1. ಸುದ್ದಿಗಳು

Drought ರಾಜ್ಯದಲ್ಲಿ ಬರಗಾಲ: ಆಹಾರ- ಧಾನ್ಯಗಳ ಬೆಲೆ ಗಗನಮುಖಿ!

Hitesh
Hitesh
Drought in the Karnataka : the price of food grains skyrocketed!

ರಾಜ್ಯದ 195ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಕಾಣಿಸಿಕೊಂಡಿದ್ದು, ಕರ್ನಾಟಕವನ್ನು ಸಂಕಷ್ಟಕ್ಕೆ ದೂಡಿದೆ.

ರಾಜ್ಯದಲ್ಲಿ ಈ ವರ್ಷ ಆವರಿಸಿರುವ ಬರದಿಂದಾಗಿ ಭಾರೀ ನಷ್ಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದವಸ- ಧಾನ್ಯಗಳ ಬೆಲೆಯೂ ಹೆಚ್ಚಳವಾಗಲಿದೆ!

ಈ ಬಾರಿ ಮುಂಗಾರು ರೈತರ ಕೈಹಿಡಿದಿಲ್ಲ. ಹೀಗಾಗಿ, ಬೆಳೆ ನಷ್ಟವಾಗಿದ್ದು, ಇದು ಪರೋಕ್ಷವಾಗಿ ದವಸ- ಧಾನ್ಯಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.    

ಬರದಿಂದಾಗಿ ಕರ್ನಾಟಕದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ

ಬರೋಬ್ಬರಿ 58 ಲಕ್ಷ ಟನ್‌ನಷ್ಟು ಕುಸಿತವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. 

ಆಹಾರ ಧಾನ್ಯದ ಉತ್ಪಾದನೆ ನಿರೀಕ್ಷಿಸಲಾಗಿತ್ತು.  ಬರದಿಂದ ಆಹಾರ ಧಾನ್ಯಗಳ ಬೆಳೆಗಳಿಗೆ ಸಾಕಷ್ಟು  ಹಾನಿಯಾಗಿದೆ.

ಉತ್ಪಾದನೆ ಪ್ರಮಾಣದಲ್ಲಿಯೂ ಶೇ. 52ರಷ್ಟು ಕುಸಿತವಾಗಲಿದೆ ಎಂದಿದ್ದಾರೆ. 

ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ

ಕರ್ನಾಟಕದಲ್ಲಿ ಮುಂಗಾರು ಅವಧಿಯಲ್ಲಿ ಸಕಾಲದಲ್ಲಿ ಮಳೆಯಾಗದೆ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು,

ಇದರಿಂದ ಮುಂದಿನ ದಿನಗಳಲ್ಲಿ ನಾಡಿನ ಜನರನ್ನೂ ತೀವ್ರವಾಗಿ ಕಾಡಲಿದೆ. 

ಈಗಾಗಲೇ ಕರ್ನಾಟಕದಲ್ಲಿ ಒಟ್ಟು 40 ಲಕ್ಷ ಹೆಕ್ಟೇರ್ ವಿಸ್ತೀರ್ಣದ ಬೆಳೆ ಹಾನಿಯಾಗಿರುವುದು ವರದಿ ಆಗಿದೆ.

ಅಲ್ಲದೇ ಬೆಳೆ ಪ್ರಮಾಣದಲ್ಲಿ ಶೇ 50ರಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಭತ್ತ, ರಾಗಿ, ಜೋಳ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಳೆಗಳ ಪ್ರಮಾಣದಲ್ಲಿ ಹಾನಿಯಾಗಿದೆ.

ಈ ಎಲ್ಲ ಕಾರಣದಿಂದಾಗಿ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

Published On: 02 October 2023, 04:34 PM English Summary: Drought in the Karnataka : the price of food grains skyrocketed!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.