ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಹತೋಟಿಗೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಡಿಕೆಗೆ ಎಲೆಚುಕ್ಕಿ ರೋಗ: ಕೇಂದ್ರದಿಂದ ತಜ್ಞರ ಸಮಿತಿ ರಚನೆ, ಮುಂದೇನು?
ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಹತೋಟಿಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ವಹಿಸುತ್ತಿದೆ.
ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಹತೋಟಿ ನಿಟ್ಟಿನಲ್ಲಿ ಸಿಂಪಡಿಸಲು ಔಷಧ ವಿತರಿಸಲಾಗುತ್ತಿದೆ.
ಎಲೆಚುಕ್ಕಿ ರೋಗದ ಮೂಲವನ್ನು ಪತ್ತೆ ಮಾಡಿ, ನಿವಾರಣೆಗೆ ಔಷಧಿಯನ್ನು ಸಂಶೋಧನೆ ಮಾಡವಂತೆ ವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಚುಕ್ಕಿ ರೋಗವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.
ಪರಿಹಾರಕ್ಕೆ ಕ್ರಮ ವಹಿಸುತ್ತೇವೆ ಎಂದು ಉತ್ತರಿಸಿದರು.
ಅಡಿಕೆ ಚುಕ್ಕೆರೋಗ ತಡೆಗೆ 10 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಅಡಿಕೆ ಮರಗಳಿಗೆ ಚುಕ್ಕೆ ರೋಗ ಬಂದಿದ್ದು,ಅದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ವಹಿಸಿವೆ.
ಕೇಂದ್ರ ಸರ್ಕಾರವು ಅಡಿಕೆಯಲ್ಲಿ ಕಂಡು ಬಂದಿರುವ ರೋಗದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ತಜ್ಞರ ಸಮಿತಿಯನ್ನು ರಚನೆ ಮಾಡಿದೆ.
ಈಗಾಗಲೇ ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ.
Viral Video: ಬ್ರಿಡ್ಜ್ ಕೆಳಗೆ ಸಿಲುಕಿಕೊಂಡ ವಿಮಾನ..!ಅಷ್ಟಕ್ಕೂ ಆಗಿದ್ದೇನು..?
ರೈತರಿಗೆ ಮಾಹಿತಿ ನೀಡುವ ಕೆಲಸವೂ ಆಗುತ್ತಿದೆ. ಅಡಿಕೆ ಮರದಲ್ಲಿ ಕಾಣಿಸಿಕೊಂಡಿರುವ ರೋಗವನ್ನು ತಡೆಯುವ ನಿಟ್ಟಿನಲ್ಲಿ ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅವರು ಎಲೆಚುಕ್ಕಿ ರೋಗ ತಡೆಗೆ ಸಂಬಂಧಿಸಿದಂತೆ ಅವಶ್ಯವಿರುವ ಔಷಧಿಗೆ 10 ಕೋಟಿ ರೂಪಾಯಿ ಮೊತ್ತದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.
ಜಗತ್ತಿನ ಜನಸಂಖ್ಯೆ 800 ಕೋಟಿ; ಮುಂದಿನ ವರ್ಷ ಜನಸಂಖ್ಯೆಯಲ್ಲಿ ನಾವೇ ಫಸ್ಟ್!
ರಾಜ್ಯದಲ್ಲಿ ಅಡಿಕೆ ಮರದಲ್ಲಿ ಕಂಡು ಬಂದಿರುವ ಚುಕ್ಕಿರೋಗ ತಡೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.
ಅಗತ್ಯ ಔಷಧಿಯನ್ನು ಖರೀದಿಸಲು ತುರ್ತಾಗಿ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದರು.