಹತ್ತಿ ಮತ್ತು ಮೆಕ್ಕೆಜೋಳ ಉತ್ಪನ್ನಗಳಿಗೆ ಕ್ಷೇತ್ರ ಪ್ರಯೋಗಗಳನ್ನು ನಡೆಸಲು ಅನುಮೋದನೆ ನೀಡಬೇಕು ಎಂದು ನಾನು ಬಲವಾಗಿ ಶಿಫಾರಸು ಮಾಡುತ್ತೇನೆ ಇದರಿಂದ ಈ ದೇಶದ ಮತ್ತು ನಮ್ಮ ರಾಜ್ಯದ ರೈತರು ತಮ್ಮ ಉತ್ಪಾದಕತೆ ಮತ್ತು ಕೃಷಿ ಆದಾಯವನ್ನು ಸುಧಾರಿಸುವಲ್ಲಿ ಆಧುನಿಕ ವಿಜ್ಞಾನದ ಲಾಭವನ್ನು ಪಡೆಯಬಹುದು.”

ಡಾ ಎಸ್ ಪಾಟೀಲ್, ಮಾಜಿ ನಿರ್ದೇಶಕರು ಐಎಆರ್ ಐ (IARI) ಮತ್ತು ಮಾಜಿ ಉಪ ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ - "ಬಿಟಿ(Bt) ಹತ್ತಿಯು ಕೀಟನಾಶಕಗಳ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ, ಇಲ್ಲದಿದ್ದರೆ ಹತ್ತಿಯನ್ನು ಕೀಟನಾಶಕಗಳನ್ನು ಪ್ರೀತಿಸುವ ಬೆಳೆ ಎಂದು ಕರೆಯಲಾಗುತಿತ್ತು. ಬಿಟಿ (Bt) ಹತ್ತಿ ಎಣ್ಣೆಯಿಂದ ಗಾಸಿಪೋಲ್ ಅನ್ನು ತೆಗೆದ ನಂತರ ದಿನ ನಿತ್ಯ  ಸೇವಿಸಲಾಗುತ್ತದೆ ಮತ್ತು  ಹತ್ತಿ ಎಣ್ಣೆಯ ಸೇವನೆಯಿಂದ ಯಾವುದೇ ಹಾನಿಯ ಬಗ್ಗೆ ಪುರಾವೆ ಇಲ್ಲ . ಪ್ರಪಂಚದಾದ್ಯಂತ ಯಶಸ್ವಿಯಾಗಿ ಬೆಳೆದ 11 ವಿಭಿನ್ನ ಜಿ ಎಂ(GM) ಬೆಳೆಗಳಿವೆ. ಯುಎಸ್ಎ(USA) ನಲ್ಲಿ ಮೆಕ್ಕೆಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆಯುವ ಪ್ರದೇಶದ 90% ಜಿ ಎಂ(GM) ಆವೃತ್ತಿಗಳಿಂದ ಆವರಿಸಲ್ಪಟ್ಟಿದೆ. ಈ ಹಿಂದೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ದೆಹಲಿ ವಿಶ್ವವಿದ್ಯಾಲಯ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಮ್ಮ ವಿಜ್ಞಾನಿಗಳು ಹೆಚ್ಚಿನ ದಕ್ಷತೆಯ ಜಿ ಎಂ(GM) ಬೆಳೆಗಳನ್ನು ಅಭಿವೃದ್ಧಿಪಡಿಸಿದ್ದರು, ಆದರೆ, ಎಲ್ಲಾ ಅವೈಜ್ಞಾನಿಕ ಕಾರಣಗಳಿಂದ ಯಾವ ಉತ್ಪನ್ನವು ರೈತರ ಕೈಯಿಗೆ ಸೇರಲಿಲ್ಲ. ಇದು ಭಾರತವು ವೈಜ್ಞಾನಿಕವಾಗಿ ಯೋಚಿಸಬೇಕಾದ ಸಮಯ. ವೈಜ್ಞಾನಿಕ ಪ್ರಯತ್ನಕ್ಕೆ ಸಾರ್ವಜನಿಕ ಅಭಿಪ್ರಾಯವು ಯಾವುದೇ ಅರ್ಥವನ್ನು ಹೊಂದಿಲ್ಲ, ಏಕೆಂದರೆ ಅಂತಹ ಅಭಿಪ್ರಾಯಗಳು ವೈಜ್ಞಾನಿಕ ಪ್ರಯೋಗದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ ವೈಜ್ಞಾನಿಕ ತಜ್ಞರಿಂದ ಇರಬೇಕು.. ದುರದೃಷ್ಟವಶಾತ್, ಭಾರತದಲ್ಲಿ ಇಂದು ಅವೈಜ್ಞಾನಿಕ ಮಾರ್ಗಗಳು ಸಾಮಾನ್ಯವಾಗಿದೆ ಎಂದು ತೋರುತ್ತದೆ. ಹತ್ತಿ ಉತ್ಪಾದನೆಯ ದತ್ತಾಂಶವು, ಬಿಟಿ(Bt) ಹತ್ತಿಯಿಂದಾಗಿ 140 ಲಕ್ಷ ಬೇಲ್‌ ಹತ್ತಿ ಉತ್ಪಾದನೆಯು 400 ಲಕ್ಷ ಬೇಲ್‌ಗಳಿಗೆ ತಲುಪಿರುವುದು ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸುತ್ತದೆ. ಭಾರತವು ಹತ್ತಿ ಉತ್ಪಾದನೆಯ ಬಗ್ಗೆ ಹೆಮ್ಮೆಪಡುತ್ತದೆ, ಮತ್ತು ಇದು ಕೇವಲ ಜಿ ಎಂ(GM) ಹತ್ತಿಯಿಂದ ಮಾತ್ರ ಸಾಧ್ಯವಾಯಿತು. ಇಲ್ಲದಿದ್ದರೆ, ಹತ್ತಿ ಬೆಳೆಯ ಪ್ರದೇಶದ ಹೆಚ್ಚಳದೊಂದಿಗೆ ಅಥವಾ ಸ್ವಲ್ಪಮಟ್ಟಿನ ಉತ್ಪಾದಕತೆಯ ಹೆಚ್ಚಳದೊಂದಿಗೆ ನಾವು ಸುಮಾರು 150-200 ಲಕ್ಷ ಬೇಲ್‌ಗಳಲ್ಲಿರುತ್ತಿದ್ದೆವು. ಸರ್ಕಾರವು ಎಲ್ಲಾ ನೀತಿ ನಿರೂಪಕರು, ತಂತ್ರಜ್ಞಾನ ಅಭಿವೃದ್ಧಿಗಾರರು ಮತ್ತು ಕೃಷಿ ಸಮುದಾಯದೊಂದಿಗೆ ವೈಜ್ಞಾನಿಕ ಸಂವಾದಗಳನ್ನು ವರ್ತಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ನಾನು ಭಾವಿಸುತ್ತೇನೆ. ವಿಜ್ನ್ಯಾನಕ್ಕೆ ಸಂಭಂದಪಟ್ಟ ನಿರ್ಧಾರಗಳನ್ನು ಸಾರ್ವಜನಿಕ ಸಮಾಲೋಚನೆಯ ಮೂಲಕ ನಿರ್ಧರಿಸುವದಾದರೆ ಇದು ದೇಶವನ್ನು ಹಲವು ವರ್ಷಗಳ ಹಿಂದಕ್ಕೆ ತಳ್ಳಬಹುದು.”

ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಕ್ಷೇತ್ರ ಪ್ರಯೋಗಗಳನ್ನು ನಡೆಸಲು ಸಮಯ ಮತ್ತು ಹೂಡಿಕೆಯ ಪ್ರಮಾಣವನ್ನು ಪರಿಗಣಿಸಿ ವಿಜ್ಞಾನ-ಆಧಾರಿತ ತಟಸ್ಥ ವಿಧಾನದ ಅಗತ್ಯವಿದೆ. ಕೃಷಿ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕವಾಗಿ ಆಗುತ್ತಿರುವ ವೈಜ್ಞಾನಿಕ ಪ್ರಗತಿಯ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಸರ್ಕಾರ ಮತ್ತು ನೀತಿ ನಿರೂಪಕರಿಗೆ ಅನಿವಾರ್ಯವಾಗಿದೆ. ನಿಯಂತ್ರಕರು ಹೊಸ ಜೈವಿಕ ತಂತ್ರಜ್ಞಾನದ ಬೆಳೆಗಳನ್ನು ಮೌಲ್ಯಮಾಪನ ಮಾಡಲು ಜಾಗತಿಕ ಮಾನದಂಡಗಳ ಆಧಾರದ ಮೇಲೆ ಚೌಕಟ್ಟನ್ನು ಅಭಿವೃದ್ಧಿಪಡಿಸಿದ್ದಾರೆ ಹಾಗು ನೀತಿ ನಿರೂಪಕರು ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಮೌಲ್ಯಮಾಪನವನ್ನು ವಿಶ್ವಾಸಾರ್ಹ ಮತ್ತು ಸಮಯಕ್ಕೆ ಅನುಗುಣವಾಗಿ ಸಕ್ರಿಯಗೊಳಿಸಬೇಕಾಗುತ್ತದೆ. ಅಂತಹ ತೊಡಗುವಿಕೆ ಕಂಡುಬಂದಲ್ಲಿ ತಂತ್ರಜ್ಞಾನ ಅಭಿವೃದ್ಧಿಗಾರರನ್ನು ಸಂಶೋಧನೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಬಹುದು.. ಪ್ರತಿ ಹಂತದಲ್ಲೂ, ಅಭಿವೃದಿಗಾರರು ಅನಗತ್ಯ ಅಡೆತಡೆಗಳನ್ನು ಎದುರಿಸಿದರೆ, ಕೃಷಿಗೆ ನಿರಂತರವಾಗಿ ಉದ್ಭವಿಸುವ ಸವಾಲುಗಳನ್ನು ಪರಿಹರಿಸಲು ಮತ್ತು ಸಂಬಂಧಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಬಂಡವಾಳ ಹೂಡಿಕೆ ಕಷ್ಟಕರವಾಗಿರುತ್ತದೆ. ಹೊಸ ಬಯೋಟೆಕ್ ಪರಿಹಾರಗಳನ್ನು ಮೌಲ್ಯಮಾಪನ ಮಾಡಲು ಸರ್ಕಾರವು ಒಂದು ಸಮಗ್ರ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಲವಾರು ವರ್ಷಗಳಿಂದ   ಮಾತುಕತೆಗಳು ನಡೆಯುತ್ತಿದ್ದರೂ, ಈಗಿನವರೆಗೆ ಯಾವುದನ್ನೂ ಜಾರಿಗೆ ತರಲಾಗಿಲ್ಲ ಅದರ ಅನುಪಸ್ಥಿತಿಯಲ್ಲಿ, ನಿಯಂತ್ರಕ ಪ್ರಕ್ರಿಯೆಯ ತಾತ್ಕಾಲಿಕ ವಿಧಾನಗಳು ಕೇವಲ ರಾಷ್ಟ್ರವನ್ನು  ಹಾನಿಗೊಳಿಸುತ್ತವೆ.

ಭಾರತವು ಈವರೆಗೂ  ಪರಿಶ್ರಮಶೀಲತೆ  ಹಾದಿಯಿಂದ  ಅಭಿರುದ್ದಿ  ಹೊಂದಿಕೊಂಡು  ಬಂದಿದೆ . ಈಗ ಒಂದು ವಿಶ್ವಾಸಾರ್ಹ ಮತ್ತು ಪೂರ್ವಭಾವಿ ನಿಯಂತ್ರಕ ಚೌಕಟ್ಟು ಅಗತ್ಯವಾಗಿದೆ, ಇದರ ಅನುಪಸ್ಥಿತಿಯಲ್ಲಿ, ರೈತರು ತಮ್ಮ ವೃತ್ತಿಯನ್ನು ತೊರೆದು ಕೃಷಿಯೇತರ ವೃತಿಗಳನ್ನು  ಅಳವಡಿಸಿಕೊಂಡರೆ  ದೇಶದ  ಸ್ವಯಂ  ಪೂರ್ಣತೆ   ಸಾದಿಸಿವುದಕೆ  ಸಂಕಟ  ತರುತ್ತದೆ.

Published On: 29 October 2021, 10:29 AM English Summary: Eminent scientists and agriculturists calls on Government to allow BRL1 field trials in Karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.