1. ಸುದ್ದಿಗಳು

ಕೃಷಿ ಇಲಾಖೆಯಿಂದ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಹಾಗೂ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ

Kalmesh T
Kalmesh T
Driving program of new projects by agriculture department and awarding ceremony

ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ವಲಯದ ಅಭಿವೃದ್ಧಿ ಮತ್ತು ಕೃಷಿಕರ ನೆರವಿಗಾಗಿ ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ಇಂದು (ಜನವರಿ 31) ಧಾರವಾಡ ಕೃಷಿ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಜರುಗುವ ಮುಖ್ಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಹೊಸ ಯೋಜನೆಗಳಿಗೆ ಚಾಲನೆ ಮತ್ತು ಫಲಾನುಭವಿಗಳಿಗೆ ಸಹಾಯಧನ ವಿತರಿಸಲಿದ್ದಾರೆ.

ಫೆಬ್ರುವರಿ 22ರಿಂದ 25ರವರೆಗೆ “ರಾಷ್ಟ್ರೀಯ ತೋಟಗಾರಿಕೆ ಮೇಳ – 2023” ಆಯೋಜನೆ

ರೈತ ಶಕ್ತಿ: ರಾಜ್ಯದ ಎಲ್ಲಾ ವರ್ಗದ ರೈತರಿಗೆ ಪ್ರತಿ ಎಕರೆಗೆ ರೂ.250 ಗಳಂತೆ ಗರಿಷ್ಠ 05 ಎಕರೆಗೆ ರೂ.1250 ಗಳನ್ನು ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹಕ್ಕೆ ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿತಗೊಳಿಸಲು ಡೀಸೆಲ್‍ಗೆ 51.80 ಲಕ್ಷ ಫಲಾನುಭವಿಗಳಿಗೆ ರೂ.383.15 ಕೋಟಿಗಳ ಸಹಾಯಧನ ನೀಡಲಾಗಿದೆ.

ಭೂರಹಿತ ಕೃಷಿ ಕಾರ್ಮಿಕ ಹಾಗೂ ರೈತರ ಮಕ್ಕಳಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ: ರೈತರ, ಕೃಷಿ ಕಾರ್ಮಿಕರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 8 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹಾಗೂ 10ನೇ ತರಗತಿ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರೂ.2,500 ರಿಂದ ರೂ.11,000 ಗಳ ವರೆಗೆ ಒಟ್ಟು 4.55 ಲಕ್ಷ ಮಕ್ಕಳಿಗೆ ರೂ.241.86 ಕೋಟಿಗಳಷ್ಟು ವಿದ್ಯಾರ್ಥಿ ವೇತನದ ನೇರ ನಗದು ವರ್ಗಾವಣೆ ಮಾಡಲಾಗಿದೆ.

ಈ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಹಳೆ ಪಿಂಚಣಿ ಮರು ಜಾರಿಗೆ ಸುಪ್ರೀಂ ಕೋರ್ಟ್‌ ತೀರ್ಪು!

ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ: ರಾಜ್ಯದ ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿದ ರೈತರಿಗೆ 9 ಕೃಷಿ ಪಂಡಿತ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು 23 ಕೃಷಿ ಪ್ರಶಸ್ತಿಗಳನ್ನು ಪ್ರದಾನಿಸಿ ಸನ್ಮಾನಿಸಲಾಗುವುದು.

ಕೃಷಿ ಸಂಜೀವಿನಿ: ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಪ್ರಮುಖವೆನಿಸಿರುವ ಮಣ್ಣು ಮತ್ತು ನೀರಿನ ಪರೀಕ್ಷೆ, ಕೀಟ ಮತ್ತು ರೋಗಗಳನ್ನು ಪತ್ತೆಹಚ್ಚುವಿಕೆ ಹಾಗೂ ನಿಯಂತ್ರಣಾ ಕ್ರಮಗಳ ಕುರಿತು ಮಾಹಿತಿಯನ್ನು ರೈತರ ಕ್ಷೇತ್ರ ಭೇಟಿಯ ಮೂಲಕ ನೀಡುವುದಕ್ಕೆ ರೂ.11.52 ಕೋಟಿ ಅನುದಾನದಲ್ಲಿ 64 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳ ಲೋಕಾರ್ಪಣೆ ಮಾಡಲಾಗಿದೆ.

ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ: ನೈಸರ್ಗಿಕ ಕೃಷಿಯಲ್ಲಿ ರೈತರನ್ನು ಪ್ರೇರೆಪಿಸಲು ಹಾಗೂ ತೊಡಗಿಸಿಕೊಳ್ಳಲು ರಾಜ್ಯದ ಎಲ್ಲಾ ಕೃಷಿ, ತೋಟಗಾರಿಕಾ ವಿಶ್ವವಿದ್ಯಾನಿಲಯಗಳಲ್ಲಿ ತಲಾ 1000 ಎಕರೆ ಪ್ರದೇಶದಲ್ಲಿ ಸಂಶೋಧನೆ ಹಾಗೂ ಸಹಾಯಧನಕ್ಕಾಗಿ ರೂ.10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಭಾರತೀಯ ಅಂಚೆ ಇಲಾಖೆಯಲ್ಲಿವೆ 40,889 ಭರ್ಜರಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಕೆಗೆ ಫೆ.16 ಕೊನೆ ದಿನ

ಡಾ|| ಎಸ್.ವಿ.ಪಾಟೀಲ್ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಲೋಕಾರ್ಪಣೆ: ಕಾರ್ಯಕ್ರಮದಲ್ಲಿ ಡಾ|| ಎಸ್.ವಿ.ಪಾಟೀಲರು ದೇಶ ಕಂಡ ಶ್ರೇಷ್ಠ ಕೃಷಿ ವಿಜ್ಞಾನಿಗಳು ಹಾಗೂ ಗಾಂಧಿವಾದಿಗಳು. ಇವರು ಜನಿಸಿ ದಿನಾಂಕ 25-02-2023 ಕ್ಕೆ ನೂರು ವರುಷಗಳು ತುಂಬುವ ಪ್ರಯುಕ್ತ ಇವರ ಉತ್ತಮ ಸಾಧನೆಯನ್ನು ಗಮನಿಸಿ ಕರ್ನಾಟಕ ರಾಜ್ಯ ಸರಕಾರವು ಇವರ ಹೆಸರಿನಲ್ಲಿ ಪೀಠವನ್ನು ಸ್ಥಾಪಿಸಿದ್ದು, ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ಕೃಷಿ ಇಲಾಖೆಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ವಿಜೇತರು :

2018-19 ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿ ವಿಜೇತರು: ಪ್ರಥಮ ಸ್ಥಾನ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ವೆಂಕಪ್ಪ ವಿಠ್ಠಲಪ್ಪ ದೊರೆಗೋಳ, ದ್ವಿತೀಯ ಸ್ಥಾನ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೂದಿಹಾಳದ ಸುರೇಶ ವಿಶ್ವನಾಥ ಪಾಟೀಲ, ತೃತೀಯ ಸ್ಥಾನ ಗದಗ ಜಿಲ್ಲೆಯ ಮುಂಡಗರಿ ತಾಲೂಕಿನ ಬೀದರಳ್ಳಿಯ ಹೇಮಗಿರೀಶ್ ಗುರುಪಾದಪ್ಪ ಹಾವಿನಾಳ,

2020-21 ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿ ವಿಜೇತರು: ಪ್ರಥಮ ಸ್ಥಾನ ಕೋಲಾರ ಜಿಲ್ಲೆಯ ವೇಮಗಲ್‍ದ ಕೃಷ್ಣಾಪುರ ತಾಲೂಕಿನ ಕೆ.ಎಂ. ರಾಜಣ್ಣ, ದ್ವಿತೀಯ ಸ್ಥಾನ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ತುಕಾರಾಮ ಮಾ ನಾಯಕ, ತೃತೀಯ ಸ್ಥಾನ ಮೈಸೂರು ಜಿಲ್ಲೆಯ ಗೋಪಾಲಪುರ ಗ್ರಾಮದ ಸಿ. ದಿಲೀಪ್.

2018-19 ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ (ಬೆಳೆವಾರು) ವಿಜೇತರು : ಮುಂಗಾರಿನಲ್ಲಿ ಭತ್ತದ ಬೆಳೆ ಪ್ರಥಮ ಸ್ಥಾನವನ್ನು ಶಿಕಾರಿಪುರದ ಹೆಚ್.ಸಿ. ವಿಜಯಕುಮಾರ, ರಾಗಿ ಬೆಳೆ ಪ್ರಥಮ ಸ್ಥಾನವನ್ನು ಹೆಚ್.ಡಿ. ಕೋಟೆಯ ಪುಟ್ಟಸಿದ್ದಯ್ಯ, ತೊಗರಿ ಬೆಳೆ ಪ್ರಥಮ ಸ್ಥಾನವನ್ನು ಗೌರಿಬಿದನೂರು ತಾಲೂಕು ಕಾಮನಹಳ್ಳಿಯ ರಾಮಕೃಷ್ಣ ರಾಜಪ್ಪ ಗುಂತಮಗಡು, ಸೋಯಾಅವರೆ ಪ್ರಥಮ ಸ್ಥಾನ ಪಡೆದ ಕಲಘಟಗಿ ತಾಲೂಕಿನ ನಲ್ಲಿಹರವಿ ಗ್ರಾಮದ ಕಲ್ಲನಗೌಡ ಪಾಟೀಲ ಮತ್ತು ಹಿಂಗಾರಿನಲ್ಲಿ ಕಡಲೆಬೆಳೆ ಪ್ರಥಮಸ್ಥಾನವನ್ನು ಸವದತ್ತಿ ತಾಲೂಕಿನ ಹರಳಕಟ್ಟಿ ಗ್ರಾಮದ ಮಹಾಂತೇಶಗೌಡ ಯಲ್ಲಪ್ಪಗೌಡ ರಾಯನಗೌಡರ.

2019-20 ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ (ಬೆಳೆವಾರು) ವಿಜೇತರು : ಮುಂಗಾರಿನಲ್ಲಿ ಭತ್ತದ ಬೆಳೆ ಪ್ರಥಮ ಸ್ಥಾನವನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಅಂಡಿ ದಾನಪ್ಪ, ರಾಗಿ ಬೆಳೆ ಪ್ರಥಮ ಸ್ಥಾನವನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯ ಗೋಪಾಲನಾಯ್ಕ ವಾಸಪ್ಪನದೊಡ್ಡಿ, ಶೇಂಗಾ ಬೆಳೆ ಪ್ರಥಮ ಸ್ಥಾನ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲೂಕಿನ ಬೆಳಗುತ್ತಿ ಗ್ರಾಮದ ರಮೇಶಪ್ಪ ಕೆ., ತೊಗರಿ ಬೆಳೆ ಪ್ರಥಮ ಸ್ಥಾನವನ್ನು ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಆರ್. ಮಂಜುನಾಥ, ಹಿಂಗಾರಿನಲ್ಲಿ ಜೋಳ ಪ್ರಥಮ ಸ್ಥಾನವನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿಯ ಮೆಹಬೂಬ್ ಇಬ್ರಾಹಿಂ ಅಂತರಗಂಗಿ, ಹಿಂಗಾರಿನಲ್ಲಿ ಕಡಲೆ ಬೆಳೆಯ ಪ್ರಥಮ ಸ್ಥಾನವನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯ ಶಾಂತವ್ವ ಶಿವಪ್ಪ ಅಥಾಲಟ್ಟಿ.

2020-21 ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿ (ಬೆಳೆವಾರು) ವಿಜೇತರು: ಮುಂಗಾರಿನಲ್ಲಿ ಭತ್ತದ ಬೆಳೆ ಪ್ರಥಮ ಸ್ಥಾನವನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನ ಕೊಪ್ಪಲು ಗ್ರಾಮದ ಸಿ.ಡೊ. ಶಿವರಾಮು, ರಾಗಿ ಬೆಳೆ ಪ್ರಥಮ ಸ್ಥಾನವನ್ನು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಚಿಕ್ಕಗಂಡಸಿ ಗ್ರಾಮದ ಗಂಗಯ್ಯ, ಮುಸುಕಿನಜೋಳ ಬೆಳೆ ಪ್ರಥಮ ಸ್ಥಾನವನ್ನು ಚಿಕ್ಕಬಳ್ಳಾಪೂರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹನುಮಂತಪುರದ ಎಚ್.ಸಿ. ನಾರಾಯಣಗೌಡ, ತೊಗರಿ ಬೆಳೆ ಪ್ರಥಮ ಸ್ಥಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅನುಪಲ್ಲಿ ಗ್ರಾಮದ ಎ.ಸಿ. ಶಿವರಡ್ಡಿ.

2021-22 ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿ (ಬೆಳೆವಾರು) ವಿಜೇತರು: ಮುಂಗಾರಿನಲ್ಲಿ ಭತ್ತದ ಬೆಳೆ ಪ್ರಥಮ ಸ್ಥಾನವನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕುಶಾಲನಗರದ ಟಿ.ಜಿ.ಎ. ಕಾಳಪ್ಪ ಬಿನ್ ಜೋಯಪ್ಪ ಹುದುಗೂರು, ಮತ್ತು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಓತೋಳ್ಳಿ ಜಾಂಬೋಟಿಯ ಬೈರು ರಾಮಚಂದ್ರ ಮುತುಗೆಕರ್ ಬಿನ್ ರಾಮಚಂದ್ರ. ಶೇಂಗಾ ಬೆಳೆಯ ಪ್ರಥಮ ಸ್ಥಾನ ಚಿಕ್ಕಬಳ್ಳಾಪರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿಯ ವೆಂಕಟೇಶಪ್ಪ, ರಾಗಿ ಬೆಳೆ ಪ್ರಥಮ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮನಹಳ್ಳಿಯ ನರಸಿಂಹಮೂರ್ತಿ, ಮುಸುಕಿನ ಜೋಳ ಪ್ರಥಮ ಸ್ಥಾನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮನಹಳ್ಳಿಯ ಬಸವರಾಜ ಪಕೀರಪ್ಪ ಹಾವೇರಿ, ಸೋಯಾ ಅವರೆ ಬೆಳೆ ಪ್ರಥಮ ಸ್ಥಾನವನ್ನು ಧಾರವಾಡ ಜಿಲ್ಲೆಯ ಮರೇವಾಡ ಗ್ರಾಮದ ಪವನ ಬಸವರಾಜ ಕುಂದಗೋಳ, ತೊಗರಿ ಬೆಳೆ ಪ್ರಥಮ ಸ್ಥಾನವನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ವಿರುಪಾಕ್ಷಪ್ಪ, ಹಿಂಗಾರಿ ಜೋಳ ಪ್ರಥಮಸ್ಥಾನವನ್ನು ಬೆಳಗಾವಿ ಜಿಲ್ಲೆಯ ಬೂದುನೂರು ಗ್ರಾಮದ ಯಲ್ಲವ್ವ ಹಣಮಂತ ಹಡಗಿನಾಳ

Published On: 31 January 2023, 11:03 AM English Summary: Driving program of new projects by agriculture department and awarding ceremony

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.