1. ಸುದ್ದಿಗಳು

ಕೇರಳ, ತಮಿಳುನಾಡು, ಪಶ್ಚಿಮಬಂಗಾಳ, ಅಸ್ಸಾಂ, ಪಾಂಡಿಚೇರಿ ಚುನಾವಣೆ ದಿನಾಂಕ ಪ್ರಕಟ

ಬಹುನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ (ಪಾಂಡಿಚೇರಿ) ವಿಧಾನಸಭೆಗಳ ಚುನಾವಣೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ  ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚುನಾವಣಾ  ವೇಳಾಪಟ್ಟಿ ಪ್ರಕಟಿಸಿದರು.

ಅಸ್ಸಾಂನಲ್ಲಿ  ಮೇ 31ಕ್ಕೆ ಇರಲಿದ್ದು 126 ಸೀಟುಗಳಿಗೆ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಮೇ 24ಕ್ಕೆ ಇರಲಿದ್ದು ಒಟ್ಟು 234 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮೇ 30ಕ್ಕೆ , ಒಟ್ಟು 294 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೇರಳದಲ್ಲಿ ಜೂನ್ 1ಕ್ಕೆ ಒಟ್ಟು 140 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪುದಚೇರಿಯಲ್ಲಿ : 30 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. (3 ಸ್ಥಾನಗಳನ್ನು ಕೇಂದ್ರದಿಂದ ನಾಮನಿರ್ದೇಶನ ಮಾಡಲಾಗುತ್ತದೆ).

ಪಶ್ಚಿಮಬಂಗಾಳದಲ್ಲಿ ಒಟ್ಟು ಎಂಟು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಮಾರ್ಚ್ 30 ಕ್ಷೇತ್ರಗಳಲ್ಲಿ ಮಾರ್ಚ್ 27ರಂದು ನಡೆಯಲಿದೆ. ಪಾಂಡಿಚೆರಿಯಲ್ಲಿ ಏಪ್ರೀಲ್ 6 ರಂದು ಮತದಾನ ನಡೆಯಲಿದೆ.

ಕೇರಳದಲ್ಲಿ ಒಂದೇ ಹಂತದಲ್ಲಿ ಏಪ್ರೀಲ್ 6 ರಂದು ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ಮಾರ್ಚ್ 27, 2ನೇ ಹಂತ ಏಪ್ರೀಲ್ 1 ಹಾಗೂ ಮೂರನೇ ಹಂತದಲ್ಲಿ ಏಪ್ರೀಲ್ 6 ರಂದು ನಡೆಯಲಿದೆ.

Published On: 26 February 2021, 05:47 PM English Summary: Election commission announces Five state Election dates

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.