1. ಸುದ್ದಿಗಳು

ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ ಕುಡಿಯಲು ಮನವಿ

ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲಗಳಾದ ಭೀಮಾ ಹಾಗೂ ಬೆಣ್ಣೆತೊರಾ ನದಿಗಳ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ, ನದಿಗಳಿಗೆ ಮೇಲ್ಭಾಗದಿಂದ ಮಳೆಯ ನೀರು ಹರಿದು ಬರುತ್ತಿದೆ.  ಜಲಮಂಡಳಿಯು ನೀರನ್ನು ಶುದ್ಧೀಕರಿಸಿ, ಸೂಪರ ಕ್ಲೋರಿನೇಶನ್ ಮಾಡಿ ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದೆ. ಆದಾಗ್ಯೂ ಕಲಬುರಗಿ ನಗರದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ ಆರಿಸಿ  ಸೋಸಿ ಕುಡಿಯಬೇಕು. ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲಬುರಗಿ ನೀರು ಸರಬರಾಜು ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪ್ರವೇಶ ಪ್ರಕ್ರಿಯೆ ಆರಂಭ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿ   ಕಲಬುರಗಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಈ ಕೆಳಕಂಡ ವಿಶೇಷ ಶಾಲೆಗಳಲ್ಲಿ 2021-22 ನೇ ಸಾಲಿಗೆ ಈಗಾಗಲೇ ಜೂನ್ 15 ರಿಂದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ಎಂದು ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಖಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳಾದ ಕಲಬುರಗಿ ಸರ್ಕಾರಿ ಶ್ರವಣದೋಷ ಬಾಲಕರ ವಸತಿ ಶಾಲೆಯಲ್ಲಿ (1 ರಿಂದ 7ನೇ ತರಗತಿ) ಹಾಗೂ ಕಲಬುರಗಿಯ  ಸರ್ಕಾರಿ ಅಂಧ ಬಾಲಕರ ಪ್ರೌಢ ವಸತಿ ಶಾಲೆ (1 ನೇ ತರಗತಿಯಿಂದ 10ನೇ ತರಗತಿಗೆ) ಪ್ರವೇಶ ಪಡೆಯಬಹುದಾಗಿದೆ.

ಅನುದಾನಿತ ಶಾಲೆಗಳಾದ ಕಲಬುರಗಿಯ ಶ್ರೀಮತಿ ಅಂಬೂಬಾಯಿ ಅಂಧ ಬಾಲಕಿಯರ ವಸತಿ ಶಾಲೆಯಲ್ಲಿ (1 ರಿಂದ 10ನೇ ತರಗತಿ) ಹಾಗೂ ಕಲಬುರಗಿಯ ಅಂಜನಾ ಶ್ರವಣದೋಷ ಹೆಣ್ಣು ಮಕ್ಕಳ ವಸತಿ ಶಾಲೆ  (1 ರಿಂದ 10ನೇ ತರಗತಿ) ಯಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಶಿಶುಕೆಂದ್ರೀಕೃತ ಶಾಲೆಗಳಾದ ಕಲಬುರಗಿಯ ಪರಿವರ್ತನಾ ಬುದ್ದಿ ಮಾಂದ್ಯ ಮಕ್ಕಳ ಹಗಲು ಯೋಗಕ್ಷೇಮ ಶಾಲೆಯಲ್ಲಿ (18 ವರ್ಷದೊಳಗಿನವರು ಡೇ ಕೇರ್ ಸೆಂಟರ್) ಪ್ರವೇಶ ಪಡೆಯಬಹುದಾಗಿದೆ. ಕಲಬುರಗಿಯ ಸಿದ್ಧಾರ್ಥ ಶ್ರವಣದೋಷ ಬಾಲಕ ಮತ್ತು ಬಾಲಕಿಯರ ಪ್ರೌಢ ವಸತಿ ಶಾಲೆ ಕಲಬುರಗಿ (8 ರಿಂದ 10ನೇ ತರಗತಿ) ಹಾಗೂ ಅಫಜಲಪೂರದ ವಿ.ಕೆ.ಜಿ. ಅಂಧ ಬಾಲಕ ಮತ್ತು ಬಾಲಕಿಯರ ಪ್ರೌಢ ವಸತಿ ಶಾಲೆ (1 ರಿಂದ 10ನೇ ತರಗತಿ) ಯಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಮೇಲ್ಕಂಡ ಎಲ್ಲಾ ಶಾಲೆಗಳು ಬುದ್ದಿ ಮಾಂದ್ಯ, ಅಂಧ ಮತ್ತು ಶ್ರವಣದೋಷ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರಿಗೆ  ಪ್ರವೇಶ, ಊಟ, ವಸತಿ, ಪುಸ್ತಕ, ಬಟ್ಟೆ ಉತ್ತಮ ಮತ್ತು ಗುಣ ಮಟ್ಟದ ಶಿಕ್ಷಣ ಉಚಿತವಾಗಿ ದೋರೆಯಲಿದೆ.   ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ (ವಿಕಲಚೇತನರ ಸಹಾಯವಾಣಿ) 08472-235222 ಗೆ ಸಂಪರ್ಕಿಸಲು ಕೋರಲಾಗಿದೆ.

Published On: 17 June 2021, 11:09 PM English Summary: Drink boil water

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.