1. ಸುದ್ದಿಗಳು

KPSC, FDA ಹಾಲ್ ಟಿಕೆಟ್ ಬಿಡುಗಡೆ

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ ಸಹಾಯಕ/ ಪ್ರಥಮ ವಿಭಾಗದ ಸಹಾಯಕ ನೇಮಕಾತಿ ಪರೀಕ್ಷೆಯು ಸಮೀಪಿಸಿದ್ದು, ಹಾಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಆನ್ಲೈನ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ತಮ್ಮ ಪ್ರವೇಶ ಪತ್ರವನ್ನು ಪರಿಶೀಲಿಸಿ ಡೌನ್ಲೋಡ್ ಮಾಡಿಕೊಳ್ಳಬೇಕಾಗಿ ವಿನಂತಿ.

 ಈ ಪರೀಕ್ಷೆಗಳು ಜನೆವರಿ 23 ಹಾಗೂ 24ರಂದು ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ. ಈ ಪರೀಕ್ಷೆಗಳು ಹಿಂದೆ ನಡೆಯಬೇಕಾಗಿತ್ತು ಆದರೆ ಕೋರೋಣ ಹಾಗೂ ಇನ್ನಿತರ ಕಾರಣಗಳಿಂದಾಗಿ ಪರೀಕ್ಷೆಯ ಮುಂದೂಡುತ್ತಲೇ ಬಂದಿತ್ತು ಆದರೆ ಇದೀಗ ಅದಕ್ಕೊಂದು ತೆರೆದಿದ್ದು 23 ಹಾಗೂ 24ರಂದು ಪರೀಕ್ಷೆಗಳು ನಡೆಯಲಿದ್ದು ಅದಕ್ಕಾಗಿ ಪ್ರವೇಶ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.  ಆದ್ದರಿಂದ ಅರ್ಜಿ ಸಲ್ಲಿಸಿ ದಂತ ಅಭ್ಯರ್ಥಿಗಳು ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

 ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

-1. ಕೆಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ - kpscrecruitment.in

-2.ಮುಖಪುಟದಲ್ಲಿ, ಕೆಪಿಎಸ್ಸಿ ಸಹಾಯಕ / ಪ್ರಥಮ ವಿಭಾಗದ ಸಹಾಯಕ ಹಾಲ್ ಟಿಕೆಟ್ ಲಿಂಕ್ ಅನ್ನು ಕ್ಲಿಕ್ ಮಾಡಿ

-3. ಇದು ವೆಬ್ಸೈಟ್ನ ಮತ್ತೊಂದು ಪೇಜಿಗೆ ನಿಮ್ಮನ್ನು ಕರೆದೊಯ್ಯುತ್ತದೆ.

-4.  ಅಲ್ಲಿ ನಿಮಗೆ ನೀಡಿದಂತಹ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಅನ್ನು ನೀವು ನಮೂದಿಸಬೇಕಾಗುತ್ತದೆ.

-5.  ಅಲ್ಲಿ ನೀವು ನಿಮ್ಮ ಪ್ರವೇಶ ಪತ್ರವನ್ನು ಪರಿಶೀಲಿಸಿ ನಂತರ ಡೌನ್ಲೋಡ್ ಮಾಡಿಕೊಳ್ಳಬೇಕು.

 

 ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಶುಭ ಹಾರೈಕೆಗಳು.

Published On: 20 January 2021, 01:45 PM English Summary: download admission ticket of kpsc/fda

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.