1. ಸುದ್ದಿಗಳು

“ಕೃಷಿ ಕ್ಷೇತ್ರದಲ್ಲಿ ಡ್ರೋನ್ ಪಾತ್ರ ಕ್ರಾಂತಿಕಾರಿಯಾಗಿದೆ”- DFI ಅಧ್ಯಕ್ಷ ಸ್ಮಿತ್ ಶಾ

Kalmesh T
Kalmesh T
Drones in agriculture land-DFI President Smith shah

ಕೃಷಿ ಕ್ಷೇತ್ರದಲ್ಲಿ ಡ್ರೋನ್‌ನ ಪಾತ್ರ ಮತ್ತು ಮಹತ್ವದ ಕುರಿತಾಗಿ ಡ್ರೋನ್ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಸ್ಮಿತ್ ಶಾ ಮಾಹಿತಿ ಹಂಚಿಕೊಂಡರು. ಕೃಷಿ ಜಾಗರಣ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Drone Federation Of India: ಇದು ಕೂಡ ರೈತ ಬಂಧುಗಳಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಮತ್ತು ಪ್ರಯೋಜನವನ್ನು ನೀಡಲಿದೆ. ಕೃಷಿ ಆಧುನೀಕರಣದ ಭಾಗವಾಗಿ ಕೃಷಿ ವಲಯದಲ್ಲಿ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವ ಅವಶ್ಯಕತೆಯಿದೆ, ಅದರಲ್ಲಿ ಪ್ರಮುಖವಾದದ್ದು ಕೃಷಿ ವಲಯದಲ್ಲಿ ಡ್ರೋನ್‌ಗಳ ಬಳಕೆಯಾಗಿದೆ ಎಂದರು.

ಡಿಎಫ್‌ಐನ ಅಧ್ಯಕ್ಷರಾದ ಸ್ಮಿತ್‌ ಶಾ ಅವರು ಕೃಷಿಯಲ್ಲಿ ಡ್ರೋನ್‌ಗಳ ಮಹತ್ವದ ಕುರಿತು ಮಾತನಾಡುತ್ತಿರುವುದು

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಡ್ರೋನ್ಗಳ ಪ್ರಾಮುಖ್ಯತೆ ಮುಂದಿನ ವರ್ಷಗಳಲ್ಲಿ ಮಹತ್ವದ್ದಾಗಿದ್ದು, ಕಾರ್ಮಿಕರ ಕೊರತೆಯನ್ನು ನೀಗಿಸುವ ಜೊತೆಗೆ ರೈತರ ಅಮೂಲ್ಯವಾದ ಸಮಯ, ನೀರು ಮತ್ತು ರಾಸಾಯನಿಕಗಳನ್ನು ಸರಿಯಾದ ಪ್ರಮಾಣದಲ್ಲಿ ಸಿಂಪಡಿಸಲು ಸಹಕಾರಿಯಾಗಲಿದೆ ಎಂದರು.

ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೃಷಿ ಕೆಲಸ

ಕೃಷಿ ಭೂಮಿಯಲ್ಲಿನ ಕೆಲಸಗಳನ್ನು ನಿರ್ವಹಿಸುವಲ್ಲಿ ಇತ್ತೀಚಿನ ಕೃಚಷಿ ವಲಯ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಕೃಷಿ ಕೂಲಿ ಕಾರ್ಮಿಕರ ಕೊರತೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಡ್ರೋನ್ಗಳು ರೈತರಿಗೆ ಸಹಾಯವಾಗಲಿವೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಸ್ಪ್ರೇಗಳನ್ನು ಮಾಡುವ ಮೂಲಕ ನೆರವಾಗಲಿವೆ ಎಂದರು.

ಡ್ರೋನ್‌ಗಳ ಕುರಿತು ಮಾಹಿತಿ ಪಡೆಯುತ್ತಿರುವ ಕೃಷಿ ಜಾಗರಣ ಮಾಧ್ಯಮದ ಪತ್ರಕರ್ತರು

ಸರ್ಕಾರದಿಂದ ಡ್ರೋನ್ ಸಬ್ಸಿಡಿ! (Drone Subsidy)

ಸರ್ಕಾರ ಕೃಷಿಯಲ್ಲಿ ಡ್ರೋನ್ಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟ್ರೋನ್ಗಳನ್ನು ಕೊಳ್ಳಲು ಬಯಸುವವರಿಗೆ ಸಬ್ಸಿಡಿಯನ್ನು ಸಹ ನೀಡುತ್ತಿವೆ ಯಾವುದೇ ಕಂಪನಿಗಳು, ಎನ್ಜಿಒಗಳು ಅಥವಾ ಸ್ವತಃ ರೈತರು, ಸಾರ್ವಜನಿಕರು ಯಾರೂ ಬೇಕಾದರೂ ಸರ್ಕಾರದಿಂದ ಸಬ್ಸಿಡಿಯನ್ನು ಸಹ ಪಡೆದುಕೊಳ್ಳಬಹುದು.

ಕೃಷಿ ವಿಶ್ವವಿದ್ಯಾಲಯಗಳಿಗೆ ಶೇ 100 ಸಹಾಯಧನ, ಕೃಷಿ ವಿಜ್ಞಾನ ಕೇಂದ್ರ, ಎಫ್‌ಪಿಒ, ಸಹಕಾರ ಸಂಘಗಳಿಗೆ ಶೇ 75, ಸಿಎಚ್ಸಿಗೆ ಶೇ 40 ಸಬ್ಸಿಡಿ, ಮಹತ್ವಾಕಾಂಕ್ಷಿ ಗ್ರಾಮೀಣ ಉದ್ಯಮಿಗಳಿಗೆ (ಸಣ್ಣ ಉದ್ಯಮ ಆರಂಭಿಸಲು ಬಯಸುವವರು) ಮತ್ತು ಅಗ್ರಿ ಇನ್ಫ್ರಾ ಫಂಡ್ ಅಡಿಯಲ್ಲಿ ಶೇ 90 ಬ್ಯಾಂಕ್ ಸಾಲ. ಮೂಲಕವೂ ರೈತರು ಡ್ರೋನ್ಗಳನ್ನು ಖರೀದಿಸಬಹುದು ಎಂದು ಹೇಳಿದರು.

ಡ್ರೋನ್ ಪೈಲಟ್ ಟ್ರೇನಿಂಗ್ ಕೋರ್ಸ್ (Drone pilot training Course)

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ಕೇವಲ 10 ನೇ ತರಗತಿಯನ್ನು ಪೂರ್ಣಗೊಳಿಸಿದ ರೈತರು ಅಥವಾ ಯುವಕರು, ಆಸಕ್ತಿ ಇರುವ ಯಾರಾದರೂ 5 ದಿನಗಳ ಡ್ರೋನ್ ಪೈಲಟ್ ಟ್ರೇನಿಂಗ್ ಕೋರ್ಸ್ನಲ್ಲಿ  ತರಬೇತಿಯನ್ನು ಪಡೆಯಬಹುದು.

ಡ್ರೋನ್ ಪೈಲಟ್ ಪರವಾನಗಿಯನ್ನು ಪಡೆಯಬಹುದು, ಇದರಿಂದ ಅವರು ಉದ್ಯೋಗವನ್ನು ಪಡೆಯಬಹುದು, ಅರ್ಹ ಆಕಾಂಕ್ಷಿಗಳು https://digitalsky.dgca.gov.in/home ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಡ್ರೋನ್ಗಳನ್ನು ಬಳಸಲು ಯಾವುದೇ ಇತರ ಪರವಾನಗಿಗಳು ಅಥವಾ ಪರವಾನಗಿಗಳ ಅಗತ್ಯವಿಲ್ಲ ಎಂದು ಅವರು ಬಹಿರಂಗಪಡಿಸಿದರು.

Published On: 20 September 2022, 05:10 PM English Summary: Drones in agriculture land-DFI President Smit shah

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.